ಬೆಂಗಳೂರು: ಬೆಂಜ್ ಕಾರ್ ಡಿಕ್ಕಿ ಹೊಡೆದ (Road Accident) ಪರಿಣಾಮ ಸಾಫ್ಟ್‌ವೇರ್ ಇಂಜಿನಿಯರ್ (Software Engineer) ಮೃತಪಟ್ಟ ಘಟನೆ ಬೆಂಗಳೂರು -ಮೈಸೂರು ರಸ್ತೆಯ (Bengaluru news) ಕೆಂಗೇರಿ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.
ಬಸವೇಶ್ವರನಗರ ನಿವಾಸಿ, ಸಾಫ್ಟ್‌ವೇರ್ ಇಂಜಿನಿಯರ್ ಸಂಧ್ಯಾ(30) ಮೃತಪಟ್ಟವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಜ್ ಕಾರ್ ಚಾಲಕ ನಾಗರಭಾವಿ ನಿವಾಸಿ ಧನುಷ್ ನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂಧ್ಯಾ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಕೆಂಗೇರಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರ್ ಅನ್ನು ಜಪ್ತಿ ಮಾಡಿದ್ದಾರೆ. ಧನುಷ್‌ನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಮದ್ಯ ಸೇವಿಸಿರುವುದು ಧೃಡಪಟ್ಟಿದೆ. ಮದ್ಯದ ಅಮಲಿನಲ್ಲಿ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಕಾರ್ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಗೂಳಿ ತಿವಿದು ಯುವಕ ಸಾವು
ಕಾರವಾರ: ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ದೀಪಾವಳಿ ಹೋರಿ ಬೆದರಿಸುವ ಸ್ಪರ್ಧೆ ವೀಕ್ಷಿಸುತ್ತಿದ್ದ ವೇಳೆಯಲ್ಲಿ ಹೋರಿ ತಿವಿದು ಯುವಕ ಮೃತಪಟ್ಟಿದ್ದಾರೆ. ಪರಮೇಶ ಸಿದ್ದಪ್ಪ ಹರಿಜನ(21) ಮೃತಪಟ್ಟ ಯುವಕ. ದೀಪಾವಳಿ ಬಲಿಪಾಡ್ಯದ ಪ್ರಯುಕ್ತ ಚಿಗಳ್ಳಿಯಲ್ಲಿ ಶನಿವಾರ ಹೋರಿ ಬೆದರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸುತ್ತಮುತ್ತಲಿನ ಭಾಗಗಳಿಂದ ನೂರಾರು ಹೋರಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಹೋರಿಗಳ ಓಟವನ್ನು ವೀಕ್ಷಿಸುತ್ತಿದ್ದ ಪರಮೇಶನ ಮೇಲೆ ಏಕಾಏಕಿ ದಾಳಿ ಮಾಡಿದ ಹೋರಿಯೊಂದು ಎದೆಯ ಭಾಗಕ್ಕೆ ತಿವಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಪರಮೇಶನನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಇದನ್ನೂ ಓದಿ: Tragic Incident: 3 ದಿನಗಳಲ್ಲಿ 10 ಆನೆಗಳ ದಾರುಣ ಸಾವು – ವಿಷವಿಕ್ಕಿ ಗಜಪಡೆಗಳನ್ನು ಕೊಂದರೇ ದುರುಳರು..!?