Wednesday, 18th September 2024

ದಾಖಲೆ ಬೆಲೆಗೆ ಸಂತೆಕರ ಲಿಲಾವು ಹರಾಜು

ಕೊಲ್ಹಾರ: ಸ್ಥಳೀಯ ಪಟ್ಟಣ ಪಂಚಾಯತ್ ವ್ಯಾಪ್ತಿಯ 2024-25 ನೇ ಸಾಲಿನ ವಾರ್ಷಿಕ ಸಂತೆಕರ ಲಿಲಾವು ಪ್ರಕ್ರಿಯೆ ಮಂಗಳವಾರ ಜರುಗಿತು.
ಪಟ್ಟಣದ ವ್ಯಾಪ್ತಿಯ ಸಂತೆ ಹಾಗೂ ಪಂಚಾಯತ್ ಜಾಗೆಯಲ್ಲಿ ಇರುವ ಗೂಡಂಗಡಿಗಳ ಕರ ವಸೂಲಾತಿಯ ಲಿಲಾವು ಒಂದು ವರ್ಷದ ವರೆಗೆ ದಾಖಲೆಯ 7 ಲಕ್ಷ 5 ಸಾವಿರ ರೂ… ಗಳಿಗೆ ಪಟ್ಟಣದ ಚಂದ್ರಕಾಂತ ಇಂಡಿಕರ್ ಎನ್ನುವವರು ಹರಾಜಿನಲ್ಲಿ ಪಡೆದುಕೊಂಡರು.

ಹರಾಜಿನಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೆ 50 ಸಾವಿರ ರೂ.. ಠೇವಣಿ ನಿಗದಿಪಡಿಸಲಾಗಿತ್ತು ಒಟ್ಟು 20 ಜನ ಹರಾಜಿನಲ್ಲಿ ಭಾಗವಹಿಸಿದ್ದರು
ಸರಕಾರದ ನಿಯಮದ ಪ್ರಕಾರ ಸ್ಥಳೀಯ ಪಟ್ಟಣ ಪಂಚಾಯತ್ ಹರಾಜಿಗೆ 2.5 ಲಕ್ಷ ದರ ನಿಗದಿಪಡಿಸಲಾಗಿತ್ತು ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 20 ಜನರು ಭಾಗವಹಿಸಿದ್ದರು ದಾಖಲೆಯ 7 ಲಕ್ಷ 5 ಸಾವಿರ ರೂಪಾಯಿಗೆ ಹರಾಜು ಪ್ರಕ್ರಿಯೆ ಕೊನೆಗೊಂಡಿತು.

ಈ ಸಂದರ್ಭದಲ್ಲಿ ಪ ಪಂ ಆಡಳಿತಾಧಿಕಾರಿ ತಹಶೀಲ್ದಾರ್ ಎಸ್.ಎಸ್ ನಾಯಕಲಮಠ, ಪ.ಪಂ ಮುಖ್ಯಾಧಿಕಾರಿ ಉಮೇಶ್ ಛಲವಾದಿ, ಪ ಪಂ ಸಿಬ್ಬಂದಿ ಗಳಾದ ತಾಜುದ್ದೀನ್ ಹನುಮಸಾಗರ, ನಿಖಿಲ್ ಪಾಟೀಲ್, ಗೌಡಪ್ಪ ಕಾರಜೋಳ ಹಾಗೂ ಪ ಪಂ ಸದಸ್ಯರು ಸಹಿತ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *