Saturday, 14th December 2024

ಗ್ರಾ.ಪಂ ಚುನಾವಣೆ : ಇಂದು ಮನೆಮನೆ ಪ್ರಚಾರ, ನಾಳೆ ಮೊದಲ ಹಂತದ ಮತದಾನ

ಬೆಂಗಳೂರು : ಡಿ.22ರಿಂದ ರಾಜ್ಯದ ಗ್ರಾಮಪಂಚಾಯಿತಿ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆಬಿದ್ದಿದೆ. ಸೋಮವಾರ ಅಭ್ಯರ್ಥಿಗಳುಮನೆಮನೆ ಪ್ರಚಾರ ಕೈಗೊಳ್ಳಲಿದ್ದಾರೆ.

ರಾಜ್ಯಾದ್ಯಂತ 3,019 ಗ್ರಾಮಪಂಚಾಯಿತಿಗಳಲ್ಲಿನ 43,238 ಸ್ಥಾನಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅಗತ್ಯವಿದ್ದರೆ ಗುರುವಾರ ನಡೆಯಲಿದ್ದು, ಡಿ.30 ರಂದು ಮತ ಎಣಿಕೆ ನಡೆಯಲಿದೆ.

43,238 ಸ್ಥಾನಗಳಿಗೆ ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಒಟ್ಟು 1,21,760 ಮಂದಿ ಸ್ಪರ್ಧಿಸಿದ್ದು, ಈ ಪೈಕಿ ಒಟ್ಟು 4,377 ಮಂದಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 1,17,383 ಮಂದಿ ಕಣದಲ್ಲಿ ಉಳಿದಿದ್ದಾರೆ.

ಮೊದಲ ಹಂತದ ಚುನಾವಣೆಗಾಗಿ ಅರ್ಹ ಮತದಾರರಿಗೆ ರಾಜ್ಯ ಸರ್ಕಾರವು ಡಿ. 22 ರಂದು ಮಂಗಳವಾರ ವೇತನ ಸಹಿತ ರಚೆ ನೀಡುವಂತೆ ಆದೇಶ ಹೊರಡಿಸಿದೆ.