Sunday, 15th December 2024

ಫುಡ್‌ ಗೋದಾಮಿನಲ್ಲಿ ಭಾರಿ ಅವ್ಯವಹಾರ: ವ್ಯವಸ್ಥಾಪಕನ ಆತ್ಮಹತ್ಯೆ

ಪಾವಗಡ: ಕೆಎಸ್‌ಎಫ್ಸಿ ಫುಡ್‌ ಗೋದಾಮಿನಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಗೋದಾಮಿನ ವ್ಯವಸ್ಥಾಪಕ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಾವಗಡ ಅಹಾರ ಗೋದಾಮಿನಲ್ಲಿ ವ್ಯವಸ್ಥಾಪಕರಾಗಿ ಕೇವಲ 24 ದಿನ ಕಳೆದಿದ್ದ ಕರ್ತವ್ಯಕ್ಕೆ ಹಾಜರಾಗಿದ್ದು ರಮೇಶ್ (57) ಎಂಬ ವ್ಯಕ್ತಿ ಶ್ರೀನಿವಾಸ್ ನಗರದ ಬಾಡಿಗೆ ಕೊಠಡಿಯಲ್ಲಿ ಡೆತ್ ನೋಟ್ ಬರೆದು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಾವಗಡ ಕೆ.ಎಸ್.ಎಫ್.ಸಿ ಹಿಂದಿನ ಗೋದಾಮಿನ ವ್ಯವಸ್ಥಾಪಕ ಭಾರಿ ಅವ್ಯವಹಾರ ಮಾಡಿರುವ ಹಿನ್ನೆಲೆಯಲ್ಲಿ ನೂತನ ವ್ಯವಸ್ಥಾಪಕ ರಮೇಶ್ ಮೇಲೆ ಒತ್ತಡ ಹೇರಲಾಗಿತ್ತು ಈ ಹಿನ್ನೆಲೆಯಲ್ಲಿ ವಾಸವಿದ್ದ ಕೊಠಡಿಯಲ್ಲಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಗಳ ಹೆಸರು ಡೆತ್ ನೋಟ್ ನಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಮೃತ ರಮೇಶ್ ಪತ್ನಿ ವೈಜಯಂತಿ ಮಾಲ ಹಾಗೂ ಮಗ ಮಹವೀಶ್ ಮಾತನಾಡಿ, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಕೊನೆಗೆ ಸಿಗುವ ಗೌರವ ಇದೇ ಎಂದು ಅಳಲು ತೋಡಿಕೊಂಡರು.

ನಂತರ ಪೊಲೀಸ್ ಇಲಾಖೆಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ರಮೇಶ್ ಅವರಿಗೆ ಪರೀಕ್ಷೆ ಮಾಡಿ ರಮೇಶ್ ರವರ ಶವ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿ ದರು.