ಉತ್ತರಕನ್ನಡ: ದಸರಾ ರಜೆ ಮುಕ್ತಾಯಗೊಂಡಿದ್ದ ಇಂದಿನಿಂದ ರಾಜ್ಯಾದ್ಯಾಂತ ಶಾಲೆಗಳು ಪ್ರಾರಂಭವಾಗಿದೆ. ಆದರೆ ಈ ಊರಿನ ಮಕ್ಕಳಿಗೆ ಶಾಲೆಗೆ ಹೋಗಲು ನಿತ್ಯ ಪರದಾಡಬೇಕಿದೆ. ದಟ್ಟ ಕಾಡು, ಹುಲಿ ಕರಡಿ ಆಗಾಗ ಕಾಣಿಸಿಕೊಳ್ಳುವ ದಾರಿಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಮಕ್ಕಳು ನಿತ್ಯ ಶಾಲೆಗೆ ನಡೆದೇ ಹೋಗಬೇಕಾದ ದುಃಸ್ಥಿತಿ. ಹೀಗಾಗಿ ಶಾಲೆಗೆ ಹೋಗಬೇಕು ಬಸ್ ವ್ಯವಸ್ಥೆ ಮಾಡಿ ಸಿಎಂಗೆ ವಿದ್ಯಾರ್ಥಿಗಳು ಕೈ ಮುಗಿದು ಮನವಿ ಮಾಡುತ್ತಿದ್ದಾರೆ. ಇಂತಹ ಹೀನ ಸ್ಥಿತಿಯಲ್ಲಿದ್ದಾರೆ ಉತ್ತರಕನ್ನಡ(School Bus Problem) ಜೋಯಿಡಾ ತಾಲೂಕಿನ ಶಾಲಾ ಮಕ್ಕಳು.
ಜೋಯಿಡಾ ತಾಲೂಕಿನ ಹತ್ತು ಗ್ರಾಮಗಳಿಗೆ ಬಸ್ ವ್ಯವಸ್ಥೆಯೇ ಇಲ್ಲ. ಹುಲಿ, ಕರಡಿ ಓಡಾಡುವ ದಟ್ಟ ಕಾಡಿನ ಮಧ್ಯದಿಂದಲೆ 5 km ಕಾಲ್ನಡಿಗೆಯಲ್ಲಿ ಶಾಲೆಗೆ ವಿದ್ಯಾರ್ಥಿಗಳು ಓಡಾಡುತ್ತಿದ್ದಾರೆ. ಬಸ್ ಇಲ್ಲದಿದ್ದರಿಂದ ಆರನೇ ತರಗತಿಗೆ ಕೆಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕುಗೊಳಿಸಿದ್ದಾರೆ. ಜೋಯಿಡಾ ತಾಲೂಕಿನ ೧೦ ಗ್ರಾಮಗಳಿಗೆ ಇದುವರೆಗೂ ಕೆಎಸ್‌ಆರ್‌ಟಿಸಿ ಬಸ್ ಹೋಗುವುದೇ ಇಲ್ಲ.
ಜೋಯಿಡಾ ತಾಲೂಕಿನ ಕೂಡಲಗಾಂವ, ಮಾಳಂಬಾ, ಹಂಸೆದ, ಗವಳಿವಾಡಾ, ಪೊಲಿಮಾಳ, ಸಿಂಗಗಾವವಾಡಾ, ದುರ್ಗಿ, ಕಾಸಾರವಾಡಿ, ಕುಮ್ರಾಳ ಮತ್ತು ತಿಂಬೊಳಿ ಗ್ರಾಮಗಳಿಗೆ ಬಸ್ ವ್ಯವಸ್ಥೆಯೇ ಇಲ್ಲ. ಕೇವಲ ಐದನೇ ತರಗತಿ ವರೆಗೂ ಮಾತ್ರ ಈ ಗ್ರಾಮಗಳಲ್ಲಿ ಶಾಲೆ ಇದೆ ಆರನೇ ತರಗತಿಯಿಂದ ವಿದ್ಯಾಭ್ಯಾಸ ಮಾಡಲು ಸುಮಾರು ಹತ್ತು ಕಿ.ಮೀ ದೂರ ಇರುವ ಜಗಲಪೇಟ ಗ್ರಾಮಕ್ಕೆ ಹೋಗಬೇಕು. ಕಾಡಿನ ಮಧ್ಯದಿಂದಲೆ ಹಾದು ಜೋಗಬೇಕಿರುವ ಹಿನ್ನೆಲೆ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಐದು ಕಿ.ಮೀ ಕಾಲ್ನಡಿಗೆಯಲ್ಲಿ ಹೋಗಿ ಬಸ್ ಹತ್ತಿ ಹೋಗಬೇಕಿರುವ ದಾರುಣ ಪರಿಸ್ಥಿತಿ ಇದೆ.
ಕೆಲವರು ಶಿಕ್ಷಣ ಮೋಟಕು ಗೊಳಿಸಿದ್ರೆ ಇನ್ನ ಕೆಲವರು ಜೀವ ಭಯದಲ್ಲಿ ಶಾಲೆಗೆ ಹೋಗಬೇಕಿದೆ. ಒಳ್ಳೆಯ ಡಾಂಬರೀಕರಣ ರಸ್ತೆ ಇದ್ರೂ ಬಸ್ ಬಿಡಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಸಾಯಂಕಾಲ 6 ಗಂಟೆಗೆ ಎರಡು ಹೊತ್ತು ಬಸ್ ಬಿಟ್ರೆ ಸಾಕುನಾವು ನಿರಂತರ ಬಸ್ ಗಾಗಿ ಕೇಳುತ್ತಿಲ್ಲ, ದಿನಕ್ಕೆ ಎರಡು ಬಾರಿ ಅಷ್ಟೆ ಬಸ್ ಬಿಡಿ ಎರಡು ಬಸ್ ಬಿಟ್ರೆ ಹತ್ತು ಗ್ರಾಮಗಳನ್ನು ಕವರ್ ಮಾಡಬಹುದು ಎಂದು ಹೇಳುತ್ತಿದ್ದಾರೆ ಗ್ರಾಮಸ್ಥರು.
ಇನ್ನು ಕ್ಷೇತ್ರವನ್ನು ಕೈ ಹಿರಿಯ ಶಾಸಕ ಆರ್ ವಿ ದೇಶಪಾಂಡೆ ಪ್ರತಿನಿಧಿಸುತ್ತಿದ್ದು, ಹಣ ಪಡೆದು ವಿದ್ಯಾರ್ಥಿಗಳಿಗೆ ಕೆ.ಎಸ್ ಆರ್ ಟಿ ಸಿ ಪಾಸ್ ಕೊಟ್ಟಿದೆ ಎನ್ನಲಾಗಿದೆ. ಅವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಇದುವರೆಗೂ ಗ್ರಾಮಕ್ಕೆ ಬಸ್ ವ್ಯಸ್ಥೆ ಆಗಿಲ್ಲ. ವಿದ್ಯಾರ್ಥಿಗಳಿಗೆ ಸಂಕಷ್ಟ ತಪ್ಪಿಲ್ಲ.
ಈ ಸುದ್ದಿಯನ್ನೂ ಓದಿ:ಉತ್ತರಕನ್ನಡ ಲೋಕಸಭಾ ಕ್ಷೇತ್ರ: 11 ಗಂಟೆಗೆ 27.78% ಮತದಾನ