ಕಳೆದ ತಿಂಗಳ ಅಕ್ಟೋಬರ್ 11ರಂದು ದೊಡ್ಡ ಮಟ್ಟದ ನಿರೀಕ್ಷೆಯೊಂದಿಗೆ ಬಿಡುಗಡೆ ಆಗಿತ್ತು ಮಾರ್ಟಿನ್ ಸಿನಿಮಾ (Martin). ಧ್ರುವ ಸರ್ಜಾ (Dhruva Sarja) ಕೆರಿಯರ್‌ನ ದೊಡ್ಡ ಬಜೆಟ್‌ನ ಸಿನಿಮಾ ಎಂಬ ವಿಶೇಷಣದೊಂದಿಗೆ ಈ ಸಿನಿಮಾ ತೆರೆಕಂಡಿತ್ತು. ಪ್ಯಾನ್ ಇಂಡಿಯಾ (Pan India) ಮಟ್ಟದಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾ ಹೇಳಿಕೊಳ್ಳುವ ಯಶಸ್ಸು ಕಾಣಲಿಲ್ಲ. ಹೈಪ್ ಕ್ರಿಯೆಟ್ ಆದರೂ, ಆ ಗಮ್ಯವನ್ನು ಮುಟ್ಟಲು ಈ ಸಿನಿಮಾ ಪ್ಲಾಪ್ ಆಗಿ ಸಿನಿಮಾ ಒಟಿಟಿ (OTT) ಅಂಗಳಕ್ಕೆ ಆಗಮಿಸಿತ್ತು. ಈಗ ಇದೇ ಸಿನೆಮಾ ಕಿರುತರೆಗೆ ಬರಲು ಸಜ್ಜಾಗಿದೆ.
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಮೊಟ್ಟ ಮೊದಲ ಬಾರಿಗೆ ಮಾರ್ಟಿನ್ ಸಿನಿಮಾ ಟೆಲಿಕಾಸ್ಟ್ ಆಗಲಿದ್ದು, ಶೀಘ್ರದಲ್ಲಿ ಟೆಲಿವಿಷನ್ ಪ್ರೀಮಿಯರ್ ವರ್ಲ್ಡ್ ಆಗಲಿದೆ.
ಜೀ ಕನ್ನಡ ವಾಹಿನಿಯು ಕೇವಲ ಧಾರಾವಾಹಿ, ರಿಯಾಲಿಟಿ ಶೋಗಳಷ್ಟೇ ಅಲ್ಲದೇ ಸೀಮಿತವಾಗಿರದೆ ಸದಭಿರುಚಿಯುಳ್ಳ ಸಿನಿಮಾಗಳನ್ನೂ ಪ್ರಸಾರ ಮಾಡುವುದರ ಮೂಲಕ ನೋಡುಗರನ್ನು ವಿಶೇಷವಾಗಿ ರಂಜಿಸುತ್ತಿದೆ. ‘ಕೆಜಿಎಫ್’, ‘ವಿಕ್ರಾಂತ್ ರೋಣ’, ‘ಗರುಡ ಗಮನ ವೃಷಭ ವಾಹನ’, ‘ಸಪ್ತ ಸಾಗರದಾಚೆ ಎಲ್ಲೋ SIDE-A’ ಸೇರಿದಂತೆ ಹತ್ತು ಹಲವು ಜನಪ್ರಿಯ ಚಿತ್ರಗಳನ್ನು ಪ್ರದರ್ಶಿಸಿರುವ ಹೆಗ್ಗಳಿಕೆ ಜೀ ಕನ್ನಡ ವಾಹಿನಿಯದ್ದು. ಇದೀಗ ಬ್ಲಾಕ್ ಬ್ಲಾಸ್ಟರ್ ಸಿನಿಮಾವನ್ನು ಕೂಡ ಪ್ರಸಾರ ಮಾಡಲು ಸಜ್ಜಾಗಿದೆ.
ಈ ಕುರಿತು ಜೀ ಕನ್ನಡ ಪ್ರೊಮೊ ಹಂಚಿಕೊಂಡಿದ್ದು, ಶೀಘ್ರದಲ್ಲಿ ಸಿನೆಮಾ ಪ್ರಸಾರವಾಗಲಿದೆ ಎಂದು ತೋರಿಸಿದೆ ಹೊರತು ಯಾವಾಗ ಎಂದು ದಿನಾಂಕ ತಿಳಿಸಿಲ್ಲ.
ಇದನ್ನೂ ಓದಿ: Marriage Story: ಹೀಗೂ ಇದೆ! ವಧುವಿಗೆ ಸಂಬಂಧಪಟ್ಟ ವಿಲಕ್ಷಣ ವಿವಾಹ ಆಚರಣೆಗಳ ಮಾಹಿತಿ…
ಎ ಪಿ ಅರ್ಜುನ್ ನಿರ್ದೇಶನದ ಸಿನಿಮಾ:
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾವನ್ನು ಅದ್ದೂರಿ ನಿರ್ದೇಶಕ ಎ.ಪಿ ಅರ್ಜುನ್ (A. P. Arjun) ನಿರ್ದೇಶನ ಮಾಡಿದ್ದರು. ಉದಯ್ ಕೆ ಮೆಹ್ತಾ ನಿರ್ಮಾಣದಲ್ಲಿ ಮೂಡಿಬಂದಿದ್ದ ಈ ಆಕ್ಷನ್ ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿದ್ದರು. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ಈ ಸಿನಿಮಾ ತೆರೆಕಂಡಿತ್ತು. ಕನ್ನಡದ ಜತೆಗೆ ಬಹುಭಾಷೆಯ ಹಲವು ನಟರು ಈ ಸಿನಿಮಾದಲ್ಲಿ ಕೆಲಸ ಮಾಡಿದ್ದರು.
ಮಾರ್ಟಿನ್ ಚಿತ್ರದಲ್ಲಿ ಧ್ರುವ ಸರ್ಜಾಗೆ ನಾಯಕಿಯರಾಗಿ ವೈಭವಿ ಶಾಂಡಿಲ್ಯ ಮತ್ತು ಅನ್ವೇಶಿ ಜೈನ್ ನಟಿಸಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ಎಪಿ ಅರ್ಜುನ್ ನಿರ್ದೇಶಿಸಿದ್ದಾರೆ. ಬರೋಬ್ಬರಿ 250ಕ್ಕೂ ಅಧಿಕ ದಿನಗಳ ಕಾಲ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಕ್ಲೈಮ್ಯಾಕ್ಸ್‌ನ ಆಕ್ಷನ್ ಎಪಿಸೋಡ್‌ಅನ್ನು ಸುಮಾರು 52 ದಿನಗಳ ಕಾಲ ಚಿತ್ರೀಕರಿಸಲಾಗಿದೆ.
ಒಟಿಟಿಯಲ್ಲಿ ಮಾರ್ಟಿನ್:
ಮಾರ್ಟಿನ್ ಸಿನಿಮಾದ ಒಟಿಟಿ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್ ಆಗಿತ್ತು. ಅದೇ ರೀತಿ ಈ ಚಿತ್ರದ ಡಿಜಿಟಲ್ ಹಕ್ಕನ್ನು ಜೀ 5 ಪಡೆದುಕೊಂಡಿತ್ತು. ಕನ್ನಡವಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮ್ ಆಗಿತ್ತು.
ಇದೀಗ ಕಿರುತೆರೆಯಲ್ಲಿ ಈ ಸಿನಿಮಾ ಮೊಟ್ಟ ಮೊದಲ ಬಾರಿಗೆ ಪ್ರಸಾರವಾಗುತ್ತಿದ್ದು ನೋಡುಗರಿಗೆ ಮನರಂಜನೆಯ ಮಹಾ ಉಡುಗೊರೆ ನೀಡುತ್ತಿದೆ ಜೀ ಕನ್ನಡ ವಾಹಿನಿ.