ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಆಗಿದಷ್ಟು ದಿನವೂ ಎಸ್.ಎಂ ಕೃಷ್ಣ(SM Krishna) ಹಲವಾರು ರಾಜಕೀಯ ಏಳುಬೀಳುಗಳನ್ನು ಕಂಡವರು. ಅದರಲ್ಲೂ ವರನಟ ಡಾ.ರಾಜ್‌ಕುಮಾರ್ ಅಪಹರಣ ಕೃಷ್ಣ ಸರ್ಕಾರಕ್ಕೆ ಚಕ್ರವ್ಯೂಹದಷ್ಟೇ ಸವಾಲಾಗಿತ್ತು. ಡಾ ರಾಜ್ ಕುಮಾರ್ ಅವರನ್ನು ಅಪಹರಿಸಿ ಸುಮಾರು 100ಕ್ಕೂ ಹೆಚ್ಚು ದಿನಗಳ ಕಳೆದಿದ್ದವು. ಸರ್ಕಾರದ ಭಾರಿ ಪ್ರಯತ್ನ ಫಲ ಕೊಟ್ಟಿರಲಿಲ್ಲ. ಕೊನೆಯದಾಗಿ ಡಾ ಶುಭಾ ಅವರ ನೆರವಿನಿಂದ ವೀರಪ್ಪನ್ ಜೊತೆಗೆ ಸಂಧಾನ ಸಾಧಿಸುವಲ್ಲಿ ಯಶಸ್ವಿಯಾಯಿತು.
108 ದಿನಗಳ ಬಳಿಕ ಅಣ್ಣಾವ್ರ ಬಿಡುಗಡೆಯಾಯಿತು. ರಾಜ್ ಕುಮಾರ್ ಅವರನ್ನು ಕರೆದುಕೊಂಡು ಬಂದ ನಂತರ ಕೆಲವು ಬೆಳವಣಿಗೆಗಳು ಆದವು. ಈ ನಡುವೆ ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್ ಎಂ ಕೃಷ್ಣ ಅವರಿಗೆ ಈ ವಿಚಾರದಲ್ಲಿ ಯಾವುದೇ ಕ್ರೆಡಿಟ್ ಸಿಕ್ಕಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.
ರಾಜಕುಮಾರ್‌ರವರು ಬಂದರು. ಬೆಂಗಳೂರಿನಲ್ಲಿ ಅವರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು. ನನ್ನ ಹೆಸರು ಹೇಳಲೇ ಇಲ್ಲ ವಿಧಾನಸೌಧದಲ್ಲಿ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮರೆತು ಕೂಡ ಅವರು ಎಸ್.ಎಂ ಕೃಷ್ಣ ಹೆಸರನ್ನು ತೆಗೆದುಕೊಳ್ಳಲಿಲ್ಲ. ಅದು ಉದ್ದೇಶಪೂರ್ವಕವಾಗಿಯೇ ಮಾಡಿದ್ದೂ ಆಥವಾ ಮರೆತರೋ ಗೊತ್ತಿಲ್ಲ. ಡಾ ರಾಜಕುಮಾರ್ ಬಿಡುಗಡೆಯಾಗಿ ಬಂದಮೇಲೆ ನ್ಯಾಷನಲ್ ಕಾಲೇಜ್ ಆವರ ಬೃಹತ್ ಸಾರ್ವಜನಿಕ ಸಭೆ ಏರ್ಪಾಡಾಗಿತ್ತು. ಅಲ್ಲಿಯೂ ಅಪ್ಪಿ-ತಪ್ಪಿಯೂ ರಾಜ್‌ಕುಮಾರ್ ಅವರಾಗಲೀ ಅವರ ಕುಟುಂಬಸ್ಥರಾಗಲೀ ಎಸ್.ಎಂ ಕೃಷ್ಣ ಅವರ ಹೆಸರು ಎತ್ತಲೇ ಇಲ್ಲ.
ಇನ್ನು ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಂದಿನ ಅಧ್ಯಕ್ಷ ತಲ್ಲಂ ನಂಜುಂಡ ಶೆಟ್ಟಿ ಒಮ್ಮೆ ಮಾತನಾಡಿದ್ದರು. ಸ್ವತಃ ಎಸ್.ಎಂ ಕೃಷ್ಣ ಅವರಿಗೆ ಈ ಬಗ್ಗೆ ಬಹಳ ಬೇಸರ ಇತ್ತು. ಈ ಬಗ್ಗೆ ಅವರು ಸ್ವತಃ ತಮ್ಮ ಆತ್ಮಕಥೆಯಲ್ಲಿ ಪ್ರಸ್ತಾಪಿಸಿದ್ದರು. ವೀರಪ್ಪನ್ ಸರ್ಕಾರಕ್ಕೆ ಸಹಾಯ ಮಾಡಿದ ಶುಭಾ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಿಗೆ ಬಹಳ ದಿನಗಳಿಂದ ಚಳ್ಳೆಹಣ್ಣು ತಿನ್ನಿಸಿದ ಈ ಸಂದರ್ಭದಲ್ಲಿ ಡಾ. ಶುಭಾ ಸಹಾಯ ಮಾಡಿದರು. ಡಾ. ಶುಭಾ ವೀರಪ್ಪನ್ ನ ಸಂಪರ್ಕ ಸಾಧಿಸಿ ರಾಜಕುಮಾರ್ ಅವರನ್ನು ಬಿಡುಗಡೆಗೊಳಿಸಲು ಒಪ್ಪಿಸಿದ್ದಳು. ಆಕೆ ಡಾಕ್ಟರ್ ಆಗಿ ಆತನಿಗೆ ಚಿಕಿತ್ಸೆ ಕೊಟ್ಟಿರಬಹುದು, ನಿರ್ದಿಷ್ಟ ಸ್ಥಳವೊಂದರಲ್ಲಿ ರಾಜಕುಮಾರ್ ರವರನ್ನು ವೀರಪ್ಪನ್ ಒಪ್ಪಿಸುವುದಾಗಿ ಕೊಳತ್ತೂರು ಮಣಿ ನನಗೆ ಸಂದೇಶ ಕಳುಹಿಸಿದರು. ನಾವು ಅಲ್ಲಿಗೆ ಹೆಲಿಕಾಪ್ಟರ್ ಕಳುಹಿಸಿದವು.
