-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಂಕ್ರಾಂತಿ ಹಬ್ಬದ (Sankranti Festival 2025) ಎಳ್ಳು-ಬೆಲ್ಲವನ್ನು ಕಲರ್‌ಫುಲ್ ಅಲಂಕಾರಿಕ ಬಾಕ್ಸ್‌ನಲ್ಲಿ ಹಂಚುವ ಕ್ರೇಝ್ ಇದೀಗ ಎಲ್ಲೆಡೆ ಕಾಮನ್ ಆಗಿದೆ. ಇನ್ನು ಎಕೋ ಫ್ರೆಂಡ್ಲಿಯಾಗಿರುವವರು ಚಿಕ್ಕ ಪುಟ್ಟ ಕ್ಲೇ ಪಾಟ್‌ನಲ್ಲಿ ನೀಡುವುದು ಟ್ರೆಂಡಿಯಾಗಿದೆ.
ಬದಲಾದ ಹಂಚುವ ರಿವಾಜು
ಮೊದಲೆಲ್ಲಾ ಪ್ಲಾಸ್ಟಿಕ್ ಕವರ್‌ನಲ್ಲಿಇಲ್ಲವೇ, ಸಾದಾ ಇರುವ ಪುಟ್ಟ ಬಾಕ್ಸ್‌ನಲ್ಲಿ ಹಂಚುತ್ತಿದ್ದ ಎಳ್ಳು-ಬೆಲ್ಲವನ್ನು ಇದೀಗ ಕಲರ್‌ಫುಲ್ ಹಾಗೂ ನಾನಾ ವೆರೈಟಿಯ ಡಿಸೈನರ್ ಪುಟ್ಟ ಪುಟ್ಟ ಡಿಸೈನರ್ ಬಾಕ್ಸ್‌ಗಳಲ್ಲಿ ನೀಡುವ ರಿವಾಜಿಗೆ ನಾಂದಿಯಾಡಲಾರಂಭಿಸಿದ್ದಾರೆ. ಹಾಗೆಂದು ಇವು ನೋಡಲು ಕೇವಲ ಬಾಕ್ಸ್ ಅಲ್ಲ, ಆಕರ್ಷಕವಾಗಿ ಕಾಣುವ ಡಿಸೈನರ್ ಗಿಫ್ಟ್ ಬಾಕ್ಸ್‌ಗಳು.
ಆಕರ್ಷಕ ಅಲಂಕಾರಿಕ ಬಾಕ್ಸ್
ಹಾರ್ಟ್ ಶೇಪ್‌ನಿಂದಿಡಿದು, ಬಗೆಬಗೆಯ ಫ್ರೂಟ್ ಶೇಪ್‌ನವು, ಹುಡುಗರಿಗೆ ಪ್ರಿಯವಾಗುವ ಬ್ಯಾಟ್‌ಮ್ಯಾನ್, ಹುಡುಗಿಯರಿಗೆ ಇಷ್ಟವಾಗುವ ಬಾರ್ಬಿ ಡಾಲ್‌ನ ಮುಖ ಚಿತ್ತಾರವಿರುವ ಪುಟ್ಟ ಬಾಕ್ಸ್, ಕಾರ್ಟೂನ್ ಕ್ಯಾರೆಕ್ಟರ್ ಹೊಂದಿರುವ ಮಿನಿ ಬಾಕ್ಸ್. ನೋಡಲು ಥೇಟ್ ಮಡಕೆಯಂತೆ ಕಾಣುವ ರಂಗೋಲಿ ಚಿತ್ತಾರ ಮೂಡಿಸಿರುವ ಮಿನಿ ಕ್ಲೇ ಪಾಟ್‌ಗಳು ಈ ಬಾರಿ ಮಾರುಕಟ್ಟೆಯಲ್ಲಿ ಎಲ್ಲರನ್ನು ಆಕರ್ಷಿಸಿವೆ. ಇನ್ನು ಬಟನ್ ಪ್ರೆಸ್ ಮಾಡಿದರೇ ಸಾಕು, ಓಪನ್ ಆಗುವ ಮ್ಯಾಜಿಕಲ್ ಬಾಕ್ಸ್‌ಗಳು ಹೆಚ್ಚು ಪ್ರಚಲಿತದಲ್ಲಿವೆ.
ವಿಭಿನ್ನ ಗಿಫ್ಟ್ ಬಾಕ್ಸ್
ನೋಡಲು ವಿಭಿನ್ನವಾಗಿ ಅಥವಾ ಎಲ್ಲರಿಗಿಂತ ಭಿನ್ನವಾಗಿರಬೇಕೆನ್ನುವವರು ಗೋಲ್ಡನ್ ಶೇಡ್‌ನ ಟೈಯಿಂಗ್ ಮಾಡಬಹುದಾದ ನೆಟ್ಟೆಡ್ ಗಿಫ್ಟ್ ಹ್ಯಾಂಪರ್‌ನಂತವಲ್ಲಿಎಳ್ಳು-ಬೆಲ್ಲ ಹಾಕಿ ನೀಡಬಹುದು. 3-4 ಸೆ. ಮೀ ನಿಂದಿಡಿದು ಲಂಚ್ ಬಾಕ್ಸ್‌ನಷ್ಟು ದೊಡ್ಡದಾಗಿರುವಂತವು ಲಭ್ಯವಿದೆ. ಅವರವರ ಆಯ್ಕೆ ಅನುಗುಣವಾಗಿ ಇವನ್ನು ಆರಿಸಿ, ಎಳ್ಳು-ಬೆಲ್ಲಅದರೊಳಗೆ ಇರಿಸಿ ನೀಡಬಹುದು ಎನ್ನುತ್ತಾರೆ ಮಾರಾಟಗಾರರು.
ಈ ಸುದ್ದಿಯನ್ನೂ ಓದಿ | MSIL Tour Package: ಎಂಎಸ್‌ಐಎಲ್ ಟೂರ್ ಪ್ಯಾಕೇಜ್; 20 ಸಾವಿರದಲ್ಲಿ 18 ದಿನಗಳ ಉತ್ತರ ಭಾರತ ಪ್ರವಾಸ
ಡಿಸೈನರ್ ಬಾಕ್ಸ್ ಸೆಲೆಕ್ಷನ್ ಹೇಗೆ?
- ಟ್ರೆಂಡಿಯಾಗಿರುವಂತವನ್ನು ಆಯ್ಕೆ ನೀಡಿ.
- ಪುಟ್ಟ ಪುಟ್ಟ ಬಾಕ್ಸ್ ಹೆಚ್ಚು ಚಾಲ್ತಿಯಲ್ಲಿವೆ.
- ರಂಗೋಲಿ ಚಿತ್ತಾರದವು ಕಲಾತ್ಮಕವಾಗಿ ಕಾಣಿಸುತ್ತವೆ.
- ವೆರೈಟಿ ಡಿಸೈನ್‌ನವು ಹಬ್ಬದ ಸಂಭ್ರಮ ಹೆಚ್ಚಿಸುತ್ತವೆ.
- ಮಿನಿ ಟ್ರೇ ಡಿಸೈನ್‌ನವು ಈ ಬಾರಿ ಬಂದಿವೆ.
- ಗೋಲ್ಡನ್ ಡಿಸೈನರ್ ಬಾಕ್ಸ್ ಗ್ರ್ಯಾಂಡ್ ಲುಕ್ ನೀಡುತ್ತವೆ.
- ಎಳ್ಳು-ಬೆಲ್ಲ ತುಂಬುವಂತಹ ಡಬ್ಬಿಗಳನ್ನು ಕೊಳ್ಳಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)