ಗುಬ್ಬಚ್ಚಿಗಳಿಗಾಗಿ ಮನೆಯನ್ನೇ ಮೀಸಲಿಟ್ಟ ಮಂಡ್ಯದ ಗುಬ್ಬಿ ಪ್ರೇಮಿ
ವಿಶೇಷ ವರದಿ: ನಾಗಯ್ಯ ಲಾಳನಕೆರೆ
ಮಂಡ್ಯ: ಪಕ್ಷಿ ಸಂಕುಲದಲ್ಲಿಯೇ ವಿಶಿಷ್ಠ ಪಕ್ಷಿ ಎನಿಸಿಕೊಂಡಿದೆ ಗುಬ್ಬಚ್ಚಿ, ಸಾಮಾನ್ಯವಾಗಿ ಜನವಸತಿ ಪ್ರದೇಶದಲ್ಲಿಯೇ ಕಣ್ಣಿಗೆ ಬೀಳುವ ಈ ಹಕ್ಕಿ ಜನರ ಮಧ್ಯೆ ವಾಸಿಸ ಬಯಸುತ್ತದೆ. ಯಾವಾಗಲು ಗುಬ್ಬಚ್ಚಿಗಳು ಜೋಡಿಯಾಗಿ ಗುಂಪುಗುಂಪಾಗಿಯೇ ಇರುತ್ತವೆ. ಚಿಂವ್ ಚಿಂವ್ ಶಬ್ದ ಮಾಡುತ್ತಾ ಮುದ್ದು ಮುದ್ದಾಗಿ ಕಾಣುವ ಈ ಮುದ್ದು ಪಕ್ಷಿಇದಾಗಿದೆ.
ಅಳಿವಿನಂಚಿನಲ್ಲಿರುವ ಅನೇಕ ವಿಶಿಷ್ಠ ಪ್ರಾಣಿ, ಪಕ್ಷಿಗಳ ಪಟ್ಟಿಯಲ್ಲೀಗ ಈ ಗುಬ್ಬಚ್ಚಿಯೂ ಇದ್ದು ವಿಶ್ವ ಗುಬ್ಬಚ್ಚಿ ದಿನಾಚರಣೆ ಯನ್ನ ಆಚರಿಸಲಾಗುತ್ತಿದೆ. ಪರಿಸರ ಪ್ರೇಮಿಗಳು, ಪ್ರಾಣಿ, ಪಕ್ಷಿ ಪ್ರಿಯರು ಅಳಿವಿನಂಚಿನಲ್ಲಿರುವ ಪ್ರಾಣಿ ಪಕ್ಷಿಗಳನ್ನು ಅಲ್ಲಲ್ಲಿ ಸಂರಕ್ಷಿಸುವ ಕಾಯಕದಲ್ಲಿ ತೊಡಗಿದ್ದಾರೆ, ಅಂತೆಯೇ ಗುಬ್ಬಚ್ಚಿಗಳ ಸಂರಕ್ಷಣೆಗೆ ಮಂಡ್ಯದ ಬಳಿ ಗುಬ್ಬಚ್ಚಿ ಪ್ರೇಮಿ ಕುಟುಂಬ ವೊಂದು ಟೊಂಕಕಟ್ಟಿ ನಿಂತಿದೆ.
ತಮ್ಮ ಮನೆಯಂಗಳದಲ್ಲಿಯೇ ನೂರಾರು ಗುಬ್ಬಚ್ಚಿಗಳಿಗೆ ಗುಬ್ಬಚ್ಚಿ ಗೂಡು ಗಳನ್ನು ನಿರ್ಮಿಸಿ ಕೊಟ್ಟು ಪಕ್ಷಿಪ್ರೇಮ ಮೆರೆಯುತ್ತಿದೆ. ತಮ್ಮ ಮನೆಯಂಗಳ ದಲ್ಲಿ ನೂರಾರು ಗುಬ್ಬಚ್ಚಿಗಳನ್ನು ಸಾಕುವ ಮೂಲಕ ಸಂರಕ್ಷಣೆ ಮಾಡ್ತಾ, ವಿಶ್ವ ಗುಬ್ಬಚ್ಚಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ.
