ಇಂಡಿ: ಪರೋಪಕಾರ ಇದಂ ಶರೀರ ಭಗವಂತ ಈ ಭೂಮಿಯ ಮೇಲೆ ಎಲ್ಲರಿಗೂ ಜೀವಸುವ ಅವಕಾಶ ನೀಡಿದ್ದಾನೆ ಆದರೆ ಪರೋಪಕಾರ ಮಾಡಿ ಪುಣ್ಯಕಟ್ಟಿಕೊಳ್ಳಬೇಕು ಎಂದು ಆರ್.ಡಿ.ಈ.ಸಂಸ್ಥೆಯ ಕಾರ್ಯದರ್ಶಿ ಸ್ಟೀಫನ್ ಶಿರೋಮಣಿ ಹೇಳಿದರು.
ವಿಜಯಪೂರ ರಸ್ತೆಯ ಕ್ರೆöÊಸ್ಟ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖ್ಯಾತ ಉದ್ದೀಮೆದಾರ ಹಾಗೂ ಶಾಂತಲಾ ಬಟ್ಟೆ ವರ್ತಕ ಸಂತೋಷ ಕೋಟಿಯವರು ಬಡಮಕ್ಕಳಿಗೆ ಉಚಿತ ಶಾಲಾ ಸಮವಸ್ತç ವಿತರಣೆ ಸರಳ ಸಮಾರಂಭದಲ್ಲಿ ಮಾತ ನಾಡಿದ ಅವರು ಜೀವನ ಸಾರ್ಥಕತೆಗೆ ಸರಳ ಸೂತ್ರ ಧಾನ ,ಧರ್ಮ ಮನುಷ್ಯ ಜೀವನದಲ್ಲಿ ಏನ್ನನ್ನು ಒಯ್ಯುವದಿಲ್ಲ ಇಡೀ ಪ್ರಪಂಚವನ್ನೆ ಗೆದ್ದ ಅಲ್ಘಾಂಡರ್ ಕೊನೆಗೆ ಬರೀಗೈಲಿಂದ ಹೋದ ಆದ್ದರಿಂದ ದೀನರಿಗೆ ದುರ್ಬಲರಿಗೆ. ಅನಾಥರಿಗೆ ವೃದ್ದರಿಗೆ ಸಹಾಯ ಮಾಡಿದರೆ ಭಗವಂತ ಮತ್ತಷ್ಟು ಆಯಸ್ಸು, ಭೋಗ ಭಾಗ್ಯ ವೃದ್ದಿಸುತ್ತಾನೆ.
ನಗರದ ಬಟ್ಟೆ ವ್ಯಾಪಾರಸ್ಥರಾದ ಸಂತೋಷ ಕೋಟಿ ಕೇವಲ ಹಣದಿಂದ ಶ್ರೀಮಂತರಷ್ಠೇ ಅಲ್ಲ ಹೃದಯದಿಂದ ಶ್ರೀಮಂತ ರಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸಮಾಜ ದಲ್ಲಿ ಧಾನ,ಧರ್ಮ ಮಾಡುವಂತ ಕಾರ್ಯ ನಡೇಯಲಿ ಎಂದರು.
ಧರ್ಮ ಎಂದರೆ ಜೈನ್, ಕ್ರೀಶ್ಚಿಯನ್ ,ಹಿಂದೂ ಎಂದು ಬಡಿದಾಡುವುದಲ್ಲ ಧರ್ಮ ಎಂದರೆ ಹಸಿದ ಹೊಟ್ಟೆಗೆ ಯಾರು ಅನ್ನ ನೀಡುತ್ತಾರೆಯೋ ಅವರೇ ನೀಜವಾದ ಧರ್ಮವಂತರು, ಧಾನ ಎಂದರೆ ಶರಣರು ದಾಸೋಹ ಎಂದಿದ್ದಾರೆ. ೧೨ನೇ ಶತಮಾನದ ಅಣ್ಣ ಬಸವಣ್ಣ ಸಂದೇಶದ0ತೆ ದಯವಿಲ್ಲದಾ ಧರ್ಮ ಯಾವುದಯ್ಯಾ ಎಂದಿದ್ದಾರೆ. ಈ ಪ್ರಪಂಚದಲ್ಲಿ ಸಾಕಷ್ಟು ಜನರು ಶ್ರೀಮಂತರು. ಉಳ್ಳವರು ಇದ್ದಾರೆ ಆದರೆ ಯಾರು ಧಾನ, ಧರ್ಮ ಮಾಡುತ್ತಾರೆ ಅವರೇ ನೀಜವಾದ ಶ್ರೀಮಂತರು ಕೋಟಿಯವರು ಬಡ ಮಕ್ಕಳ ಬಗ್ಗೆ ಮಾಡಿರುವ ಪವಿತ್ರ ಕಾರ್ಯ ಶ್ಲಾö್ಯಗನೀಯ, ಮಕ್ಕಳು ದೇವರ ಸಮಾನ ಅದಕ್ಕಾಗಿಯೇ ಭಂಥನಾಳದ ಶ್ರೀಸಂಗನಬಸವ ಶ್ರೀಗಳು ನಾಡಿನಾದ್ಯೆಂತ ಸಂಚರಿಸಿಜೋಳಿಗೆಯಿAದ ಸಂಗ್ರಹಿಸಿದ ಹಣದಿಂದ ಅನೇಕ ಶಿಕ್ಷಂಣ ಸಂಸ್ಥೆಗಳನ್ನು ಕಟ್ಟಿದ್ದಾರೆ ಶಾಲೆಯ ದೇವಾಲಯ ಮಕ್ಕಳೇ ದೇವರು ಎಂಬ ನಂಬಿಕೆ ಇತ್ತು ಇಂತಹ ಪವಿತ್ರ ಕಾರ್ಯ ಸದಾ ನಡೆಯಲಿ ಎಂದು ಉಪನ್ಯಾಸಕ ಶರಣಬಸಪ್ಪ.ಎನ್ ಕೆ ಉಪನ್ಯಾಸ ನೀಡಿದರು.
ಸಂತೋಷ ಕೋಟಿ, ಹೆಸ್ಕಾಂ ಗುತ್ತಿಗೆದಾರ ಹತ್ತಿ, ಶಿಕ್ಷಕ ಎಸ್.ಬಿ ಗದ್ಯಾಳ, ಶಿಕ್ಷಕಿ ಲಕ್ಷಿö್ಮÃಶ ಗೌರೀಶ ವೇದಿಕೆಯಲ್ಲಿದರು.
ಮುಖ್ಯೋಪಾಧ್ಯಾಯ ಮಂಜುನಾಥ ನಾಯ್ಕೋಡಿ, ಶಿಕ್ಷಕರಾದ ಆರ್.ಎಸ್ ಮಂಗೂಳೂರ, ಶಿವಾನಂದ ನಿವರಗಿ , ಮಲ್ಲು ಕೋರೇಣ್ಣವರ್, ಯಲ್ಲಾಲಿಂಗ ಬಾಗೇವಾಡಿ , ಆದರ್ಶ ಚಿತ್ರಕಲಾ ಕಾಲೇಜಿನ ಉಪನ್ಯಾಸಕ ಬಾಳಪ್ಪ ಮಾರ್ಕಪ್ಪನಹಳ್ಳಿ ಸೇರಿ ದಂತೆ ಅನೇಕ ಸಿಬಂದ್ದಿ ಇದ್ದರು.