Friday, 20th September 2024

ಬರಗುಡಿ ಗ್ರಾಮದ ಸ.ಹಿ ಪ್ರಾಥಮಿಕ ಶಾಲೆಗೆ ಎಸ್.ಡಿ.ಎಮ್.ಸಿ ಪದಾಧಿಕಾರಿಗಳ ದೇಣಿಗೆ

ಇಂಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬರಗುಡಿ ಗ್ರಾಮದಲ್ಲಿ ನೂತನ ಎಸ್.ಡಿ.ಎಂ.ಸಿ ಪದಾಧಿಕಾರಿಗಳ ಆಯ್ಕೆ ಬರಗುಡಿ ಗ್ರಾಮದ ಚುನಾಯಿತ ಪ್ರತಿನಿಧಿಗಳ ,ಗ್ರಾಮಸ್ಥರ ಸಹಕಾರದಿಂದ ಆಯ್ಕೆ ಮಾಡಲಾಯಿತು.

ಈ ಸಂಧರ್ಬದಲ್ಲಿ ಗ್ರಾಮದ ಮುಖಂಡ ಸೋಮಶೇಖರ ಗಿರಣಿವಡ್ಡರ ಮಾತನಾಡಿ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಇಡೀ ಗ್ರಾಮಸ್ಥರು ಬದ್ದರಾಗಿದ್ದೇವೆ. ಶಾಲೆ ಜೀವಂತ ದೇವರ ಗುಡಿ ಮಕ್ಕಳೆ ದೇವರು ಎಂಬ ಕಲ್ಪನೆಯೊಂದಿಗೆ ಗ್ರಾಮದ ಸುಧಾರಣೆ ಯಲ್ಲಿ ಶಾಲೆಗೆ ಪ್ರಥಮ ಆದೆತ್ಯೆ ನೀಡಲಾಗಿದೆ. ಶಿಕ್ಷಣ ಒಂದು ಚಿನ್ನದ ಆಭರಣವಿದ್ದಂತೆ ಆದ್ದರಿಂದ ಶೈಕ್ಷಣಿಕ ಸುಧಾರಣೆಯಾದರೆ ಇಡೀ ಕುಟುಂಬ, ಸಮಾಜ ,ದೇಶ ಅಭಿವೃದ್ದಿ ಹೊಂದ ಬಲ್ಲದು.

ಶಾಲೆಯ ಸರ್ವಾಂಗೀಣ ಪ್ರಗತಿ ಹೊಂದಲಿ ಎಂಬ ಸದಾಶೇಯದಿಂದ ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷ ಸುಧೀರ ಕಾಮಣ್ಣಾ ಕ್ಷತ್ರಿ ಹಾಗೂ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಸುಮಾರು ೧.೫೦ ಲಕ್ಷ ರೂ ದೇಣಿಗೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಎಸ್.ಬಿ ಪಾಟೀಲ ಇವರಿಗೆ ನೀಡಿರುವುದು ಅವರ ತ್ಯಾಗದ ಗುಣ ಎಂದು ಪ್ರಸಂಶಿಸಿದರು.

ಸಿದ್ದು ಶೆಡಗಿ, ರತನ್‌ಶಾ ಲಿಂಗಸೂರ, ಮರೆಪ್ಪ ಗಿರಣಿವಡ್ಡರ, ಭೀಮಶಾ ವಾಲೀಕಾರ, ಸುರೇಶ ಯಾದವಾಡ, ಸಿದ್ದು ಕ್ಷತ್ರಿ,ಸಾತಪ್ಪ ಕೇಳಗಿನಮನಿ,ಮಲಕಪ್ಪಗೌಡ ಬಿರಾದಾರ, ವಿಲಾಸ ಲಿಂಗಸೂರ, ಸಂಜೀವ ನಾಯ ಕೋಡಿ, ರಪ್ಪ ಹರಳಯ್ಯಾ, ಶಿಲೇಪ್ಪ ಒಡೇಯರ್,ಯಲ್ಲಪ್ಪ ಕುಂಬಾರ ,ಸೈಪನಸಾಬ ಇಂಡಿ ,ಶಿವಾಜಿ ಪೂಜಾರಿ, ನಾಗು ಕ್ಷತ್ರಿ, ಲಕ್ಷö್ಮಣ ಗಾಯಕವಾಡ, ಲಕ್ಷö್ಮಣ  ಪುಲಾರಿ ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.