ಉಡುಪಿ: ಕುಂದಾಪುರ (Kundapura news) ಸಮೀಪದ ಕೋಡಿ ಬೀಚ್‌ನಲ್ಲಿ (Beach) ಈಜಲು (Swimming) ಇಳಿದ ಮೂವರು ಸಹೋದರರು ನೀರುಪಾಲಾಗಿದ್ದು (Drowned), ಒಬ್ಬಾತ ಮೃತಪಟ್ಟಿದ್ದಾನೆ. ಇನ್ನೊಬ್ಬನನ್ನು ರಕ್ಷಿಸಲಾಗಿದೆ. ಮತ್ತೊಬ್ಬಾತ ಇನ್ನೂ ಪತ್ತೆಯಾಗಿಲ್ಲ.
ಶನಿವಾರ ಸಂಜೆ ಬೀಚ್‌ಗೆ ಕುಟುಂಬ ಸಮೇತರಾಗಿ ಬಂದಿದ್ದ ಸದಸ್ಯರ ಪೈಕಿ ಸಹೋದರರು ಸಮುದ್ರದಲ್ಲಿ ಈಜಾಡಲು ಇಳಿದಿದ್ದರು. ಅಂಪಾರು ಐದು ಸೆಂಟ್ ನಿವಾಸಿ ದಾಮೋದರ್ ಪ್ರಭು ಎಂಬವರ ಮಗ ಧನರಾಜ್ (23) ಸಾವನ್ನಪ್ಪಿದ್ದರೆ, ಇನ್ನೊಬ್ಬ ಮಗ ಧನುಷ್ (20) ಗಂಭೀರ ಸ್ಥಿತಿಯಲ್ಲಿದ್ದು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವರ ಸಹೋದರನ ಪುತ್ರ ದರ್ಶನ್ (18) ಸಮುದ್ರ ಪಾಲಾಗಿದ್ದು ಇದುವರೆಗೆ ಪತ್ತೆಯಾಗಿಲ್ಲ.
ಈ ಮೂವರು ಸಹೋದರರಾಗಿದ್ದು, ಮೃತನಾಗಿರುವ ಧನರಾಜ್ (23) ವಿಪ್ರೋ ದಲ್ಲಿ ಕೆಲಸ ಮಾಡುತ್ತಿದ್ದನು. ಧನುಷ್ ಸುರತ್ಕಲ್ ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರು ಎನ್ಐಟಿಕೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ದರ್ಶನ್ (18) ಕುಂದಾಪುರ ಜ್ಯೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದಾರೆ.
ಸಹೋದರರು ಮುಳುಗುತ್ತಿರುವುದನ್ನು ಬೆಂಗಳೂರಿನ ಪ್ರವಾಸಿಗರು ಗಮನಿಸಿ ತಕ್ಷಣ ಸಮುದ್ರಕ್ಕೆ ಹಾರಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಆ ಬಳಿಕ ಸ್ಥಳೀಯರು ಇಬ್ಬರನ್ನು ಕುಂದಾಪುರದ ಆಸ್ಪತ್ರೆಗೆ ಕಳುಹಿಸಲು ಸಹಕರಿಸಿದ್ದಾರೆ. ದಾಮೋದರ ಪ್ರಭು ಅವರ ಅಣ್ಣನ ಮಗ ದರ್ಶನ್ ನಾಪತ್ತೆಯಾಗಿದ್ದು ಅವರ ಪತ್ತೆಗಾಗಿ ಈಜು ತಜ್ಞರು ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಕೋಡಿ ಬೀಚಿನಲ್ಲಿ ಘಟನೆ ನಡೆದಿದೆ. ಧನುಷ್ ಹಾಗೂ ಶವವಾಗಿ ಪತ್ತೆಯಾಗಿರುವ ಧನರಾಜ್ ಮುಖಕ್ಕೆ ಮಾಸ್ಕ್ ಮತ್ತು ಕಣ್ಣಿಗೆ ಕಣ್ಣುಕವಚ ಧರಿಸಿದ್ದರು.
ಇದನ್ನೂ ಓದಿ: Murder Case: ಪತ್ನಿಯನ್ನು ಚುಡಾಯಿಸಿದ್ದಕ್ಕೆ ಯುವಕನ ಎದೆಗೆ ಇರಿದು ಕೊಂದ ಪತಿ