ಬೆಂಗಳೂರು: ರಾಜ್ಯ ರಾಜಕಾರಣದ ಅಜಾತಶತ್ರು ಮಾಜಿ ಸಿಎಂ ಎಸ್.ಎಂ. ಕೃಷ್ಣ (SM Krishna Death) ಅವರು ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಇವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಎಸ್.ಎಂ. ಕೃಷ್ಣ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಪ್ರಮುಖವಾಗಿ ಮಾಜಿ ಸಿಎಂ ಅವರು ಆರೋಗ್ಯದ ಜತೆಗೆ ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದರು. ಇದಕ್ಕೆ ಪ್ರಮುಖ ಕಾರಣ ಅಳಿಯ ಸಿದ್ಧಾರ್ಥ ಹೆಗ್ಡೆ (Siddharth hegde) ಸಾವು. ಈ ಘಟನೆ ಎಸ್.ಎಂ. ಕೃಷ್ಣ ಅವರನ್ನು ಬಹುವಾಗಿ ಕಾಡಿತ್ತು.
ಕರುನಾಡ ಕಾಫಿಯ ಘಮ ಜಗತ್ತಿಗೆ ಹಬ್ಬಿಸಿದ ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ಅವರು ಹಳ್ಳಿಯಲ್ಲಿ ಆರಂಭಿಸಿದ ಉದ್ಯಮವನ್ನು ದೇಶಾದ್ಯಂತ ಪಸರಿಸಿದ ಯಶಸ್ವಿ ಉದ್ಯಮಿಯಾಗಿದ್ದರು. ಆದರೆ, 2019ರ ಜುಲೈ 29 ರಂದು ಅವರು ಬದುಕು ಅಂತ್ಯಗೊಳಿಸಿದ್ದರು. ಜುಲೈ 29 ರಂದು ನಾಪತ್ತೆಯಾದ ಸಿದ್ಧಾರ್ಥ ಹೆಗ್ಡೆ ಅವರ ಮೃತದೇಹ ಜುಲೈ 31ರಂದು ಮಂಗಳೂರಿನ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿತ್ತು. ಜುಲೈ 31 ರಂದು ಸಿದ್ಧಾರ್ಥ ಹೆಗ್ಡೆ ಮೃತದೇಹ ಪತ್ತೆಯಾಗಿತ್ತು. ಇದರಿಂದ ಸಿದ್ಧಾರ್ಥ ಹೆಗ್ಡೆ ಕುಟುಂಬಸ್ಥರು ಕುಗ್ಗಿ ಹೋಗಿದ್ದರು. ಈ ಪೈಕಿ ಎಸ್ಎಂ ಕೃಷ್ಣ ಅವರು ತೀವ್ರ ನೊಂದುಕೊಂಡಿದ್ದರು.
ಸಿದ್ಧಾರ್ಥ ಹೆಗ್ಡೆ ಸಾವಿನ ಬಳಿಕ ಎಸ್.ಎಂ. ಕೃಷ್ಣ ವಯೋಸಜಹ ಕಾಯಿಲೆ ಜತೆಗೆ ಮಾನಸಿಕವಾಗಿಯೂ ಕುಗ್ಗಿ ಹೋಗಿದ್ದರು. ಅಳಿಯ ಸಿದ್ದಾರ್ಥ ಹೆಗ್ಡೆ ಸಾವು ಎಸ್.ಎಂ. ಕೃಷ್ಣ ಅವರನ್ನು ಮಾನಸಿಕವಾಗಿ ಚಡಪಡಿಸುವಂತೆ ಮಾಡಿತ್ತು. ಇತ್ತ ದೈಹಿಕವಾಗಿಯೂ ಕುಗ್ಗಿ ಹೋದ ಎಸ್ಎಂ ಕೃಷ್ಣ ಪದೇ ಪದೇ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಘಟನೆ ಎಸ್ಎಂ ಕೃಷ್ಣ ಅವರನ್ನು ಬಹುವಾಗಿ ಕಾಡಿತ್ತು. ಇದೇ ಅವರ ಆರೋಗ್ಯವನ್ನು ಮತ್ತಷ್ಟು ಕ್ಷೀಣಿಸುವಂತೆ ಮಾಡಿತ್ತು.
ಎಸ್.ಎಂ. ಕೃಷ್ಣ ಪುತ್ರಿ ಮಾಳವಿಕ ಹೆಗ್ಡೆ ಚಿಕ್ಕ ವಯಸ್ಸಿನಲ್ಲೇ ಪತಿ ಸಿದ್ಧಾರ್ಥ ಹೆಗ್ಡೆ ಕಳೆದುಕೊಂಡು ಬದುಕು ಸಾಗಿಸಬೇಕಾದ ಪರಿಸ್ಥಿತಿ ಬಂದೊಗಿತಲ್ಲಾ ಅನ್ನೋ ಕೊರಗು ಎಸ್.ಎಂ. ಕೃಷ್ಣ ಅವರಿಗೆ ಕಾಡುತ್ತಲೇ ಇತ್ತು. ಎಸ್ಎಂ ಕೃಷ್ಣ ಅವರ ಅಚ್ಚುಮೆಚ್ಚಿನ ಅಳಿಯನಾಗಿದ್ದ ಸಿದ್ಧಾರ್ಥ್ ಹೆಗ್ಡೆ ದುರಂತ ಘಟನೆ ಇನ್ನಿಲ್ಲದಂತೆ ಕಾಡಿತ್ತು. 2019ರಿಂದ ಸತತವಾಗಿ ಎಸ್.ಎಂ. ಕೃಷ್ಣ ಆರೋಗ್ಯ ಸಮಸ್ಯೆ ಎದುರಿಸಿದ್ದಾರೆ. ವಯೋಸಹಜ ಕಾಯಿಲಿಗೆ ಚಿಕಿತ್ಸೆ ಪಡೆಯುತ್ತಿದ್ದ ಎಸ್ಎಂ ಕೃಷ್ಣ ಅವರು ಸದಾಶಿವನಗರದಲ್ಲಿರುವ ಸ್ವಗೃಹದಲ್ಲಿ ವಿಶ್ರಾಂತಿ ಜೀವನದಲ್ಲಿದ್ದರು. ಡಿ.10ಎಂದು ಬೆಳಗ್ಗೆ 2.30ರ ಸುಮಾರಿಗೆ ಮನೆಯಲ್ಲಿ ವಿಧಿವಶರಾಗಿದ್ದಾರೆ.
ಈ ಸುದ್ದಿಯನ್ನೂ ಓದಿ | Vishweshwar Hegde Kaageri: ರಾಜಕೀಯ ಭೀಷ್ಮನನ್ನು ಕಳೆದುಕೊಂಡಂತಾಗಿದೆ: ವಿಶ್ವೇಶ್ವರ ಹೆಗಡೆ ಕಾಗೇರಿ
ಇಂದು ಮುಂಜಾನೆ ಮೃತಪಟ್ಟ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ (SM Krishna Death) ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಡಲಾಗಿದೆ. ಅವರ ಹುಟ್ಟೂರಿನಲ್ಲಿ ನಾಳೆ ಅಂತ್ಯಸಂಸ್ಕಾರ ನೆರವೇರಲಿದೆ. ಅವರ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಬೆಳಗ್ಗೆ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.