Wednesday, 4th December 2024

Self Harming: ಯುವಕ ಚುಡಾಯಿಸಿದ್ದಕ್ಕೆ ಬಾಲಕಿ ಆತ್ಮಹತ್ಯೆ; ಮೂವರ ಬಂಧನ

Self Harming

ವಿಜಯಪುರ: ಯುವಕ ಚುಡಾಯಿಸಿದ್ದಕ್ಕೆ ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ. ಪ್ರೀತಿ ಹೆಸರಿನಲ್ಲಿ ಯುವಕನೊಬ್ಬ ಕಿರುಕುಳ ನೀಡುತ್ತಿದ್ದರಿಂದ ಮನೆಯಲ್ಲಿ ನೇಣು ಬಿಗಿದುಕೊಂಡು ಅಪ್ರಾಪ್ತ ವಯಸ್ಸಿನ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಳೆದ ಹಲವು ದಿನಗಳಿಂದ ಅಪ್ರಾಪ್ತ ಬಾಲಕಿ ಹಿಂದೆ ಯುವಕ ಬಿದ್ದಿದ್ದ. ಪ್ರೀತಿ ಹೆಸರಿನಲ್ಲಿ ಬಾಲಕಿಗೆ ಸಂಗಮೇಶ್ ಜುಂಜವಾರ ಎಂಬಾತ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಬಾಲಕಿ ಕಾಲೇಜಿಗೆ ಹೋಗುವಾಗ ಮೈಕೈ ಮುಟ್ಟಿ ಆರೋಪಿ ಮಾತನಾಡಿಸುತ್ತಿದ್ದ. ಅಲ್ಲದೇ ಆಕೆಯ ಜತೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಹೀಗಾಗಿಯೇ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ನನ್ನ ಪ್ರೀತಿಸು ಎಂದು ಬಾಲಕಿಗೆ ಸಂಗಮೇಶ್ ಬಲವಂತ ಮಾಡುತ್ತಿದ್ದ. ಸಂಗಮೇಶನನ್ನು ಪ್ರಶ್ನಿಸಿದ್ದ ಬಾಲಕಿಯ ಸಹೋದರಿಯ ಮೇಲೆ ಕೂಡ ಆತ ಹಲ್ಲೆ ಮಾಡಿದ್ದ. ಅಲ್ಲದೆ ಸಂಗಮೇಶ ವಿರುದ್ಧ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದ ಆರೋಪ ಕೇಳಿ ಬಂದಿದೆ. ಈ ಕುರಿತಂತೆ ನವೆಂಬರ್ 27ರಂದು ಮುದ್ದೇಬಿಹಾಳ ಠಾಣೆಯಲ್ಲಿ ಅಪ್ರಾಪ್ತ ಬಾಲಕಿ ದೂರು ನೀಡಿದ್ದಳು.

ಸಂಗಮೇಶ್, ಮೌನೇಶ್ ಮಾದರ ಹಾಗೂ ಚಿದಾನಂದ ಕಟ್ಟಿಮನಿ ವಿರುದ್ಧ ದೂರು ಸಲ್ಲಿಸಲಾಗಿತ್ತು. ಮೂವರ ವಿರುದ್ಧ ಪೊಲೀಸರು ಇದೀಗ ಪೋಕ್ಸೋ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ಬಾಲಕಿ ಸಾವಿಗೆ ಯುವಕರ ಕಿರುಕುಳವೇ ಕಾರಣ ಎಂದು ಬಾಲಕಿಯ ಪೋಷಕರು, ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಘಟನೆಗೆ ಆರೋಪಿ ಸಂಗಮೇಶನ ಕಿರುಕುಳವೇ ಕಾರಣವೆಂದು ಆರೋಪಿಸಿ ಮುದ್ದೇಬಿಹಾಳ ಪೊಲೀಸ್ ಠಾಣೆ ಎದುರಿಗೆ ಬಾಲಕಿ ಶವ ಇಟ್ಟು ಹೋರಾಟ ಮಾಡಲು ಪೋಷಕರು, ಅವರ ಸಮಾಜದ ಸ್ವಾಮೀಜಿಗಳು, ಮುಖಂಡರು ಸಿದ್ಧತೆ ನಡೆಸುತ್ತಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ನಡೆದಿದ್ದು, ಮುಂಜಾಗ್ರತಾ ಕ್ರಮವಾಗಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ | Viral News: 31 ವರ್ಷಗಳ ಹಿಂದೆ ಕಿಡ್ನ್ಯಾಪ್ ಆಗಿದ್ದವ ಮರಳಿ ಬಂದ- ಆದರೆ ಈ ಕಹಾನಿಯಲ್ಲಿದೆ ಒಂದು ರೋಚಕ ಟ್ವಿಸ್ಟ್!

ಹಾಸ್ಟೆಲ್‌ನಲ್ಲಿ ಕೆಎಲ್‌ಇ ಸಂಸ್ಥೆಯ ಕಾನೂನು ವಿದ್ಯಾರ್ಥಿ ನೇಣಿಗೆ ಶರಣು

ಬೆಳಗಾವಿ : ಕೆಎಲ್‌ಇ ಸಂಸ್ಥೆಯ ಕಾನೂನು ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ. ಚಿಕ್ಕೋಡಿಯ ಶಶಾಂಕ್ ಬಟಕುರ್ಕಿ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಆತ್ಮಹತ್ಯೆಗೆ ಕಾರಣವೇನು ಎಂಬುವುದು ತಿಳಿದು ಬಂದಿಲ್ಲ.

