-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಜ್ರಾಭರಣಗಳನ್ನು ನಾಚಿಸುವಂತಹ ಟ್ರೆಡಿಷನಲ್ ಇಮಿಟೇಷನ್ ಆಭರಣಗಳು ಸಂಕ್ರಾಂತಿ ಹಬ್ಬದ ಸೀಸನ್ನಲ್ಲಿ (Sankranti Jewel Fashion 2025) ಬೇಡಿಕೆ ಹೆಚ್ಚಿಸಿಕೊಂಡಿವೆ. ಹೌದು, ಲಕ್ಷಗಟ್ಟಲೇ ಹಣ ಸುರಿಯದೇ ಕಡಿಮೆ ಬೆಲೆಯಲ್ಲಿ ಕೈಗೆಟಕುವ ಈ ಆಭರಣಗಳನ್ನು, ಪ್ರತಿ ಸೀರೆ ಅಥವಾ ಡಿಸೈನವೇರ್ಗೆ ತಕ್ಕಂತೆ ಖರೀದಿಸಬಹುದಾಗಿರುವುದು,ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ಸ್.
ಟ್ರೆಡಿಷನಲ್ ಇಮಿಟೇಷನ್ ಜುವೆಲರಿಗಳು
ಟ್ರೆಡಿಷನಲ್ ಡಿಸೈನ್ನ ಬಂಗಾರದ ಆಭರಣಗಳಂತೆ ಕಾಣುವ ಈ ಇಮಿಟೇಷನ್ ಜುವೆಲರಿಗಳು, ಧರಿಸಿದಾಗ ಥೇಟ್ ಬಂಗಾರದ ಒಡವೆಗಳಂತೆಯೇ ಕಾಣುತ್ತವೆ. ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತವೆ. ಅಲ್ಲದೇ, ಸಾಮಾನ್ಯ ಮಾನಿನಿಯರು ಹೆಚ್ಚು ಹಣ ವೆಚ್ಚ ಮಾಡದೇ ಗ್ರ್ಯಾಂಡ್ ಆಗಿ ಕಾಣಿಸಬಹುದು ಎನ್ನುತ್ತಾರೆ.
ಬೇಡಿಕೆ ಪಡೆದುಕೊಂಡಿರುವ ಇಮಿಟೇಷನ್ ಆಭರಣಗಳು
ಈ ಸಂಕ್ರಾಂತಿ ಫೆಸ್ಟಿವ್ ಸೀಸನ್ನಲ್ಲಿ, ಲೆಕ್ಕವಿಲ್ಲದಷ್ಟು ವಿನ್ಯಾಸದ ಇಮಿಟೇಷನ್ ಜುವೆಲರಿಗಳು ಜ್ಯುವೆಲರಿ ಲೋಕಕ್ಕೆ ಬಂದಿವೆ. ಕಿವಿಗೆ ಹಾಕುವ ಹ್ಯಾಂಗಿಂಗ್ಸ್, ಓಲೆ, ಇಯರಿಂಗ್ ಗಳಿಂದಿಡಿದು, ದೊಡ್ಡ –ಚಿಕ್ಕ ಚೋಕರ್, ಹಾರ, ಬಾಜುಬಂಧ್, ಕಮರ್ಬಾಂದ್, ಜುಮಕಿ, ಮಾಟಿ ಹೀಗೆ ಸಾವಿರಾರು ವಿನ್ಯಾಸದವು ಮಾರುಕಟ್ಟೆಗೆ ಆಗಮಿಸಿವೆ. ಅಂದಹಾಗೆ, ನೂರು ರೂ.ಗಳಿಂದಿಡಿದು, ಸಾವಿರ ರೂ.ಗಳಿಗೆ ಹಾರ, ನೆಕ್ಲೇಸ್ ಹಾಗೂ ಭಾರಿ ಸೆಟ್ ಆಭರಣಗಳು ದೊರೆಯುತ್ತವೆ. ಒಟ್ಟಿನಲ್ಲಿ, ಬಂಗಾರದ ಆಭರಣಗಳ ವಿನ್ಯಾಸವನ್ನು ಮೀರಿಸುವಂತಹ ಇವುಗಳ ಡಿಸೈನ್ಗಳು, ವನ್ ಗ್ರಾಂ ಗೋಲ್ಡ್ ಹಾಗೂ ಗೋಲ್ಡ್ ಕೋಟೆಡ್ ವಿನ್ಯಾಸದಲ್ಲಿ ಮಾನಿನಿಯರ ಮನ ಗೆದ್ದಿವೆ ಎನ್ನುತ್ತಾರೆ ಜ್ಯುವೆಲರಿ ಮಾರಾಟಗಾರರಾದ ರಜತ್.
