Saturday, 4th January 2025

Ramachari: ಮುಡಿ ಕೊಟ್ಟ ಚಾರು – ರಾಮಾಚಾರಿ ಧಾರಾವಾಹಿ ಮೂಲಕ ಹೊಸ ಇತಿಹಾಸ ಸೃಷ್ಟಿ!

ರಾಮಾಚಾರಿ (Ramachari) ಧಾರಾವಾಹಿಯಲ್ಲಿ ಚಾರು ಎಲ್ಲರ ಒಳಿತನ್ನೇ ಬಯಸುತ್ತಾಳೆ. ಯಾರಿಗೆ ಏನಾದರೂ ತಾನು ನೊಂದುಕೊಳ್ಳುತ್ತಾಳೆ. ಅಷ್ಟು ಒಳ್ಳೆಯ ಗುಣ ಹೊಂದಿರುವ ಅವಳನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. (Serial Time) ಜೈಲಿನಿಂದ ಬಿಡುಗಡೆಯಾಗಿ ಬಂದ ಅವಳ ಅಕ್ಕ ವೈಶಾಖ ಇನ್ನಷ್ಟು ಕೆಟ್ಟ ಬುದ್ದಿಯನ್ನು ಹೊತ್ತು ತಂದಿದ್ದಾಳೆ. ಸಾಕಷ್ಟು ಬಾರಿ ಈ ಬಗ್ಗೆ ಯೋಚನೆ ಮಾಡಿ, ರಾಮಾಚಾರಿ ಮನೆಗೆ ತಾನು ಏನೇನೆಲ್ಲ ಕೆಡುಕು ತರಬಹುದು ಎಂದು ಯೋಚನೆ ಮಾಡಿಕೊಂಡೇ ಬಂದಿದ್ದಾಳೆ. ಈಗ ಚಾರುಗೆ ತಾನು ಹರಕೆ ಹೊತ್ತುಕೊಂಡಿದ್ದೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಚಾರು ತಲೆ ಬೋಳಿಸುವ ಕುತಂತ್ರ ಮಾಡಿದ್ದಾಳೆ.

ಹೌದು ವೈಶಾಖಾ ಮನೆಯಲ್ಲೇ ಕುಳಿತುಕೊಂಡು, ನನ್ನ ಬಳಿ ದೇವಸ್ಥಾನಕ್ಕೆ ಬರೋಕೆ ಆಗೋದಿಲ್ಲ. ನಿನಗೇ ಗೊತ್ತು ನನ್ನ ಕಾಲು ಸರಿ ಇಲ್ಲ. ಆದರೆ ನನ್ನ ಕಾಲಿನ ಸಲುವಾಗಿ ನೀನು ನಾನು ಹೊತ್ತ ಹರಕೆಯನ್ನು ತೀರಿಸಬೇಕು ಎಂದು ಹೇಳಿರುತ್ತಾಳೆ. ಆಗ ಚಾರು ಖುಷಿಯಿಂದ ಅದನ್ನು ಒಪ್ಪಿಕೊಂಡಿರುತ್ತಾಳೆ. ಆದರೆ ಹರಕೆ ಮಾತ್ರ ಸರಳವಾದ ಹರಕೆ ಆಗಿರುವುದಿಲ್ಲ. ಉರುಳು ಸೇವೆ ಮಾಡಬೇಕು, ಮುಡಿ ಕೊಡಬೇಕು ಎಂದೆಲ್ಲ ಹೇಳಿರುತ್ತಾಳೆ. ಆದರೂ ಚಾರು ಅದೆಲ್ಲವನ್ನೂ ಒಪ್ಪಿಕೊಂಡಿರುತ್ತಾಳೆ.