ಭೀಕರ ಭೂಕುಸಿತ- 5 ಮಕ್ಕಳು ಸೇರಿ ಒಂದೇ ಕುಟುಂಬದ ಏಳು ಮಂದಿ ದುರ್ಮರಣ!

Cyclone Fengal

ಚೆನ್ನೈ : ಫೆಂಗಲ್‌ ಚಂಡಮಾರುತ (Cyclone Fengal) ತಮಿಳು ನಾಡು (Tamil Nadu) ಹಾಗೂ ಪುದುಚೇರಿಯಲ್ಲಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿ ಮಾಡಿದೆ. ರಾಜ್ಯದಲ್ಲಿ ಸುರಿದ ನಿರಂತರ ಮಳೆಯ ಕಾರಣ ಹಲವೆಡೆ ಪ್ರವಾಹ ಹಾಗೂ ಭೂ ಕುಸಿತ ಸಂಭವಸಿದೆ. ತಮಿಳು ನಾಡಿನ ತಿರುವಣ್ಣಾಮಲೈನ ಅಣ್ಣಾಮಲೈಯಾರ್ ಬೆಟ್ಟದ ತಪ್ಪಲಿನಲ್ಲಿರುವ ವಿಒಸಿ ನಗರದಲ್ಲಿ ಭೂಕುಸಿತ (Land Fall) ಸಂಭವಿಸಿತ್ತು. ಮಂಗಳವಾರ ಅವಶೇಷಗಳಡಿ ಸಿಲುಕಿದ್ದ ಮೃತ ದೇಹವನ್ನು ಹೊರತೆಗೆಯಲಾಗಿದೆ.

ಭಾನುವಾರ ಸಂಜೆ ಭೂಕುಸಿತ ಸಂಭವಿಸಿತ್ತು, ಐದು ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಭಾರೀ ಮಳೆಯಿಂದ ಸಡಿಲಗೊಂಡ ಬೃಹತ್ ಬಂಡೆಯೊಂದು  ಸಂಜೆ 4:30 ಕ್ಕೆ ಅಣ್ಣಾಮಲೈಯಾರ್ ಬೆಟ್ಟದ ಕೆಳ ಇಳಿಜಾರಿನಲ್ಲಿರುವ ಮನೆಯೊಂದಕ್ಕೆ ಅಪ್ಪಳಿಸಿದಾಗ ಈ ಘಟನೆ ಸಂಭವಿಸಿದೆ.

ಚೆನ್ನೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಜ್ಞರು ಸೇರಿದಂತೆ ರಕ್ಷಣಾ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಈಗಾಗಲೇ ಮೃತರ ದೇಹಗಳನ್ನು ಹೊರತೆಗೆಯಲಾಗಿದೆ. ಸೋಮವಾರ ದೇವಸ್ಥಾನದ ಬಳಿ ಎರಡನೇ ಬಾರಿ ಭೂಕುಸಿತ ಸಂಭವಿಸಿದ್ದು, ಯವುದೇ ಸಾವುನೋವುಗಳಾಗಿಲ್ಲ ಎಂದು ವರದಿಯಾಗಿದೆ.

ಫೆಂಗಲ್‌ ಚಂಡಮಾರುತವು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ದಾಖಲೆಯ ಮಳೆಗೆ ಕಾರಣವಾಗಿದೆ. ಶನಿವಾರ ರಾತ್ರಿಯಿಂದ ಚಂಡಮಾರುತ ಈ ಪ್ರದೇಶವನ್ನು ಹಾದುಹೋಗಿದ್ದು, ಭಾನುವಾರ ಬೆಳಗ್ಗೆ 9 ಗಂಟೆವರೆಗೆ 24 ಗಂಟೆಗಳ ಅವಧಿಯಲ್ಲಿ 46 ಸೆಂಟಿ ಮೀಟರ್‌ ಮಳೆಯಾಗಿದೆ. ಇದು 30 ವರ್ಷಗಳಲ್ಲೇ ಅತ್ಯಧಿಕ ಮಳೆಯಾಗಿದೆ.

ಕೇರಳಕ್ಕೂ ಫೆಂಗಲ್‌ ಎಂಟ್ರಿ

ಸೋಮವಾರ ಕೇರಳಕ್ಕೆ ಫೆಂಗಲ್‌ ಚಂಡಮಾರುತ ಎಂಟ್ರಿ ಕೊಟ್ಟಿದ್ದು, ಕೇರಳದ ಹಲವು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಕಾಸರಗೋಡು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ರಾಜ್ಯದಲ್ಲಿ ಫೆಂಗಲ್‌ನಿಂದ ಮಳೆಯಾಗಿತ್ತಿದ್ದು, ಕೆಲವು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಜನರು ಪರೆದಾಡುತ್ತಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದ್ದು, ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ.

ಈ ಸುದ್ದಿಯನ್ನೂ ಓದಿ : Cyclone Fengal: ಫೆಂಗಲ್‌ ಎಫೆಕ್ಟ್‌, ಮೂರು ಜಿಲ್ಲೆಗಳ ಶಾಲೆ ಕಾಲೇಜುಗಳಿಗೆ ರಜೆ, ಬೆಂಗಳೂರಿನಲ್ಲೂ ಮಳೆ