Thursday, 26th December 2024

Shocking: ಕಲಬುರಗಿಯಲ್ಲಿ ವಿದ್ಯುತ್ ತಗುಲಿ ರಸ್ತೆಯಲ್ಲೇ ಬಿದ್ದು ಒದ್ದಾಡಿದ ತಾಯಿ-ಮಗ; ವಿಡಿಯೊ ವೈರಲ್

ಕಲಬುರಗಿ: ವಿದ್ಯುತ್ ಶಾಕ್ (Electrical Shock) ತಗುಲಿ ತಾಯಿ-ಮಗ(Mother and Son) ಇಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ಕಲಬುರಗಿಯಲ್ಲಿ(Kalburgi) ಇತ್ತೀಚೆಗೆ ನಡೆದಿದ್ದು, ಘಟನೆಯ ಆಘಾತಕಾರಿ (Shocking) ವಿಡಿಯೊ ಈಗ ಸಾಕಷ್ಟು ವೈರಲ್(Viral) ಆಗಿದೆ.

ತನ್ನ ಬುದ್ಧಿಮಾಂದ್ಯ ಮಗನನ್ನು ಶಾಲಾ ಬಸ್ ಹತ್ತಿಸಲು ಹೋದಾಗ 34 ವರ್ಷದ ಮಹಿಳೆ ವಿದ್ಯುತ್ ಸ್ಪರ್ಶಿಸಿದೆ. ಈ ವೇಳೆ ಮಗನಿಗೂ ಶಾಕ್‌ ತಗುಲಿದ್ದು, ಇಬ್ಬರೂ ರಸ್ತೆಯಲ್ಲೇ ಬಿದ್ದು ಒದ್ದಾಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆ ಸೋಮವಾರ(ಡಿ.23) ಬೆಳಗ್ಗೆ ನಗರದ ಮೋಹನ್‌ ಲಾಡ್ಜ್‌ ಮುಂಭಾಗ ನಡೆದಿದ್ದು, ಭಾಗ್ಯಶ್ರೀ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಗನಿಗೂ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ.

ಸಿಸಿಟಿವಿ ದೃಶ್ಯಾವಳಿಗಳು ಭಾಗ್ಯಶ್ರೀ ತನ್ನ ಮಗನೊಂದಿಗೆ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವುದನ್ನು ತೋರಿಸುತ್ತದೆ. ಬೆಳಗ್ಗೆ 9.21 ಕ್ಕೆ ಶಾಲಾ ಬಸ್ ಬರುತ್ತಿದ್ದಂತೆ, ಅವಳು ತನ್ನ ಮಗನ ಜೊತೆ ಬಸ್ ಹತ್ತಿರ ಬಂದಿದ್ದಾಳೆ. ಮಗನನ್ನು ಬಸ್ ಹತ್ತಿಸಲು ಮುಂದಾಗುತ್ತಿದ್ದಂತೆ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕೆ ತುಳಿದಿದ್ದಾಳೆ.

ಕೆಲವು ಕ್ಷಣಗಳ ನಂತರ ಆಕೆಯ ದೇಹದಿಂದ ಕಿಡಿಗಳು ಬಂದಿದ್ದು, ಕೆಳಗೆ ಕುಸಿದುಬಿದ್ದಿದ್ದಾಳೆ. ಮಾಹಿತಿಯ ಪ್ರಕಾರ, ಜನರು ಸಹಾಯ ಮಾಡಲು ಪ್ರಯತ್ನಿಸುತ್ತಿದ್ದರೂ ದೊಡ್ಡ ಕಿಡಿಗಳು ಬರುತ್ತಿದ್ದಂತೆ ಹೆದರಿ ಹಿಂದೆ ಸರಿದಿದ್ದಾರೆ. ನಂತರ ಭಾಗ್ಯಶ್ರೀ ಮತ್ತು ಅವರ ಮಗನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಹಿಳೆಯ ಕೈ ಮತ್ತು ಹೊಟ್ಟೆಗೆ ಗಂಭೀರ ಗಾಯಗಳಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ ಎನ್ನಲಾಗಿದೆ. ಜೆಸ್ಕಾಂ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಬಸ್ ನಿಲ್ದಾಣದ ಬಳಿ ನೇತಾಡುತ್ತಿದ್ದ ಲೈವ್ ವಿದ್ಯುತ್ ಕೇಬಲ್ ನಿಂದಾಗಿ ವಿದ್ಯುತ್ ಆಘಾತ ಸಂಭವಿಸಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

11 ಬುದ್ಧಿಮಾಂದ್ಯ ಮಕ್ಕಳು ಬಚಾವ್!

ಬುದ್ಧಿಮಾಂದ್ಯ ಮಗನನ್ನ ಶಾಲಾ ಬಸ್​ಗೆ ಹತ್ತಿಸುವಾಗ ಭಾಗ್ಯಶ್ರೀಗೆ ವಿದ್ಯುತ್ ತಗುಲಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ 11 ಬುದ್ಧಿಮಾಂದ್ಯ ಮಕ್ಕಳು ಬಚಾವ್ ಆಗಿದ್ದಾರೆ‌ ಎಂದು ತಿಳಿದು ಬಂದಿದೆ. ಕಲಬುರಗಿ ನಗರದ ಹಮಾಲವಾಡಿ ಬಡಾವಣೆ ನಿವಾಸಿ ಭಾಗ್ಯಶ್ರೀ ಚಿಂತಾಜನಕ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಜೆಸ್ಕಾಂ ನಿರ್ಲಕ್ಷ್ಯದಿಂದ ವಿದ್ಯುತ್ ದುರಂತ ಸಂಭವಿಸಿದೆ ಎನ್ನಲಾಗಿದೆ. ಜೋತು ಬಿದ್ದ ವಿದ್ಯುತ್ ವೈಯರ್ ಶಾಲಾ ಬಸ್ ಮೇಲ್ಭಾಗಕ್ಕೆ ತಗುಲಿ ವಿದ್ಯುತ್ ಪಸರಿಸಿದೆ. ಜೆಸ್ಕಾಂ ನಿರ್ಲಕ್ಷ್ಯದಿಂದ ಜನರ ಜೀವಕ್ಕೆ ಅಪಾಯ ಎದುರಾಗುತ್ತಿದೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Physical Assault: ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಅಣ್ಣಾ ವಿವಿಯಲ್ಲಿ ಇದೆಂಥಾ ಪೈಶಾಚಿಕ ಕೃತ್ಯ!