ತುಮಕೂರು: ತಂದೆ ಮೃತಪಟ್ಟ ದುಃಖದ ನಡುವೆ ಕರ್ತವ್ಯಪ್ರಜ್ಞೆ ತೋರಿಸಿರುವ 11 ವರ್ಷದ ಬಾಲಕಿ, ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರ (Last Rites) ನೆರವೇರಿಸಿ ಇತರರಿಗೆ ಮಾದರಿಯಾಗಿರುವ ಪ್ರಸಂಗ ತುಮಕೂರು (Tumkur News) ಜಿಲ್ಲೆಯಲ್ಲಿ ನಡೆದಿದೆ.
ತಾಲೂಕಿನ ಹಿರೇಹಳ್ಳಿ ಸಮೀಪದ ಪೆಮ್ಮನಹಳ್ಳಿ ಗ್ರಾಮದ ನಿವಾಸಿ ಕೆಂಪರಾಜು (48) ಅನಾರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳಾದ, 6ನೇ ತರಗತಿ ವ್ಯಾಸಂಗ ಮಾಡುತ್ತಿರುವ 11 ವರ್ಷದ ಮೋನಿಷಾ, ತಂದೆಯ ಅಂತ್ಯಕ್ರಿಯೆ ನೆರವೇರಿಸಿದರು.
ಈ ಮೂಲಕ ಮೋನಿಷಾ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟರು. ಅಂತ್ಯಸಂಸ್ಕಾರ, ಉತ್ತರ ಕ್ರಿಯಾದಿಗಳನ್ನು ಪುರುಷರೇ ನೆರವೇರಿಸುವುದು ರೂಢಿಯಾಗಿರುವ ಪುರುಷ ಪ್ರಧಾನ ಸಮಾಜದಲ್ಲಿ ಇದೊಂದು ದಿಟ್ಟ ನಡೆಯಾಗಿದೆ. ತಂದೆಯ ಅಂತ್ಯವಿಧಿ ತಾನೇ ನೆರವೇರಿಸುತ್ತೇನೆ ಎಂದು ಮುಂದೆ ಬಂದ ಈಕೆಗೆ ಗ್ರಾಮಸ್ಥರೂ ಬೆಂಬಲವಾಗಿ ನಿಂತು ಬದಲಾವಣೆಗೆ ಕಾರಣಕರ್ತರಾಗಿದ್ದಾರೆ.
ಇದನ್ನೂ ಓದಿ: Ratan Tata Death: ರತನ್ ಟಾಟಾ ಅಂತ್ಯಕ್ರಿಯೆ ಹೇಗೆ? ಪಾರ್ಸಿಗಳ ಅಂತ್ಯಸಂಸ್ಕಾರ ವಿಧಾನವೇ ವಿಭಿನ್ನ!