Friday, 10th January 2025

Fund Release: ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಅಧಿಕಾರಿ, ಶಿಕ್ಷಕರ ವೇತನಕ್ಕಾಗಿ 628.65 ಕೋಟಿ ಅನುದಾನ ಬಿಡುಗಡೆ

Fund Release

ಬೆಂಗಳೂರು: 2024-25ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಶಿಕ್ಷಕರ ವೇತನ ವೆಚ್ಚದ ಬಾಬ್ತುಗಳಿಗಾಗಿ ಜನವರಿಯಿಂದ ಮಾರ್ಚ್‌ರವರೆಗಿನ ಮೂರು ತಿಂಗಳ ಅನುದಾನವನ್ನು (Fund Release) ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವೈ.ಸಿ.ರವಿಕುಮಾರ್‌ ಆದೇಶ ಹೊರಡಿಸಿದ್ದಾರೆ. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಶಿಕ್ಷಕರ ವೇತನ ವೆಚ್ಚಕ್ಕಾಗಿ ಏಪ್ರಿಲ್-2024 ರಿಂದ ಡಿಸೆಂಬರ್-2024ರ ಅವಧಿಯ ಅನುದಾನವಾಗಿ 1505.28 ಕೋಟಿ ಬಿಡುಗಡೆ ಮಾಡಲಾಗಿದೆ.

ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರು, 2024-25ನೇ ಸಾಲಿನ ವೇತನ ವೆಚ್ಚಕ್ಕಾಗಿ ಅನುದಾನ ಕೊರತೆ ಉಂಟಾಗಿದ್ದು, ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವಂತೆ ಕೋರಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, 2024-25ನೇ ಸಾಲಿನ ಆಯವ್ಯಯದಲ್ಲಿ ನಿಗದಿಪಡಿಸಿರುವ ಅನುದಾನದಲ್ಲಿ ಜನವರಿಯಿಂದ ಮಾರ್ಚ ಅವಧಿಯ 3 ತಿಂಗಳ ಅನುದಾನ 628.65 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.


ಮೊತ್ತವನ್ನು ಜಿಲ್ಲಾವಾರು, ತಾಲೂಕುವಾರು ಹಂಚಿಕೆ ಮಾಡಿ ಮರು ಬಿಡುಗಡೆ ಮಾಡಲು ಮತ್ತು ಖಜಾನೆಯಲ್ಲಿ ಅಪ್ಲೋಡ್ ಮಾಡಲು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು. ಇವರಿಗೆ ಅನುಮತಿ ನೀಡಿದೆ. ಬಿಡುಗಡೆ ಮಾಡಲಾಗಿರುವ ಅನುದಾನದ ಪೈಕಿ ಯಾವುದೇ ಕಾರಣಕ್ಕೂ ಹಿಂದಿನ ಸಾಲಿನ ವೇತನ ವೆಚ್ಚಗಳನ್ನು ಭರಿಸತಕ್ಕದ್ದಲ್ಲ. ಹಿಂದಿನ ಸಾಲಿನ ವೇತನ ವೆಚ್ಚಗಳನ್ನು ಭರಿಸಲು ಅಗತ್ಯವಿರುವ ಅನುದಾನದ ವಿವರದೊಂದಿಗೆ ಪ್ರತ್ಯೇಕವಾದ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Mutual Funds: ಒಂದೇ ವರ್ಷಕ್ಕೆ 58% ಲಾಭ; ಟಾಪ್‌ 5 ಈಕ್ವಿಟಿ ಮಿಡ್‌ ಕ್ಯಾಪ್‌ ಫಂಡ್ ಇವು


    Leave a Reply

    Your email address will not be published. Required fields are marked *