ಬೆಂಗಳೂರು: ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆ ಬಳಿಕ ಇದೇ ಮೊದಲ ಬಾರಿಗೆ ವಿಡಿಯೊ ಮೂಲಕ ಹ್ಯಾಟ್ರಿಕ್ ಹೊರೋ ಶಿವರಾಜ್ ಕುಮಾರ್(Shiva Rajkumar) ಕಾಣಿಸಿಕೊಂಡಿದ್ದಾರೆ. ವಿಡಿಯೊ ಸಂದೇಶದ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತು ನಾಡಿನ ಜನತೆಗೆ ಶಿವಣ್ಣ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.
ಮಾತನಾಡೋಕೆ ಭಯ ಆಗುತ್ತದೆ, ಮಾತನಾಡುವಾಗ ಸ್ವಲ್ಪ ಭಾವುಕನಾಗುತ್ತೇನೆ. ಹೊರಡುವಾಗ ಸ್ವಲ್ಪ ಎಮೋಷನಲ್ ಆಗಿದ್ದೆ. ಭಯ ಅನ್ನೋವುದು ಮನುಷ್ಯನಿಗೆ ಇರುತ್ತದೆ. ಆದರೆ ಭಯ ನೀಗಿಸುವ ಅಭಿಮಾನಿಗಳು, ಸಹಕಲಾವಿದರು ಇದ್ದಾರೆ. ಸ್ನೇಹಿತರು, ಸಂಬಂಧಿಕರು, ಡಾಕ್ಟರ್ಸ್ ಎಲ್ಲರೂ ಜತೆಗಿರುತ್ತಾರೆ. ಎಲ್ಲರೂ ಮಗುವಿನಂತೆ ನನ್ನನ್ನು ನೋಡಿಕೊಂಡಿದ್ದಾರೆ ಎಂದು ಶಿವಣ್ಣ ವಿಡಿಯೊದಲ್ಲಿ ಹೇಳಿದ್ದಾರೆ.
45 ಸಿನಿಮಾದ ಇಡೀ ಶೂಟಿಂಗ್ ಕಿಮೋ ಥೆರಪಿಯಲ್ಲಿಯೇ ಶೂಟ್ ಮಾಡಿರುವುದು. ಅದು ನನ್ನಿಂದ ಹೇಗೆ ಸಾಧ್ಯವಾಯ್ತು ಎಂಬುದೇ ಎಂದು ಅಚ್ಚರಿ. ಪತ್ನಿ ಗೀತಾ, ಮಗಳು ನಿವಿ ಯಾವಾಗಲೂ ನನ್ನ ಬೆಂಬಲವಾಗಿ ನಿಂತಿದ್ದಾರೆ. ಯೂರಿನರಿ ಬ್ಲಾಡ್ ತೆಗೆದು ಹೊಸದು ಬ್ಲಾಡ್ ಹಾಕಿದ್ದಾರೆ. ಯಾರು ಗಾಬರಿ, ಭಯಪಡಬೇಡಿ. ನಿಧಾನವಾಗಿ ಮುಂದುವರಿಯಿರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ನಾನು ಡಬಲ್ ಪವರ್ನೊಂದು ಮರಳಿ ಬರುತ್ತೇನೆ ಎಂದು ಶಿವಣ್ಣ ವ್ಯಕ್ತಪಡಿಸಿದ್ದಾರೆ.
ಇನ್ನು ವಿಡಿಯೊದಲ್ಲಿ ಶಿವಣ್ಣ ಪತ್ನಿ ಗೀತಾ ಮಾತನಾಡಿದ್ದು, ಶಿವರಾಜ್ಕುಮಾರ್ ಅವರ ಎಲ್ಲಾ ವೈದ್ಯಕೀತ ರಿಪೋರ್ಟ್ ಬಂದಿವೆ. ಶಿವಣ್ಣ ಈಗ ಕ್ಯಾನ್ಸರ್ ಫ್ರೀ.. ನಿಮ್ಮ ಪ್ರಾರ್ಥನೆ ಫಲಿಸಿದೆ. ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Shivarajkumar: ಕುತ್ತಾರಿನ ಕೊರಗಜ್ಜ ದೈವದ ದರ್ಶನ ಪಡೆದ ಶಿವರಾಜ್ಕುಮಾರ್ ದಂಪತಿ
ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಅವರು ಅನಾರೋಗ್ಯದ ಕಾರಣ ಅಮೆರಿಕದ ಪ್ಲೋರಿಡಾದಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್ಟಿಟ್ಯೂಟ್ ಗೆ ಶಸ್ತ್ರ ಚಿಕಿತ್ಸೆಗಾಗಿ ದಾಖಲಾಗಿದ್ದರು. ಡಾ. ಮುರುಗೇಶ್ ನೇತೃತ್ವದಲ್ಲಿ ಈ ಆಪರೇಷನ್ ನಡೆದಿದ್ದು, ಅವರು ಆಸ್ಪತ್ರೆಯಲ್ಲೇ ಒಂದು ತಿಂಗಳ ಕಾಲ ವಿಶ್ರಾಂತಿಯನ್ನು ಪಡೆಯಲಿದ್ದಾರೆ.