ಚಾರುಲತಾಳ ಸೌಂದರ್ಯಕ್ಕೆ ಪೆಟ್ಟು ಬೀಳಬೇಕು ಅಂತ ದೇವರಿಗೆ ಹರಕೆ ಇದೆ ಅಂತ ಸುಳ್ಳು ಹೇಳಿ ಚಾರುಲತಾ ಮುಡಿ ಕೊಡುವ ಹಾಗೆ ವೈಶಾಖ ಮಾತು ತೆಗೆದುಕೊಂಡಿದ್ದು, ಕೊಟ್ಟ ಮಾತಿನಂತೆ ಚಾರುಲತಾ ಮುಡಿ ಕೊಟ್ಟಿದ್ದಾಳೆ. ಅದನ್ನ ಕಂಡು ವೈಶಾಖ ಹಾಗೂ ರುಕ್ಮಿಣಿ ಖುಷಿ ಪಟ್ಟಿದ್ದು, ಅವರು ಹೊಡಿದ ಸಂಚಿಗೆ ಚಾರು ಬಲಿಯಾಗಿದ್ದಾಳೆ.

ಈ ಸುದ್ದಿಯನ್ನೂ ಓದಿ: Shiva Rajkumar: ಶಿವಣ್ಣಗೆ ಆಗಿದ್ದೇನು, ಸರ್ಜರಿಯಲ್ಲಿ ತೆಗೆದ ಅಂಗ ಯಾವುದು; ಈಗ ರಿವೀಲ್!‌

ಇನ್ನು ಕಿರುತೆರೆಯ (Small Screen) ಇತಿಹಾಸದಲ್ಲೇ ‘ರಾಮಾಚಾರಿ’ ಧಾರಾವಾಹಿಯ ಚಾರುಲತಾ ಪಾತ್ರಧಾರಿ ಇಂತಹ ತಲೆಯನ್ನು ಬೋಳಿಸುವ ಸಾಹಸ ಮಾಡಿರುವುದು ಧಾರಾವಾಹಿ ಹಿಸ್ಟರಿಯಲ್ಲಿಯೇ ಹೊಸ  ಮೈಲುಗಲ್ಲನ್ನು ಸೃಷ್ಟಿಸಿದೆ.

ಇನ್ನು ವೈಶಾಖ ಮಾತನ್ನು ನಂಬಿ ಚಾರು ಇಷ್ಟು ಬೇಗ ಮೋಸ ಹೋಗದ್ದು ಹೇಗೆ ಅಂತ ಫ್ಯಾನ್ಸ್​ ಬೇಸರ ಹೊರ ಹಾಕಿದ್ದಾರೆ. ಆದೆ ನಿಜವಾಗಲೂ ಚಾರು ತಲೆ ಬೋಳಿಸಿಕೊಂಡಿಲ್ಲ. ಬದಲಾಗಿ ತಲೆ ಬೋಳಿಸಿಕೊಂಡ ಹಾಗೆ ಚಾರುಗೆ ಮೇಕಪ್ ಮತ್ತು ಹೇರ್‌ ಸ್ಟೈಲ್ ಮಾಡಲಾಗಿದೆ. ನಟಿ ಮೌನ ಅವರು ಇದೇ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಹೃದಯದಲ್ಲಿ ಕೃಪೆ, ಆತ್ಮದಲ್ಲಿ ಶಕ್ತಿ. ಹೊಸ ವರ್ಷ ಮುಂಗಡ ಶುಭಾಶಯಗಳು.

ನಿಮ್ಮ ಜೀವನದಲ್ಲಿ ಹೊಸ ಆರಂಭ, ಹೊಸ ಆಶಯಗಳು ಮತ್ತು ಹೊಸ ಯಶಸ್ಸುಗಳು ಪ್ರತಿ ಹಂತದಲ್ಲೂ ಬೆಳಗುಹೊರಿಸಲಿ. ಈ ಹೊಸ ವರ್ಷವು ನಿಮಗೆ ಆರೋಗ್ಯ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ಹೊಸ ವರ್ಷ ನಿಮಗೆ ಸಂತೋಷಕರವಾಗಲಿ ಅಂತ ಬರೆದುಕೊಂಡಿದ್ದಾರೆ