ರಾಜಕುಮಾರ್‌ರವರನ್ನು ಅಪಹರಣ ಮಾಡಿದ ನೂರಾ ಎಂಟು ದಿನಗಳ ಕಾಲ ನಾನು ನಿದ್ದೆ ಮಾಡಲಿಲ್ಲ. ಒಟ್ಟಾರೆ ರಾಜಕುಮಾರ್‌ರವರನ್ನು ವೀರಪ್ಪನ್ ಬಿಡುಗಡೆ ಮಾಡಿದಾಗ ದೊಡ್ಡ ನಿಟ್ಟುಸಿರು ಬಿಟ್ಟೆ. ನಾಗಪ್ಪ ಅಪಹರಣ ಆಯ್ತು ಇದಾದ ಸ್ವಲ್ಪ ದಿನದ ನಂತರ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಹನೂರು ಹತ್ತಿರ ಮಾಜಿ ಸಚಿವ ನಾಗಪ್ಪ ಅವರನ್ನು ವೀರಪ್ಪನ್ ಅಪಹರಿಸಿದ, ಇದು ಕೂಡ ನನ್ನ ಮಾನಸಿಕ ಸಮತೋಲನವನ್ನು ಕೆಣಕುವ ಘಟನೆ. ಪುನಃ ಗೋಪಾಲನ್ ಆಶ್ರಯ, ಮತ್ತೆ ನೀನು ಹೋಗಿ ಬಾ ಅಂತ ಹೇಳಿದೆ. ಆದರೆ ಆತ ಪ್ರತಿಕ್ರಿಯಿಸಲಿಲ್ಲ. ನಾಗಪ್ಪ ರಾಜಕಾರಣಿಯಾದ ಪ್ರಯುಕ್ತ ಚಾಮರಾಜನಗರ ಮೈಸೂರು ಭಾಗಗಳಲ್ಲಿ ತೀವ್ರ ಉದ್ವೇಗವಾಯಿತು. ನಾವು ಸಿದ್ಧತೆ ಮಾಡಿಕೊಳ್ಳುವ ಮುಂಚೆಯೇ ದುರಂತ ನಡೆದುಹೋಯಿತು. ನಾಗಪ್ಪ ಅವರ ಬದುಕು ದುರಂತದಲ್ಲಿ ಕೊನೆಯಾಯಿತು.
ರಾಜಕುಮಾರ್ ಅಪಹರಣದ ಕಾಲದಲ್ಲಿ ಕರುಣಾನಿಧಿ ಇದ್ದರು, ಗೋಪಾಲನ್ ನಿಂದ ಹಿಡಿದು ಡಾ. ಶುಭಾ ತನಕ ಎಲ್ಲರೂ ಬೆಂಬಲ ಕೊಟ್ಟರು. ಆ ಘಟನೆಯ ನೂರಾ ಎಂಟು ದಿನಗಳು ದೊಡ್ಡ ಘಟನೆಯೆ. ನಾಗಪ್ಪ ಅಪಹರಣವಾದಾಗ ನಾವು ಸಿದ್ಧತೆಮಾಡಿಕೊಳ್ಳುವಷ್ಟರಲ್ಲಿಯೇ ಅವರ ಬದುಕು ದುರಂತವಾಯಿತು ಸಲವಾಗಲಿಲ್ಲ. ಜೊತೆಗೆ ಅಪವಾದ ಬಂತು. ಡಾ . ರಾಜಕುಮಾರ ರವರನ್ನು ಬಿಡಿಸಿಕೊಂಡು ಬರಲು ಮಾಡಿದ ಪ್ರಯತ್ನಕ್ಕೆ ಕ್ರೆಡಿಟ್ ಏನು ಬರಲಿಲ್ಲ . ನನ್ನ ಪ್ರಯತ್ನವನ್ನು. ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರು ಹಾಗೂ ನನ್ನ ಸಹೋದ್ಯೋಗಿಗಳು ಒಪ್ಪಿಕೊಂಡಿದ್ದರು ಎಂದು ಅವರು ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: S M Krishna: ಮಾಜಿ ಸಿಎಂ ಎಸ್.ಎಂ.ಕೃಷ್ಣ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು