Sunday, 12th January 2025

Sankranti Festival 2025: ಸಂಕ್ರಾಂತಿಯ ಎಳ್ಳು ಬೀರಲು ಬಂತು 3 ಬಗೆಯ ಪರಿಸರ ಸ್ನೇಹಿ ಮಣ್ಣಿನ ಕುಡಿಕೆಗಳು

Sankranti Festival 2025

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸಂಕ್ರಾಂತಿ ಹಬ್ಬದಂದು (Sankranti Festival 2025) ಎಳ್ಳು ಬೀರುವ ಪರಿಸರ ಸ್ನೇಹಿಗಳಿಗಾಗಿ, ಇಕೋ ಫ್ರೆಂಡ್ಲಿಯಾಗಿರುವ ಬಣ್ಣಬಣ್ಣದ ಮಣ್ಣಿನ ಡಿಸೈನರ್ ಕುಡಿಕೆಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಲೆಕ್ಕವಿಲ್ಲದಷ್ಟು ಕಲಾತ್ಮಕ ಡಿಸೈನ್‌ನಲ್ಲಿ ಲಗ್ಗೆ ಇಟ್ಟಿವೆ.

ಚಿತ್ರಗಳು: ಮಿಂಚು

ಹೌದು, ಪ್ಲಾಸ್ಟಿಕ್ ಬಾಕ್ಸ್ ಬೇಡ! ಎನ್ನುವವರಿಗೆ ಈ ಬಗೆಬಗೆಯ ಮಣ್ಣಿನ ಪುಟ್ಟ ಪುಟ್ಟ ಡಿಸೈನರ್ ಮಡಿಕೆ-ಕುಡಿಕೆಗಳು ಅಪ್ಷನ್ ಆಗಿವೆ. ಈ ಮೊದಲು ಪೊಂಗಲ್ ಆಚರಿಸುವವರು ಮಾತ್ರ ಇವುಗಳನ್ನು ಡೆಕೋರೇಷನ್‌ಗಾಗಿ ಕೊಳ್ಳುತ್ತಿದ್ದರು. ಇದೀಗ ಸಂಕ್ರಾಂತಿ ಹಬ್ಬದಂದು ಎಳ್ಳನ್ನು ಹಾಕಿಕೊಡಲು ಇವನ್ನು ಬಳಸಲಾರಂಭಿಸಿರುವುದು ಹೆಚ್ಚಾಗಿದೆ ಎನ್ನುತ್ತಾರೆ ಮಾರಾಟಗಾರರಾದ ರಾಜೇಶ್. ಅವರ ಪ್ರಕಾರ, ಇದರಿಂದ ದೇಸಿ ಹಬ್ಬಕ್ಕೆ ಸಾಥ್ ನೀಡಿದಂತಾಗುವುದಲ್ಲದೇ, ಕುಂಬಾರರಿಗೂ ಒಂದಿಷ್ಟು ಕೆಲಸ ಹೆಚ್ಚಿಗೆ ದೊರೆತಂತಾಗುತ್ತದೆ ಎನ್ನುತ್ತಾರೆ.

ಬಣ್ಣ ಬಣ್ಣದ ಮಣ್ಣಿನ ಕುಡಿಕೆಗಳು

ನಾನಾ ವರ್ಣಗಳಲ್ಲಿ ದೊರೆಯುವ ಇವುಗಳಲ್ಲಿ, ಸಂಕ್ರಾಂತಿಯಂದು ಎಳ್ಳನ್ನು ತುಂಬಿಸಿ ಕೊಡಬಹುದಾಗಿದೆ. ಬಾಕ್ಸ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಇವು ದೊರೆಯುತ್ತಿವೆ.

ರಂಗೋಲಿ & ಮಂಡಲ ಆರ್ಟ್ ಚಿತ್ತಾರದ ಕುಡಿಕೆಗಳು

ಇನ್ನು, ಸಾದಾ ಮಣ್ಣಿನ ಕುಡಿಕೆಗಳು ಬೇಡ! ಎನ್ನುವವರಿಗೆಂದೇ, ಈ ಕುಡಿಕೆಗಳ ಮೇಲೆ ಹೊರಗೆ ಬಣ್ಣದಿಂದ ರಂಗೋಲಿಯಂತಹ ಚಿತ್ತಾರಗಳನ್ನು ಮೂಡಿಸಿದವು ದೊರೆಯುತ್ತಿವೆ. ಟೈನಿ ಮಂಡಲ ಆರ್ಟ್‌ನಂತಹ ಚಿತ್ತಾರಗಳು ಕೂಡ ಎಲ್ಲರನ್ನು ಸೆಳೆಯುತ್ತಿವೆ.

ಈ ಸುದ್ದಿಯನ್ನೂ ಓದಿ | Bengaluru International Film Festival: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; ಕನ್ನಡ, ಭಾರತೀಯ, ಏಷಿಯನ್ ಸಿನಿಮಾ ಸ್ಪರ್ಧಾ ವಿಭಾಗಗಳಿಗೆ ಚಲನಚಿತ್ರಗಳ ಆಹ್ವಾನ

ಆಕರ್ಷಕ ಡಿಸೈನ್ ಮಾಡಿದ ಮಣ್ಣಿನ ಕುಡಿಕೆ

ಸಾದಾ ಕುಂದನ್, ಪರ್ಲ್, ಬೀಡ್ಸ್ ಹೀಗೆ ನಾನಾ ಲೇಸ್‌ನಿಂದ ಮಾಡಿದ ಡಿಸೈನ್‌ಗಳು ಈ ಕುಡಿಕೆಗಳನ್ನು ಮತ್ತಷ್ಟು ಸುಂದರಗೊಳಿಸಿವೆ. ಮನೆಯೊಳಗಿನ ಹಬ್ಬದ ಅಲಂಕಾರದಲ್ಲೂ ಇವು ಉಪಯೋಗವಾಗುತ್ತಿವೆ. ಪರಿಣಾಮ, ಮಾರುಕಟ್ಟೆಯಲ್ಲಿ ಇವುಗಳ ಬೇಡಿಕೆ ಮೊದಲಿಗಿಂತ ಹೆಚ್ಚಿದೆ ಎನ್ನುತ್ತಾರೆ ಮಾರಾಟಗಾರರು. ಅವರ ಪ್ರಕಾರ, ಪರಿಸರ ಪ್ರೇಮಿಗಳು ಇವನ್ನು ಹೆಚ್ಚಾಗಿ ಕೊಳ್ಳುತ್ತಾರೆ ಎನ್ನುತ್ತಾರೆ. ಅಲ್ಲದೇ ಇದು ಅಲಂಕಾರದಲ್ಲಿ ಟ್ರೆಡಿಷನಲ್ ಲುಕ್ ನೀಡುತ್ತದೆ ಎನ್ನುತ್ತಾರೆ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

Leave a Reply

Your email address will not be published. Required fields are marked *