Friday, 22nd November 2024

Tumkur News: ಗೃಹ ಸಚಿವ ಪರಮೇಶ್ವರ್‌ಗೆ ಸಿಎಂ ಸ್ಥಾನ ಸಿಗಲಿ; ಹನುಮಂತನಾಥ ಸ್ವಾಮೀಜಿ

Tumkur News

ತುಮಕೂರು: ಗೃಹ ಸಚಿವ ಡಾ.ಜಿ. ಪರಮೇಶ್ವರ್ (G Parameshwar) ಅವರಿಗೆ ಸಿಎಂ ಸ್ಥಾನ ಸಿಗಲಿ ಎಂದು ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ ಹೇಳಿದ್ದಾರೆ. ದಸರಾ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ನಮ್ಮ ಜಿಲ್ಲೆಯಿಂದ (Tumkur News) ಒಬ್ಬರು ಮುಖ್ಯಮಂತ್ರಿಗಳು ಆಗುವುದಕ್ಕೆ ಅವಕಾಶ ಸಿಗಬೇಕು ಎಂದು ಪ್ರತಿಸಾರಿ ನಾವು ಅಂದುಕೊಳುತ್ತಿದ್ದೆವು. ಪರಮೇಶ್ವರ್ ಅವರಿಗೆ ಕಳೆದ ಬಾರಿ ಕೊರಟಗೆರೆ (Koratagere) ಕ್ಷೇತ್ರದಲ್ಲಿ ಸೋಲಾಯ್ತು. ಕಳೆದ ಬಾರಿ ಪರಮೇಶ್ವರ್ ಮುಖ್ಯಮಂತ್ರಿ ಎಂದು ಬಿಂಬಿಸಿದಾಗ ಆ ಹುದ್ದೆ ಅವರಿಂದ ಕೈತಪ್ಪಿ ಹೋಯ್ತು. ಈಗಲಾದರೂ ನಮ್ಮ ಜಿಲ್ಲೆಯಿಂದ ಒಬ್ಬರು ಮುಖ್ಯಮಂತ್ರಿಗಳಾಗಲಿ ಅನ್ನೋದು ನಮ್ಮ ಆಶಯ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Dasara Gombe Habba 2024: ಮಾರುಕಟ್ಟೆಯಲ್ಲಿ ದಸರಾ ಗೊಂಬೆಗಳ ಕಲರವ!

ಶಿರಾ, ಮಧುಗಿರಿ, ಪಾವಗಡ ಹೀಗೆ ತುಂಬಾ ಹಿಂದುಳಿದ ತಾಲೂಕುಗಳನ್ನು ಹೊಂದಿರುವ ಜಿಲ್ಲೆ ಇದು. ನಮ್ಮ ಒಂದು ಕನಸು ನಮ್ಮ ಜಿಲ್ಲೆಯಿಂದ ಮುಖ್ಯಮಂತ್ರಿ ಆದರೆ ಎಲ್ಲ ತಾಲೂಕುಗಳು ಅಭಿವೃದ್ಧಿ ಆಗುತ್ತದೆ. ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಆಗುತ್ತದೆ. ಇದು ಯಾವುದೇ ರಾಜಕೀಯ ಪ್ರೇರಿತವಲ್ಲ, ಇದು ಧಾರ್ಮಿಕ ಕಾರ್ಯಕ್ರಮ ಅಂತ ನಾನು ಹೆಚ್ಚಿಗೆ ಮಾತನಾಡಲು ಹೋಗಿಲ್ಲ. ಈ ಜಿಲ್ಲೆಗೆ ವಿಶೇಷ ಅನುದಾನ ನೀಡುವ ಮೂಲಕ ರಾಜ್ಯದ ಮೊದಲ ಸ್ಥಾನದಲ್ಲಿ ನಿಲ್ಲಬೇಕು ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Karnataka Rain: ನಾಳೆ ಬೆಂಗಳೂರು, ಹಾಸನ, ತುಮಕೂರು ಸೇರಿ ವಿವಿಧೆಡೆ ಭಾರಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಎಲ್ಲ ವರ್ಗದವರಿಗೆ ಸಾಮಾಜಿಕ ಶೈಕ್ಷಣಿಕ ನ್ಯಾಯ ಸಿಗಬೇಕು ಎಂಬ ದೃಷ್ಟಿಯಿಂದ ಮಾತನಾಡಿದ್ದೇನೆ. ಹೀಗಾಗಿ ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ಭಾಗ್ಯ ಒಲಿದು ಬರಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ನಾನು ಧರ್ಮದಲ್ಲಿ ರಾಜಕೀಯ ಇರಬಾರದು, ರಾಜಕೀಯದಲ್ಲಿ ಧರ್ಮ ಇರಬೇಕು ಅಂತ ಹೇಳಿಕೊಂಡು ಬಂದವನು. ನಾನು ಯಾವತ್ತೂ ಯಾವುದೇ ಪಕ್ಷಕ್ಕೆ, ಮತಕ್ಕೆ ಸೀಮಿತವಾಗಿಲ್ಲ. ನಮಗಿರುವ ಆಸೆ ಏನು ಅಂದರೆ ನಮ್ಮ ಜಿಲ್ಲೆ ಅಭಿವೃದ್ಧಿ ಆಗಲಿ, ಕುಡಿಯುವ ನೀರು, ಮೆಟ್ರೋ, ಎತ್ತಿನಹೊಳೆ, ವಿಮಾನ ನಿಲ್ದಾಣ ಹೀಗೆ ಬೇರೆ ಬೇರೆ ಅಭಿವೃದ್ಧಿಗಳಾಗಬೇಕು. ಇವತ್ತು ಸಹ ನಮ್ಮ ಜಿಲ್ಲೆಯಲ್ಲಿ ಎಷ್ಟು ಜನ ಗುಡಿಸಲಿನಲ್ಲಿ ವಾಸ ಮಾಡುತ್ತಿದ್ದಾರೆ ಎಂಬುದು ತಿಳಿದಿದೆ. ಹೀಗಾಗಿ ನಮ್ಮ ಜಿಲ್ಲೆಗೆ ಒಂದು ಅವಕಾಶ ಸಿಕ್ಕಿದರೆ 10 ತಾಲೂಕುಗಳು ಅಭಿವೃದ್ಧಿ ಕಾಣಬಹುದು ಎಂದು ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ ತಿಳಿಸಿದ್ದಾರೆ.