ಶಿಕ್ಷಕರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ
ಹಗರಿಬೊಮ್ಮನಹಳ್ಳಿ : ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಗೆಲುವು ನಿಶ್ಚಿತ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಹೇಳಿದರು.
ಪಟ್ಟಣದ ಶಾಸಕರ ಕಛೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ ದರು. ಪಕ್ಷ ಯಾವುದೇ ಇರಲಿ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವ ವ್ಯೆಕ್ತಿ ಶರಣಪ್ಪ ಮಟ್ಟೂರ ಅಗಿದ್ದಾರೆ, ಈ ಭಾಗದ ಶಿಕ್ಷಕರ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸಲು ಕಾಂಗ್ರೇಸ್ ಪಕ್ಷಕ್ಕೆ ನಿಮ್ಮ ಮತ ನೀಡಬೇಕಿದೆ. ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿ ಯನ್ನು ಆರಿಸಬೇಕು ಆ ಕಾರ್ಯವನ್ನು ಶಿಕ್ಷಕರು ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಈ ಭಾಗಕ್ಕೆ ಕಾಂಗ್ರೇಸ್ ಪಕ್ಷದ ಆಡಳಿತ ದಲ್ಲಿ ಶಾಸಕ ಭೀಮಾನಾಯ್ಕ್ ಶಿಕ್ಷಣ ಕ್ಷೇತ್ರಕ್ಕೆ ನೂರು ಕೋಟಿ ಅನುದಾನವನ್ನು ನೀಡಿರುವುದು ಪಕ್ಷದ ಶೈಕ್ಷಣಿಕ ಕಾರ್ಯಗಳ ಉದಾಹರಣೆಯಾಗಿವೆ ಎಂದರು.ಶಿಕ್ಷಣ ಹಾಗೂ ಶಿಕ್ಷಕರ ಬಗ್ಗೆ ಕಾಳಜಿ ಹೊಂದಿರುವ ಶರಣಪ್ಪ ಮಟ್ಟೂರು ಅವರನ್ನು ಶಿಕ್ಷಕ ಸಮೂಹವು ಮತ ನೀಡಿ ಗೆಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು.
ಶಾಸಕ ಭೀಮಾನಾಯ್ಕ್ ಮಾತನಾಡಿ ಕಳೆದ ಏಳು ವರ್ಷದಲ್ಲಿ ಕ್ಷೇತ್ರದಲ್ಲಿನ ಶೈಕ್ಷಣಿಕ ಅಭಿವೃಧ್ಧಿಗಾಗಿ 125 ಕೋಟಿ ಅನುದಾನ ನೀಡಲಾಗಿದ್ದು ನಮ್ಮ ಕಾಂಗ್ರೇಸ್ ಕ್ಷದಿಂದ ಸಾಧ್ಯವಾಗಿದೆ ಶಿಕ್ಷಕರ ಪ್ರಮುಖ ಸಮಸ್ಯೆಯಾದ ಎನ್‍ಪಿಎಸ್ ಗೆ ಶಾಶ್ವತ ಪರಿಹಾರ ದೊರಕಿಸುವುದು,ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವುದುರಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರು ಮೂಂಚುಣಿ ಯಲ್ಲಿದ್ದು ಕಲ್ಯಾಣ ಕರ್ನಾಟಕದ ಹಲವಾರು ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಹಾಗಾಗಿ ನಮ್ಮ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರಿಗೆ ಮತ ನೀಡಿ ಚುನಾಯಿಸಬೇಕೆಂದರು.
ಪಕ್ಷದ ಹಿರಿಯರಾದ ಬಿ.ವಿ.ಶಿವಯೋಗಿ,ಹೇಗ್ಡಾಳ ರಾಮಣ್ಣ,ಡಿಶ್ ಮಂಜುನಾಥ್,ಮುಟುಗನ ಹಳ್ಳಿ ಕೊಟ್ರೇಶ್, ಅಕ್ಕಿ ತೋಟೇಶ್, ಅಜಿಜುಲ್ಲಾ, ಕನ್ನಿಹಳ್ಳಿ ಚಂದ್ರಶೇಖರ್,ಹುಡೇದ ಬಸವರಾಜ ಇನ್ನು ಮುಂತಾದವರು ಇದ್ದರು.