Tuesday, 24th December 2024

SM Krishna: ಅಮೆರಿಕದಲ್ಲೂ ಚುನಾವಣಾ ಪ್ರಚಾರ ನಡೆಸಿದ್ದ ಎಸ್‌ಎಂ ಕೃಷ್ಣ

SM Krishna Death

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ (SM Krishna) ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಕೇವಲ ಮುಖ್ಯಮಂತ್ರಿಯಾಗಿ ಮಾತ್ರವಲ್ಲದೇ, ರಾಜ್ಯಪಾಲರು, ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅವರದ್ದು. ಆ ಮೂಲಕ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದ ಎಸ್‌.ಎಂ. ಕೃಷ್ಣ ಇದೀಗ ಅಮೆರಿಕ ರಾಜಕೀಯದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಅಮೆರಿಕದಲ್ಲಿ ಅವರು ಅಂದಿನ ಅಧ್ಯಕ್ಷ ಜಾನ್‌.ಎಫ್‌. ಕೆನಡಿ ಪರವೂ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು.

ಎಸ್ ಎಂ ಕೃಷ್ಣ ಅವರು 3 ವರ್ಷ ಅಮೆರಿಕದಲ್ಲಿ ನೆಲೆಸಿದ್ದರು. ಆ ದೇಶದ ಅಧ್ಯಕ್ಷರ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕೆಂಬ ಬಯಕೆ ಹಾಗೂ ಮಹದಾಸೆ ಅವರಲ್ಲಿತ್ತು. 1960ರಲ್ಲಿ ನಡೆದ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಜಾನ್ ಎಫ್. ಕೆನಡಿ ಅವರ ಪರ ಚುನಾವಣೆ ಕಾರ್ಯದಲ್ಲಿ ಕೃಷ್ಣ ಅವರು ತೊಡಿಸಿಕೊಂಡಿದ್ದರು.
ಜಾನ್ ಎಫ್. ಕೆನಡಿ ಅವರ ಪರ ನಡೆದ ಚುನಾವಣಾ ಪ್ರಚಾರದಲ್ಲಿ ಎಸ್ ಎಂ ಕೃಷ್ಣ ಅವರು​ ಪಾಲ್ಗೊಂಡರು. ಈ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯನಾಗಿ ಕೃಷ್ಣ ಪಾಲ್ಗೊಂಡಿದ್ದರು. ಆ ಚುನಾವಣೆಯಲ್ಲಿ ಡೆಮಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಕೆನಡಿ ಅವರು ಅಧ್ಯಕ್ಷರಾಗಿ ಆಯ್ಕೆಯಾದರು.

ಕೃಷ್ಣಗೆ ಧನ್ಯವಾದ ತಿಳಿಸಿದ್ದ ಕೆನಡಿ

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಜಾನ್ ಎಫ್. ಕೆನಡಿ ಅವರು ಎಸ್ ಎಂ ಕೃಷ್ಣ ಅವರಿಗೆ ಧನ್ಯವಾದ ತಿಳಿಸಿದ್ದರು. ಕೃಷ್ಣ ಅವರಿಗೆ ಪತ್ರವನ್ನು ಬರೆದಿದ್ದ ಕೆನಡಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಕ್ಕೆ ಕೃತಜ್ಞತೆ ಹೇಳಿದ್ದರು. ಟೆಕ್ಸಸ್​ನಲ್ಲಿನ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಡೆಮಕ್ರಟಿಕ್ ಕ್ಲಬ್​ನ ಸದಸ್ಯರಾಗಿದ್ದ ಕೃಷ್ಣ ಅವರು, ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಮದ್ದೂರು ಕೆನಡಿ ಎಂದೇ ಖ್ಯಾತಿ

ಇನ್ನು ಜಾನ್‌ ಎಫ್‌. ಕೆನಡಿ ಪರ ಪ್ರಚಾರ ಕಾರ್ಯದಲ್ಲಿ ಭಾಗಿಯಾದ ನಂತರ ಎಸ್‌ ಎಂ ಕೃಷ್ಣ ಅವರು ಮದ್ದೂರು ಕೆನಡಿ ಎಂದೇ ಖ್ಯಾತಿ ಪಡೆದರು. ಎಸ್. ಎಂ.ಕೃಷ್ಣ ಅವರಿಗೆ ಕೆನಡಿ ಅವರು ಬರೆದ ಪತ್ರವನ್ನು ಮುದ್ರಿಸಿದ ಅವರ ಅಭಿಮಾನಿಗಳು ಮದ್ದೂರು ಮತ್ತು ಮಂಡ್ಯ ಚುನಾವಣೆಯಲ್ಲಿ ಹಂಚಿದ್ದರು ಮತ್ತು ಮದ್ದೂರು ಕೆನಡಿಗೆ ಜೈ ಎಂದು ಘೋಷಣೆ ಕೂಗುತ್ತಿದ್ದರು.

ಈ ಸುದ್ದಿಯನ್ನೂ ಓದಿ: SM Krishna Health Update: ಮಾಜಿ ಸಿಎಂ ಎಸ್.ಎಂ.ಕೃಷ್ಣ ಸದ್ಯದ ಆರೋಗ್ಯ ಸ್ಥಿತಿ ಹೇಗಿದೆ?