Sunday, 15th December 2024

Traffic Fines : ನಿಯಮ ಉಲ್ಲಂಘನೆಯನ್ನೇ ಚಾಳಿ ಮಾಡಿಕೊಂಡಿದ್ದ ಚಾಲಕನಿಗೆ 3 ಮೀಟರ್ ಉದ್ದದ ದಂಡ ಬಿಲ್ ನೀಡಿದ ಪೊಲೀಸರು

Traffic Fines

ಶಿವಮೊಗ್ಗ : ಟ್ರಾಫಿಕ್‌ ರೂಲ್ಸ್ ಮಾಡುವುದು ಸುಗಮ ಹಾಗೂ ಸುರಕ್ಷಿತ ವಾಹನ ಸಂಚಾರಕ್ಕಾಗಿ. ಆದರೆ, ಕೆಲವರಿಗೆ ಅದರ ಬಗ್ಗೆ ಅರಿವೂ ಇರುವುದಿಲ್ಲ. ಹೀಗಾಗಿ ತಪ್ಪು ಮಾಡುತ್ತಿರುತ್ತಾರೆ. ಇನ್ನೂ ಕೆಲವರು ಗೊತ್ತಿದ್ದೂ ಗೊತ್ತಿದ್ದು ಟ್ರಾಫಿಕ್‌ ರೂಲ್ಸ್ ಇರುವದೇ ಬ್ರೇಕ್ ಮಾಡಲು ಎಂಬಂತೆ ವರ್ತಿಸುತ್ತಾರೆ. ಮೊದಲೆಲ್ಲ ಇದು ನಡೆಯುತ್ತಿತ್ತು. ಆದರೆ , ಈಗ ಪರಿಸ್ಥಿತಿ ಹಿಂದಿನಂತಿಲ್ಲ. ಕ್ಯಾಮೆರಾಗಳು, ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಇಂತವರ ಮೇಲೆ ಕಣ್ಣಿಟ್ಟು ದಂಡ (Traffic Fines) ಮೊತ್ತವನ್ನು ಸೇರಿಸುತ್ತಲೇ ಹೋಗುತ್ತದೆ. ಒಂದು ಬಾರಿ ಸಿಕ್ಕಿ ಬಿದ್ದರೆ ವರ್ಷಕ್ಕೆ ಬೇಕಾಗುವಷ್ಟು ದಂಡ ಕಟ್ಟಬೇಕಾಗಿರುವುದು ನಿಶ್ಚಿತ. ಅಂಥದ್ದೇ ಒಂದು ಪ್ರಕರಣ ಶಿವಮೊಗ್ಗದಲ್ಲಿ ನಡೆದಿದೆ.

ಸಾಲು ಸಾಲು ಸಂಚಾರ ನಿಯಮ ಉಲ್ಲಂಘಿಸಿದ ಕಾರು ಚಾಲಕನಿಗೆ ಶಿವಮೊಗ್ಗದ ಪಶ್ಚಿಮ ಸಂಚಾರ (Traffic) ಪೊಲೀಸರು ದೊಡ್ಡ ಬಿಲ್‌ ನೀಡಿದ್ದಾರೆ. ದಂಡದ ಬಿಲ್ ಹೊರಕ್ಕೆ ತೆಗೆದಾಗ ಅದು ಮೂರು ಮೀಟರ್ ಉದ್ದವಿತ್ತು. ಆ ಚಾಲಕ 11 ಸಾವಿರ ರೂ. ದಂಡ ಕಟ್ಟಿಸಿಕೊಂಡಿದ್ದಾರೆ.

ಶಿವಮೊಗ್ಗದ ಶಿವಪ್ಪನಾಯಕ ವೃತ್ತದ ಬಳಿಕ ವಾಹನ ತಪಾಸಣೆ ವೇಳೆ ಕಾರನ್ನು ತಡೆದು ಪರಿಶೀಲಿಸಿದಾಗ ಚಾಳಿ ಬಿದ್ದ ಚಾಲಕ ಸಿಕ್ಕಿಬಿದ್ದಿದ್ದಾನೆ. ಆಗ ಹಲವು ಕಡೆ ಸಂಚಾರ ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಕಾರು ಚಾಲಕನಿಗೆ ವರ್ಷಕ್ಕೆ ಆಗುವಷ್ಟು ದಂಡ ಬಿಲ್‌ ನೀಡಲಾಗಿದೆ. ತಪ್ಪಿತಸ್ಥ ಚಾಲಕರಿಂದ ದಂಡವನ್ನು ಕಟ್ಟಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ

ರಾಜ್ಯ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರಿ ಅಕ್ರಮ; ಸಿಇಒ ಸೇರಿ 6 ಮಂದಿ ವಿರುದ್ಧ ಎಫ್‌ಐಆರ್‌

ವಾಲ್ಮೀಕಿ ಹಗರಣ, ಮುಡಾ ಹಗರಣ ಬೆನ್ನಲ್ಲೇ ರಾಜ್ಯದಲ್ಲಿ ಇದೀಗ ಮತ್ತೊಂದು ಹಗರಣ ಭಾರಿ ಹಗರಣ ಬೆಳಕಿಗೆ ಬಂದಿದೆ. ಕರ್ನಾಟಕ ರಾಜ್ಯ ಕೋ ಆಪರೇಟಿವ್ ಸೊಸೈಟಿಯಲ್ಲಿ (Money laundering) ಬರೋಬ್ಬರಿ 19.34 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿ ಪ್ರಭಾರ ಸಿಇಒ ಸೇರಿ 6 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಸಹಕಾರ ಸಚಿವ ಕೆಎನ್​ ರಾಜಣ್ಣ ಅವರು ಅ.9ರಂದು ಸಭೆ ನಡೆಸಿದ ವೇಳೆ ಈ ಅಕ್ರಮ ಬೆಳಕಿಗೆ ಬಂದಿದೆ. 2017ರಿಂದ 2023ರ ವರೆಗೆ ಸೊಸೈಟಿಯಲ್ಲಿ ಎಫ್‌ಡಿ ರೂಪದಲ್ಲಿದ್ದ 19.34 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಂದಿದೆ.

ಸೊಸೈಟಿ ಅಧ್ಯಕ್ಷ ರಾಜು ಎಂಬುವರು ನೀಡಿದ ದೂರಿನ ಮೇರೆಗೆ ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಭಾರ ಸಿಇಒ ಆಶಾಲತಾ, ಅವರ ಪತಿ ಸೋಮಶೇಖರ, ಬಿಡಿಸಿಸಿ ಅಧ್ಯಕ್ಷ, ಬ್ಯಾಂಕ್ ಮ್ಯಾನೇಜರ್, ಆಡಿಟರ್ ಸೇರಿ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: Vladimir Putin : ಉಕ್ರೇನ್ ಜತೆಗಿನ ಸಂಘರ್ಷ ಕೊನೆಗೊಳಿಸಲು ಮೋದಿಯ ಪ್ರಯತ್ನವನ್ನು ಶ್ಲಾಘಿಸಿದ ರಷ್ಯಾ ಪ್ರಧಾನಿ ಪುಟಿನ್‌

2017 ರಿಂದ 2023ರ ವರೆಗೆ ಸೊಸೈಟಿಯಲ್ಲಿ ಎಫ್.ಡಿ. ರೂಪದಲ್ಲಿದ್ದ 19.34 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಅನೇಕರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ನಂತರ ಅಕ್ರಮ ಮುಚ್ಚಿಡಲು 101 ಎಫ್.ಡಿ. ಖಾತೆಗಳ ನಕಲಿ ಠೇವಣಿ ಬಾಂಡ್ ಸೃಷ್ಟಿಸಲಾಗಿದೆ. ಅಧ್ಯಕ್ಷರ ಸಹಿಯನ್ನು ಕೂಡ ನಕಲಿ ಮಾಡಲಾಗಿದೆ. ಈ ಬಗ್ಗೆ ಸಚಿವರ ಗಮನಕ್ಕೆ ಬಂದು ಪ್ರಶ್ನಿಸಿದಾಗ ಸೊಸೈಟಿ ಹಣವನ್ನು ಅಪೆಕ್ಸ್ ಬ್ಯಾಂಕಿನಲ್ಲಿ, ಬಿಡಿಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವುದಾಗಿ ತಿಳಿಸಿದ್ದಾರೆ. ಆದರೆ ಪರಿಶೀಲನೆ ನಡೆಸಿದಾಗ ಅಕ್ರಮ ಹಣ ವರ್ಗಾವಣೆ ನಡೆಸಿರುವುದು, ನಕಲಿ ಠೇವಣಿ ಬಾಂಡ್‌ಗಳ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.