Sunday, 15th December 2024

ಎ.18 ರಂದು ಶಾಸಕ ಶಿವಾನಂದ ಪಾಟೀಲರಿಂದ ನಾಮಪತ್ರ ಸಲ್ಲಿಕೆ

ಕೊಲ್ಹಾರ: ಶಾಸಕ ಶಿವಾನಂದ ಪಾಟೀಲರು ಕಾರ್ಯಕರ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಏಪ್ರಿಲ್‍ 18 ರಂದು ನಾಮಪತ್ರ ಸಲ್ಲಿಸುವರು ಎಂದು ಮಾಜಿ ಜಿ.ಪಂ ಸದಸ್ಯ ಕಲ್ಲು ದೇಸಾಯಿ, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ ಹೇಳಿದರು.

ಕೊಲ್ಹಾರ ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬ.ಬಾಗೇವಾಡಿ ಪಟ್ಟಣದಲ್ಲಿ ವಿಜೃಂಭಣೆ ಯಿಂದ ನಡೆಯಲಿರುವ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಶಾಸಕ ಶಿವಾನಂದ ಪಾಟೀಲರ ಅಭಿಮಾನಿಗಳು ಭಾಗವಹಿಸಬೇಕು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ.ಪಂ ಸದಸ್ಯ ಸಿ.ಎಸ್ ಗಿಡ್ಡಪ್ಪಗೋಳ, ಎಸ್.ಬಿ ಪತಂಗಿ, ಮಹಾಂತೇಶ ಗಿಡ್ಡಪ್ಪಗೋಳ, ಶಿವಪ್ಪ ವಾಲೀಕಾರ, ದಶರಥ ಈಟಿ, ಅಬ್ಬು ಪಕಾಲಿ, ಯಮನೂರಿ ಮಾಕಾಳಿ, ರಂಜನ್ ಮೇತ್ರಿ, ಸಿಡ್ಲಪ್ಪ ತಳಕೇರಿ ಇತರರು ಇದ್ದರು.