ಬೆಂಗಳೂರು : ಕೊರೊನಾ ಕರ್ತವ್ಯದಲ್ಲಿರುವ ಶಿಕ್ಷಕರನ್ನೇ ಚುನಾವಣಾ ಕರ್ತವ್ಯಕ್ಕೂ ನಿಯೋಜನೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಆದರೆ ಚುನಾವಣಾ ಕರ್ತವ್ಯಕ್ಕೂ ನಿಯೋಜಿಸಿರುವುದಕ್ಕೆ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಮ್ಮೆ ನಿಯೋಜನೆ ಮಾಡಿದ ಮೇಲೆ ಅದರಲ್ಲಿ ಬದಲಾವಣೆ ತರಬೇಕಾದಲ್ಲಿ ಆಯುಕ್ತರು ಮಧ್ಯಪ್ರವೇಶ ಮಾಡಬೇಕಿದೆ. ಆದರೆ ಆಯುಕ್ತರು ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದು, ಶಿಕ್ಷಕರು ಚುನಾವಣಾ ಕರ್ತವ್ಯಕ್ಕೆ ಹಾಜರಾಗುವುದು ಕಡ್ಡಾಯವಾಗಿದೆ.
ಶಿಕ್ಷಕರು ಚುನಾವಣೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಈ ಮೂಲಕ ಶಿಕ್ಷಕರು ಕೊರೊನಾ ಕರ್ತವ್ಯದ ಜೊತೆಗೆ ಚುನಾವಣೆ ಡ್ಯೂಟಿ ಅನಿವಾರ್ಯವಾಗಿದೆ.