ರಾಮನಗರ : ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ (Bengaluru Mysuru Highway) ಕೆಎಸ್ಆರ್ಟಿಸಿ ಬಸ್ಸು ಹಾಗೂ ಕಾರಿನ ಮಧ್ಯ ಭೀಕರ ಅಪಘಾತ (Road Accident) ನಡೆದಿದ್ದು, ಅಪಘಾತದಲ್ಲಿ ದಂಪತಿ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ಶಿವಾಜಿ ನಗರದ ಮೂವರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ದಂಪತಿ ಹಾಗೂ ಚಾಲಕ ಮೃತಪಟ್ಟಿದ್ದಾರೆ. ಲಿಯಾಕತ್ (48) ಅಸ್ಮ (38) ನೂರ್ (46) ಎನ್ನುವವರು ಮೃತಪಟ್ಟವರು ಎಂದು ಗುರುತಿಸಲಾಗಿದೆ. ರಾಮನಗರ ತಾಲೂಕಿನ ಸಂಗಮದೊಡ್ಡಿ ಬಳಿ ದುರ್ಘಟನೆ ನಡೆದಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಕಾರು ಹೋಗುತ್ತಿತ್ತು. ಡಿವೈಡರ್ ಬಳಿ ಸೂಚನಾ ಫಲಕ ಇಲ್ಲದ್ದರಿಂದ ಈ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನುಜ್ಜು ಗುಜ್ಜಾಗಿದೆ.
ವೇಗವಾಗಿ ಹೋಗುತ್ತಿದ್ದ ಕಾರು ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬಳಿಕ ಕೆಎಸ್ಆರ್ಟಿಸಿ ಬಸ್‌ಗೆ ಹೋಗಿ ಗುದ್ದಿದೆ. ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ದಂಪತಿ, ಕಾರು ಚಾಲಕ ಹೀಗೆ ಮೂವರು ಸಾವನ್ನಪ್ಪಿದ್ದಾರೆ. ಅಪಘಾತದ ಕುರಿತಂತೆ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Murder Case: ಪ್ರೇಯಸಿ ಹತ್ಯೆ ಮಾಡಿ ಪೀಸ್ ಪೀಸ್ ಮಾಡಲು ಮುಂದಾಗಿದ್ದ ಪ್ರಿಯಕರ!
ಬೆಂಗಳೂರು : ನಿನ್ನೆ ಬೆಂಗಳೂರಿನ ಇಂದಿರಾನಗರದ ಅಪಾರ್ಟ್ಮೆಂಟ್ ನಲ್ಲಿ ಅಸ್ಸಾಂ ಮೂಲದ ಯುವತಿಯನ್ನು ಕೇರಳ ಮೂಲದ ಯುವಕನೊಬ್ಬ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಒಂದು ದಿನ ಆರೋಪಿ ಶವದ ಜೊತೆಗೆ ಕಳೆದಿದ್ದಾನೆ. ಶವವನ್ನು ಆರೋಪಿ ಪೀಸ್ ಪೀಸ್ ಮಾಡಿ ವಿಲೇವಾರಿ ಮಾಡುವ ಪ್ಲಾನ್ ಹಾಕಿಕೊಂಡಿದ್ದ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇಂದಿರಾನಗರದ ಅಪಾರ್ಟ್‌ಮೆಂಟ್‌ನಲ್ಲಿ ಅಸ್ಸಾಂ ಮೂಲದ ಮಾಯ ಗೊಗಾಯ್ ಕೊಲೆಯಾದ ಯುವತಿ ಎಂದು ತಿಳಿದುಬಂದಿದೆ. ದುಷ್ಕರ್ಮಿಯು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಹತ್ಯೆಗೊಳಗಾದ ಯುವತಿ ಹೆಚ್‌ಎಸ್‌ಎಆರ್ ಲೇಔಟ್‌ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೇರಳ ಮೂಲಕ ಯುವಕ ಆರವ್ ಅರ್ನಿ ನೊಂದಿಗೆ ಪರಿಚಯವಾಗಿ ನಂತರ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಯುವತಿ ಮಾಯಾ ಗೊಗೋಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಸಿಸಿಟಿವಿ ದೃಶ್ಯ ದೊರೆತಿದ್ದು, ನವೆಂಬರ್ 23 ರಂದು ಮಧ್ಯಾಹ್ನ ಸರ್ವಿಸ್ ಅಪಾರ್ಟ್ ಮೆಂಟ್‌ಗೆ ಮಾಯಾ ಆಗಮಿಸಿದ್ದಾಳೆ. ಅಪಾರ್ಟ್ ಮೆಂಟ್‌ಗೆ ಮಾಯಾ ಗೊಗೋಯ್ ಹಾಗೂ ಆರವ್ ಅರ್ನಿ ಇಬ್ಬರೂ ಬಂದಿದ್ದಾರೆ. ಇವರಿಬ್ಬರು ಒಟ್ಟಿಗೆ ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನವೆಂಬರ್ 24ರಂದೇ ಮಾಯಳನ್ನು ಕೊಲೆ ಮಾಡಿರೊ ಶಂಕೆ ವ್ಯಕ್ತವಾಗುತ್ತಿದೆ. ಕೊಲೆ ಬಳಿಕ ಅದೇ ರೂಮ್ ನಲ್ಲಿಯೇ ಉಳಿದುಕೊಂಡಿದ್ದ ಆಸಾಮಿ, ಅಲ್ಲಿಯೇ ಕೂತು ಸಿಗರೇಟ್ ಸೇದಿದ್ದಾನೆ. ಮೃತದೇಹ ಜೊತೆಯಲ್ಲೇ ಕಾಲ ಕಳೆದಿದ್ದಾನೆ. ನಂತರ ಇಂದು ಬೆಳಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಆರೋಪಿ ತೆರಳಿದ್ದಾನೆ. ಆರೋಪಿಗೆ ಮೃತದೇಹವನ್ನು ಪೀಸ್ ಮಾಡೊ ಪ್ಲಾನ್ ಇತ್ತಾ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ.
ಆರೋಪಿ ಆರವ್ ಅರ್ನಿ ಮಾಯಾ ಕೊಲೆ ಮಾಡಿದ ಬಳಿಕ, ಒಂದು ದಿನ ಮೃತದೇಹದ ಜೊತೆಗೆ ಕಾಲ ಕಳೆದಿದ್ದ. ಹಾಗಾಗಿ ಮೃತದೇಹ ಪೀಸ್ ಪೀಸ್ ಮಾಡಿರುವ ಪ್ಲಾನ್ ಮಾಡಿದ್ದ ಎಂಬ ಶಂಕೆ ಈಗ ಪೊಲೀಸರಿಗೆ ಕಾಡುತ್ತಿದೆ. ಕೊನೆಗೆ ಪ್ಲಾನ್ ಫೇಲ್ ಆಗಿ ಮೃತದೇಹ ಬಿಟ್ಟು ಪಾರಾರಿಯಾಗಿದ್ದಾನೆ ಎಂದು ಇಂದಿರಾನಗರದ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.