Wednesday, 27th November 2024

ಕಾನೂನಿಗೆ ಗೌರವಿಸಿ ನ್ಯಾಯ ಪಡೆಯಲು ಮನವಿ: ನ್ಯಾ.ಸನತ

ಸಿಂಧನೂರು: ಪ್ರತಿಯೊಬ್ಬರು ಕಾನೂನಿನ ನಿಯಮಗಳನ್ನು ಪಾಲಿಸಿ ನ್ಯಾಯ ಪಡೆದುಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ವಿ. ಸನತ ಹೇಳಿದರು.

ವಕೀಲರ ಸಂಘದ ಕಾರ್ಯಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ತಾಲೂಕು ನ್ಯಾಯವಾದಿಗಳ ಸಂಘ ಇವರ ಸಹಯೋಗದಲ್ಲಿ ರಾಷ್ಟ್ರೀಯ ಕಾನೂನು ದಿನಾಚರಣೆ ಕಾರ್ಯಕ್ರಮದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು – ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಕಾನೂನು ಸೇವಾ ಅಡಿಯಲ್ಲಿ ಬರುವಂತ ಅನೇಕ ಕಾಯ್ದೆಗಳ ಬಗ್ಗೆ ನಗರ ಹಾಗೂ ಗ್ರಾಮೀಣ ಜನರಿಗೆ ವಕೀಲರು ತಿಳಿಹೇಳಿ ಅವರಿಗೆ ನ್ಯಾಯ ಕೊಡಿಸುವ ಕೆಲಸ ಆಗಬೇಕು ಹಾಗೂ ಸುಪ್ರೀಂಕೋರ್ಟ್ ಆದೇಶದಂತೆ ಹೆಣ್ಣುಮಕ್ಕಳಿಗೂ ಆಸ್ತಿ ಪಾಲಾಗುವ ನಿಯಮವಿದೆ ಕೆಲ ನಿಬಂಧನೆಗಳ ಪ್ರಕಾರ ಅದನ್ನು ತಿಳಿಸುವ ಕೆಲಸ ಸಂಘದವರಿಂದ ಆಗಬೇಕು ಎಂದರು.

ವಕೀಲರ ಸಂಘದ ತಾಲೂಕು ಅಧ್ಯಕ್ಷ ಎನ್. ರಾಮನಗೌಡ ಮಾತನಾಡಿ ಹಿರಿಯರ ಸಹಾಯದಿಂದ ಅನೇಕ ಕಾರ್ಯಕ್ರಮಗಳು ಕಾನೂನಿನ ತಿಳುವಳಿಕೆಯ ಬಗ್ಗೆ ಸಾರ್ವಜನಿಕರಿಗೆ ಮನದಟ್ಟು ಮಾಡುತ್ತಾ ಬಂದಿದ್ದೇವೆ ಇದನ್ನು ಪ್ರತಿಯೊಬ್ಬರು ಅರಿತು ಕೊಂಡು ಕಾನೂನು ನೇಮಗಳು ಪಾಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕ ನಾಗರಾಜ್ ಬಿ. ವಕೀಲರ ಸಂಘದ ಕಾರ್ಯದರ್ಶಿ ಸುರೇಶ್ ರೆಡ್ಡಿ ಚನ್ನಳ್ಳಿ ಆನಂದ್ ಕುಮಾರ್ ಗೊರೆಬಾಳ ಸಾಯಕ ಸರಕಾರಿ ಅಭಿಯೋಜಕ ಎಂ ಎಚ್ ಕೆ ಯಾದವ್ ಇತರರು ಇದ್ದರು.