ಹೌದು! ವಿಶ್ಚ ಗುಬ್ಬಚ್ಚಿ ದಿನಾಚರಣೆಯನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್ನಲ್ಲಿ ರೋ ಜಯರಾಂರಾವ್ ಎಂಬುವರ ಕುಟುಂಬ ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರ್ತಿದೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿರೋ ಜಯರಾಂ ತಮ್ಮದೇ ಆದ ವೆಲ್ಡಿಂಗ್ ಶಾಪ್ ಇಟ್ಟು ಕೊಂಡಿದ್ದು ಜೀವನ ನಡೆಸ್ತಿದ್ದಾರೆ. ಇವರ ಮನೆಯಂಗಳದಲ್ಲಿ ನೂರಾರು ಗುಬ್ಬಿಗಳನ್ನು ಸಂರಕ್ಷಣೆ ಮಾಡ್ತಾ ಅವುಗಳ ಚಿಂವ್ ಚಿಂವ್ ಕಲರವ ಕೇಳ್ತಾ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ.
ಇವರು ತಮ್ಮ ಮನೆಯಲ್ಲಿ ಗುಬ್ಬಚ್ಚಿಗಳಿಗಾ ಗಿ ಪೈಪ್ನಲ್ಲಿ ಅವುಗಳಿಗೆ ನೂರಾರು ಗೂಡು ನಿರ್ಮಿಸಿದ್ದಾರೆ. ಅಲ್ಲದೆ ಅವುಗಳಿಗಾಗಿ ಆಹಾರ ಮತ್ತು ನೀರಿಗೆ ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಅವುಗಳ ಆಹಾರಕ್ಕೆ ನವಣೆ ಮತ್ತು ಆರ್ಕಾ ಧಾನ್ಯವನ್ನು ತಂದು ಅದನ್ನ
ನಿರುಪಯುಕ್ತ ಪ್ಲಾಸ್ಟಿಕ್ ಡಬ್ಬಿಯಲ್ಲಿ ಹಾಕಿ ತೂಗಿ ಹಾಕಿದರೆ, ಅಲ್ಲಲ್ಲಿ ಭತ್ತದ ತೆನೆ ಕೂಡ ಹಾಕಿದ್ದಾರೆ.
ಇನ್ನು ನೀರಿಗಾಗಿ ಅವುಗಳಿಗೆ ತಮ್ಮ ಮನೆಯ ಹೊರಗೆ ವಿಶೇಷ ಮಾದರಿಯ ಚಿಕ್ಕ ಜಲಪಾತ ಹಾಗೂ ಕೊಳವನ್ನು ನಿರ್ಮಿಸಿದ್ದಾರೆ. ಇದರಿಂದ ಇವರ ಮನೆಯಂಗಳದಲ್ಲಿ ನೂರಾರು ಗುಬ್ಬಚ್ಚಿಗಳು ವಾಸವಾಗಿದ್ದು ಪ್ರತಿನಿತ್ಯ ಇವರ ಮನೆಯಂಗಳದಲ್ಲಿ ಗುಬ್ಬಿಗಳ ಚಿಂವ್ ಚಿಂವ್ ಕಲರವ ಕೇಳ್ತಿದ್ದು, ಈ ಗುಬ್ಬಿಗಳ ಸಂರಕ್ಷಣೆಗೆ ಎಲ್ಲರು ಮುಂದಾಗುವಂತೆ ಈ ಗುಬ್ಬಿ ಪ್ರೇಮಿ ಮನವಿ ಮಾಡ್ತಿದ್ದಾರೆ. ಇನ್ನು ಈ ಕುಟುಂಬ ಪ್ರತಿವರ್ಷ ಮಾರ್ಚ್ 20 ರಂದು ಮನೆಯಲ್ಲಿ ವಿಶ್ವ ಗುಬ್ಬಚ್ಚಿ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಿಕೊಂಡು ಬರ್ತಿದೆ. ಆ ದಿನ ಕೇಕ್ ತಂದು ನೆರೆಹೊರೆಯವರ ಜತೆ ಆ ದಿನವನ್ನು ಸಂಭ್ರಮದಿಂದ ಆಚರಿಸ್ತಾ, ಜನರಲ್ಲಿ ಗುಬ್ಬಚ್ಚಿ ಸಂರಕ್ಷಣೆಯ ಅರಿವು ಮೂಡಿಸ್ತಿದ್ದಾರೆ.
