Thursday, 28th November 2024

ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಥಾಕ್ಕೆ ಜಾಲನೆ

ಪಾವಗಡ ಮಧುಗಿರಿ ಡಿ.ವೈ.ಎಸ್.ಪಿ ಕೆ.ಜಿ. ರಾಮಕೃಷ್ಣಪ್ಪ ರವರ ನೇತೃತ್ವ

ಪಾವಗಡ: ತುಮಕೂರು ಜಿಲ್ಲಾ ಪೊಲೀಸ್, ಮಧುಗಿರಿ ಉಪ ವಿಭಾಗ, ಪಾವಗಡ ಪೊಲೀಸ್ ಇಲಾಖೆ ವತಿಯಿಂದ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ಜಾಥಾ ಕಾರ್ಯಕ್ರಮಕ್ಕೆ ಇಂದು ಪೊಲೀಸ್ ಠಾಣೆ ಮುಂಭಾಗ  ಮಧುಗಿರಿ ಉಪ ಪೊಲೀಸ್ ಅಧೀಕ್ಷಕರಾದ  ಕೆ ಜಿ ರಾಮಕೃಷ್ಣ  ಚಾಲನೆ ನೀಡಿ, ದ್ವೀಚಕ್ರ ವಾಹನ ಸಾವರರಿಗೆ ಗುಲಾಬಿ ಹೂವು ನೀಡಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಿದರು.

ಪ್ರತಿದಿನವೂ ಅಪಘಾತಗಳು ಸಂಭವಿಸಿ ಸಾವಿರಾರು ಜನರು ಮರಣ ಹೊಂದು ತ್ತಿರುವುದು ತಗಮನಿಸಿ ಸಹ ಯಾವುದೇ ತರಹದ ಮುಂಜಾಗ್ರತೆ ಕ್ರಮಗಳು ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದರೆ ನಾವು ಎಷ್ಟರಮಟ್ಟಿಗೆ ನಮ್ಮ ಹಾಗೂ ನಮ್ಮ ಕುಟುಂಬ ಮೇಲೆ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದೆವೆ ಎಂಬುದು ಪ್ರತಿಯೊಬ್ಬ ನಾಗರಿಕರು ಗಮನಿಸಬೇಕಾದ ವಿಷಯ.

ಪ್ರತಿಯೊಬ್ಬರು ವಾಹನ ಚಲಾಯಿಸುವ ಮೊದಲ  ಜಾಗ್ರತೆ. ವಾಹನ ಪರವಾ ನಿಗೆ. ಹೆಲ್ಮೆಟ್. ವಾಹನದ ನಿಯಮಗಳನ್ನು ಪಾಲಿಸಿದರ  ದಿನ ನಿತ್ಯ ವಾಗುವ ಅಪಘಾತಗಳು ತಡೆಯಬಹುದಾಗಿದೆ ಎಂದರು. ನಂತರ ರೈನ್ ಗೇಜ್ ಬಡವಣಿಯ ಮನೆಮನೆ ತೆರಳಿ ರಸ್ತೆ ಸುರಕ್ಷತೆ ಬಗ್ಗೆ ಬಿತ್ತಿ ಪತ್ರ ನೀಡುವ ಮೂಲಕ ಅರಿವು ಮೂಡಿಸಿದರು.

ನಂತರ ಪಾವಗಡ ಆರಕ್ಷಕವೃತ್ತ ನೀರೀಕ್ಷಕರಾದ ಡಿ ನಾಗರಾಜ್ ,ಆರಕ್ಷಕ ಉಪ ನೀರೀಕ್ಷಕರಾದ ಜೆ.ಆರ್.ನಾಗರಾಜ ರವರ ಮುಂದಾಳತ್ವದಲ್ಲಿ   ತಾಲೂಕಿನ ಎಲ್ಲಾ ಪಿ.ಎಸ್.ಐ ಮತ್ತು  ಪೊಲೀಸ್ ಸಿಬ್ಬಂದಿ  ಹೆಲ್ಮೆಟ್ ಧರಿಸಿ ದ್ವಿಚಕ್ರ  ವಾಹನದಲ್ಲಿ  ಪಟ್ಟಣದ ಪ್ರಮುಖ  ರಸ್ತೆಗಳಾದ  ಬಳ್ಳಾರಿ  ರಸ್ತೆ,ತುಮಕೂರು ರಸ್ತೆ ,ಪೆನುಕೊಂಡ  ರಸ್ತೆ , ಸಿರಾ  ರಸ್ತೆ ಮುಖಾಂತರ  ಸಾರ್ವಜನಿಕ ರಿಗೆ  ರಸ್ತೆ ಸಂಚಾರಿ  ನಿಯಮಗಳ  ಬಗ್ಗೆ ಮತ್ತು ಹೆಲ್ಮೆಟ್  ಧರಿಸುವಂತೆ  ಅರಿವು ಮೂಡಿಸಲಾಯಿತು.

ಮುಖಾಂತರ ಸಂಚಾರಿ ನಿಯಮಗಳ  ಜಾಗೃತಿ ಗೀತೆಗಳ ಮುಖೆನ  ಸಾರ್ವಜನಿಕರಿಗೆ ಅರಿವು ಮೂಡಿಸಿದ್ದು ವಿಶೇಷವಾಗಿತ್ತು.