ಟ್ರೆಂಡಿ ಆಭರಣಗಳು
ಬಂಗಾರ ಹಾಗೂ ಡೈಮಂಡ್ ಆಭರಣಗಳ ತದ್ರೂಪದಂತಿರುವ ಈ ಇಮಿಟೇಷನ್ ಆಭರಣಗಳು, ಸೆಮಿ ಪ್ರಿಶಿಯಸ್ಹಾಗೂ ಅಮೆರಿಕನ್ ಡೈಮಂಡ್ ಸೆಟ್ನಂತೆ ಕಾಣಿಸುವ ಡಿಸೈನ್ನಲ್ಲೂ ದೊರೆಯುತ್ತಿವೆ. ಟ್ರೆಂಡಿಯಾಗಿವೆ ಎನ್ನುತ್ತಾರೆ ಮಾರಾಟಗಾರರು. ಕೆಲವಕ್ಕೆ ಒಂದು ವರ್ಷ ಗ್ಯಾರಂಟಿ ಕೂಡ ನೀಡಲಾಗುತ್ತದೆ. ಆಯಾ ಡಿಸೈನ್ಗೆ ತಕ್ಕಂತೆ ಬೆಲೆ ನಿಗಧಿಯಾಗಿರುತ್ತದೆ. ಹಬ್ಬದ ಸೀಸನ್ನಲ್ಲಿ ಮಾತ್ರವಲ್ಲ, ವೆಡ್ಡಿಂಗ್ ಸೀಸನ್ನಲ್ಲೂ ಇವುಗಳ ಮಾರಾಟ ಹೆಚ್ಚಾಗುತ್ತದೆ ಎನ್ನುತ್ತಾರೆ ಮಾರಾಟಗಾರರಾದ ರಿತೇಶ್ ಹಾಗೂ ಜೈರಾಜ್.
ಈ ಸುದ್ದಿಯನ್ನೂ ಓದಿ | Winter Fashion 2025: ಚಳಿಗಾಲದ ಟಾಪ್ ಲಿಸ್ಟ್ಗೆ ಸೇರಿದ ಬ್ರೈಟ್ ಬಣ್ಣದ ಫ್ಯಾಷನ್ವೇರ್ಸ್!
ಇಮಿಟೇಷನ್ ಆಭರಣ ಪ್ರಿಯರಿಗೆ ಒಂದಿಷ್ಟು ಸಲಹೆ
- ಫಿನಿಶಿಂಗ್ ಇರುವಂತಹ ಇಮಿಟೇಷನ್ ಜುವೆಲರಿ ಖರೀದಿಸಿ.
- ಯಾವುದೇ ಕಳ್ಳ ಕಾಕರ ಭಯವಿರುವುದಿಲ್ಲ.
- ಟ್ರಯಲ್ನೋಡಿ ಪರಿಶೀಲಿಸಿ, ಕೊಳ್ಳಿ.
- ಕಾಪರ್ ಫಿನಿಶಿಂಗ್ ಇರುವಂತವು ಡಲ್ಆಗಿ ಕಾಣಿಸುತ್ತವೆ.
- ಟ್ರೆಂಡಿ ಡಿಸೈನ್ನವನ್ನು ಖರೀದಿಸಿ.
- ಸೂಕ್ತ ನಿರ್ವಹಣೆ ಮಾಡಿದಲ್ಲಿ ಬಹುಕಾಲ ಧರಿಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)