ಜಯರಾಂ ಸೇರಿದಂತೆ ಇವರ ಕುಟುಂಬ ಸದಸ್ಯರು ಈ ಗುಬ್ಬಚ್ಚಿಗಳ ಸಂರಕ್ಷ ಣೆಗಾಗಿ ಶ್ರಮಿಸ್ತಿದ್ದು, ತಮ್ಮ ಮನೆಯಂ ಗಳದಲ್ಲಿ ನೂರಾರು ಗುಬ್ಬಚ್ಚಿಗಳಿಗೆ ಆಶ್ರಯ ನೀಡಿ ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ತಿದ್ದಾರೆ. ಇವರ ಈ ಕಾಳಜಿಯಿಂದ ಕೆಲವು ಗುಬ್ಬಚ್ಚಿಗಳು ಈ ಮನೆಯ ಸದಸ್ಯರ ಜತೆ ಮತ್ತು ಪ್ರಾಣಿಗಳ ಜತೆ ಒಡನಾಟ ಇಟ್ಟು ಕೊಂಡಿವೆ.
ಜಾಗತೀಕರಣ ಹಾಗೂ ಮೊಬೈಲ್ ಟವರ್ನ ತರಂಗಗಳಿಂದ ಇವುಗಳ ಸಂತತಿ ನಶಸಿ ಹೋಗ್ತಿರೋ ಈ ಗುಬ್ಬಚ್ಚಿಗಳ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕಿದ್ದು, ಇಂತಹ ಗುಬ್ಬಚ್ಚಿ ಪ್ರೇಮಿಗಳ ಕಾರ್ಯವನ್ನು ಶ್ಲಾಘಿಸುತ್ತಾ ಇಂತಹ ವರ ಕಾರ್ಯಕ್ಕೆ ಎಲ್ಲರೂ ಪ್ರೋತ್ಸಾಹಿಸಿ ಕೈ ಜೋಡಿಸಬೇಕಿದೆ.
ಮನೆಯಂಗಳದಲ್ಲಿ ಆಶ್ರಯ
ಇವರ ಮನೆಯಲ್ಲಿನ ಶ್ವಾನದ ಜತೆ ಗುಬ್ಬಚ್ಚಿಗಳು ಚಿನ್ನಾಟವಾಡಿದರೆ, ಇವರು ಮಗಳು ಕರೆದ ತಕ್ಷಣ ಬಂದು ಚಿಂವ್ ಚೀಂವ್ ಶಬ್ದ ಮಾಡ್ತಾ ಬಂದು ಆಹಾರ ಸ್ವೀಕರಿಸಿ ಮನಸ್ಸಿಗೆ ಮುದ ನೀಡಿ ಹೋಗುವಷ್ಟು ಒಡನಾಟ ಬೆಳೆಸಿಕೊಂಡಿವೆ. ಗುಬ್ಬಿಗಳ ಈ ಒಡನಾಟದಿಂದ ಈ ಕುಟುಂಬ ಈ ಗುಬ್ಬಿಗಳ ಮೇಲೆ ಬಹಳಷ್ಟು ಪ್ರೀತಿ ಇಟ್ಟುಕೊಂಡಿದ್ದು ಇವುಗಳ ಸರಂಕ್ಷಣೆ ಮಾಡ್ತಿದ್ದು, ಮನೆಯ ಸದಸ್ಯರನ್ನೆಷ್ಟ ಮಟ್ಟಿಗೆ ಇವುಗಳ ಪೋಷಣೆ ಮಾಡ್ತಾ ಈ ಗುಬ್ಬಿಗಳ ಸಂರಕ್ಷಣೆ ಮಾಡ್ತಾ ಆ ಕಾರ್ಯದಲ್ಲೆ ಖುಷಿ ಅನು ಭವಿಸ್ತಿದೆ.
ಒಟ್ಟಾರೆ ಅಳಿವಿನಂಚಿನಲ್ಲಿರೋ ಈ ಗುಬ್ಬಚ್ಚಿಗಳ ಸಂರಕ್ಷಣೆಗಾಗಿ ಜಯರಾಂ ಕುಟುಂಬ ಸಾಕಷ್ಟು ಶ್ರಮಿಸ್ತಿದ್ದು, ಗುಬ್ಬಚ್ಚಿ ದಿನ ವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಿದೆ.