ವಿಶೇಷ ಸಂದರ್ಶನ: ಶೀಲಾ ಸಿ. ಶೆಟ್ಟಿ
ಒಂದೊಂದು ಸಿನಿಮಾದಲ್ಲೂ ತಮ್ಮದೇ ಆದ ನಟನೆಯೊಂದಿಗೆ ಅಪಾರ ಅಭಿಮಾನಿಗಳನ್ನು ಗಳಿಸಿರುವ ಸ್ಯಾಂಡಲ್‌ವುಡ್ ನಟ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ತಮ್ಮದೇ ಆದ ಫ್ಯಾಷನ್ (Star Fashion) ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಹೊಂದಿದ್ದಾರೆ. ಸಿನಿಮಾಗಳಲ್ಲಿ ತಾವು ಧರಿಸುವ ಒಂದೊಂದು ಉಡುಪುಗಳ ಮೂಲಕ ಟ್ರೆಂಡ್ ಸೆಟ್ ಮಾಡುವ ಧ್ರುವ ಸರ್ಜಾ ಅವರ ಡೈಲಿ ರುಟೀನ್‌ನಲ್ಲಿ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಮಾತ್ರ ತೀರಾ ಸಿಂಪಲ್ ಅಂತೆ. ಅಲ್ಲದೇ ಸಿನಿಮಾಗಳಿಗಾಗಿ ನಾನು ಸಾಕಷ್ಟು ಔಟ್‌ಫಿಟ್ಸ್ ಪ್ರಯೋಗ ಮಾಡುತ್ತೇನೆ. ಇದು ಅಲ್ಲಿನ ಅಗತ್ಯಗಳಲ್ಲೊಂದಾಗಿದೆ ಎನ್ನುತ್ತಾರೆ.
ವಿಶ್ವವಾಣಿ ನ್ಯೂಸ್‌ನೊಂದಿಗೆ ವಿಶೇಷ ಸಂದರ್ಶನ ನೀಡಿರುವ ನಟ ಧ್ರುವ ಸರ್ಜಾ ತಮ್ಮ ಫ್ಯಾಷನ್ ಕುರಿತಂತೆ ತಿಳಿಸುವುದರೊಂದಿಗೆ ಅಭಿಮಾನಿಗಳಿಗೆ ಟಿಪ್ಸ್ ಕೂಡ ನೀಡಿದ್ದಾರೆ.
ವಿಶ್ವವಾಣಿ ನ್ಯೂಸ್: ಎಲ್ಲಾ ಸಿನಿಮಾಗಳಲ್ಲೂ ತಮ್ಮದೇ ಆದ ಡಿಫರೆಂಟ್ ಲುಕ್ ಹಾಗೂ ಫ್ಯಾಷನ್‌ವೇರ್‌ಗಳಲ್ಲಿ ಕಾಣಿಸಿಕೊಳ್ಳುವ ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಏನು?
ಧ್ರುವ ಸರ್ಜಾ: ನಿಮ್ಮ ಪ್ರಶ್ನೆಗೆ ನನ್ನದು ಒಂದೇ ಉತ್ತರ, ಕಂಫರ್ಟಬಲ್ ವೇರ್. ಅದು ಯಾವುದಾದರೂ ಆಗಬಹುದು. ಧರಿಸಿದಾಗ ಕಂಫರ್ಟಬಲ್ ಆಗಿರಬೇಕಷ್ಟೇ! ಕಂಫರ್ಟಬಲ್ ಆಗಿರದಿದ್ದರೂ ಸರಿಯಾಗಿ ಕ್ಯಾರಿ ಮಾಡುವುದಿದೆಯಲ್ಲ, ಅದನ್ನೇ ಫ್ಯಾಷನ್ ಎನ್ನುತ್ತೇವೆ.
ಈ ಸುದ್ದಿಯನ್ನೂ ಓದಿ | Mens Earrings Fashion: ವಿಂಟರ್ ಮೆನ್ಸ್ ಜ್ಯುವೆಲ್ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಮ್ಯಾಗ್ನೆಟಿಕ್ ಇಯರಿಂಗ್ಸ್!
ವಿಶ್ವವಾಣಿ ನ್ಯೂಸ್: ನಿಮ್ಮ ಲಾಂಗ್ ಹೇರ್‌ಸ್ಟೈಲ್ ಯುವಜನರನ್ನು ಆಕರ್ಷಿಸಿದೆ ಹಾಗೂ ಟ್ರೆಂಡಿಯಾಗಿದೆಯಲ್ಲ! ಅದರ ಬಗ್ಗೆ ಏನ್ ಹೇಳ್ತಿರಾ?
ಧ್ರುವಾ ಸರ್ಜಾ: ನಿಜವಾಗಲೂನಾ…ಹ್ಹಹ್ಹಹ್ಹ.. ಮನೆಯಲ್ಲಿ ಈ ನನ್ನ ಹೇರ್‌ಸ್ಟೈಲ್ ನೋಡಿ ಬಯ್ತಿರ್ತಾರೆ. ಮೊದಲು ಹೇರ್ ಕಟ್ ಮಾಡಿಸು ಅಂತಾ ಹೇಳ್ತಿದ್ದಾರೆ. ಆದರೆ, ಅದೇ ಟ್ರೆಂಡ್ ಆಗಿದೆ ಅಂದರೆ ಅಚ್ಚರಿಯಾಗುತ್ತದೆ.
ವಿಶ್ವವಾಣಿ ನ್ಯೂಸ್: ನಿಮಗೆ ಶಾಪಿಂಗ್ ಕ್ರೇಝ್ ಇದೆಯಾ?
ಧ್ರುವ ಸರ್ಜಾ: ಖಂಡಿತಾ ಇಲ್ಲ! ಹಿಂದೆಲ್ಲಾ ನಮ್ಮ ಅಣ್ಣ ಚಿರಂಜೀವಿ ನನಗಾಗಿ ಶಾಪಿಂಗ್ ಮಾಡಿಕೊಡುತ್ತಿದ್ದರು. ಅಷ್ಟೇಕೆ! ಅವರ ವಾರ್ಡ್ರೋಬ್‌ನಿಂದ ನಾನು ಅವರ ಔಟ್‌ಫಿಟ್‌ಗಳನ್ನು ತೆಗೆದುಕೊಂಡು ಧರಿಸುತ್ತಿದ್ದೆ. ಈಗೆಲ್ಲಾ ನನ್ನ ಪತ್ನಿ ಪ್ರೇರಣಾ, ನನಗೆ ಶಾಪಿಂಗ್ ಮಾಡುತ್ತಾರೆ.
ವಿಶ್ವವಾಣಿ ನ್ಯೂಸ್: ನಿಮ್ಮ ಲುಕ್‌ಗೆ ಸಾಥ್ ನೀಡುವಂತಹ ಫೇವರೇಟ್ ಆಕ್ಸೆಸರೀಸ್ ಏನಾದರೂ ಇದೇಯಾ!
ಧ್ರುವ ಸರ್ಜಾ: ಅಂತಹದ್ದೇನೂ ಇಲ್ಲ! ನಟನಾದ ಮೇಲೆ ಮುಖಾಭಿನಯಕ್ಕೆ ಹೆಚ್ಚು ಮಹತ್ವ ನೀಡಬೇಕು. ಹಾಗಾಗಿ ನಾನು ಫ್ಯಾಷೆನಬಲ್ ಆಗಿ ಕಾಣಿಸುವ ಸನ್‌ಗ್ಲಾಸ್ ಹಾಗೂ ಕ್ಯಾಪ್ ನಂತಹ ಫ್ಯಾಷನ್ ಆಕ್ಸೆಸರೀಸ್ ಅಷ್ಟಾಗಿ ಇಷ್ಟಪಡುವುದಿಲ್ಲ!
ಈ ಸುದ್ದಿಯನ್ನೂ ಓದಿ | Winter Hoodie Fashion: ಚಳಿ-ಗಾಳಿಗೆ ಹೂಡಿ ಫ್ಯಾಷನ್ ತಮ್ಮದಾಗಿಸಿಕೊಳ್ಳಿ
ವಿಶ್ವವಾಣಿ ನ್ಯೂಸ್: ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಿರಲ್ಲ! ಅವರಿಗೆಲ್ಲಾ ನೀವು ಯಾವ ಫ್ಯಾಷನ್ ಟಿಪ್ಸ್ ನೀಡುತ್ತೀರಾ?
ಧ್ರುವ ಸರ್ಜಾ: ನಿಮಗೆ ಯಾವುದು ಕಂಫರ್ಟಬಲ್ ಎಂದೆನಿಸತ್ತದೆಯೋ ಅಂತಹದ್ದೇ ಉಡುಗೆ ಧರಿಸಿ. ನಿಮಗೆ ಚೆನ್ನಾಗಿ ಕಾಣಿಸುವಂತಹ ಔಟ್‌ಫಿಟ್ ಧರಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)