-ಶೀಲಾ ಸಿ. ಶೆಟ್ಟಿ
ಹೊಸ ವರ್ಷದ ನವೋಲ್ಲಾಸ ಹೆಚ್ಚಿಸುವಲ್ಲಿ ಟ್ವಿನ್ನಿಂಗ್ ಔಟ್‌ಫಿಟ್ಸ್ (Twinning Fashion) ಕೂಡ ಸೇರಿವೆ. ಇದು ಈ ಇಯರ್ ಎಂಡ್ ಫ್ಯಾಷನ್‌ನ ಟ್ರೆಂಡಿ ಡಿಸೈನವೇರ್‌ಗಳಲ್ಲಿ ಟಾಪ್ ಲಿಸ್ಟ್‌ನಲ್ಲಿದೆ. ಟ್ರೆಂಡಿ ಶೇಡ್‌ಗಳಲ್ಲಿ ಮಾತ್ರವಲ್ಲ, ವಿಂಟರ್ ಕಲರ್‌ಗಳಲ್ಲೂ ಟ್ವಿನ್ನಿಂಗ್ ಮ್ಯಾಚಿಂಗ್ ಉಡುಪುಗಳು ಫ್ಯಾಷನ್ ಲೋಕಕ್ಕೆ ಆಗಮಿಸಿವೆ.
ಡಿಸೈನರ್ ಸಾಗರ್ ಹೇಳುವಂತೆ ‘ಟ್ವಿನ್ನಿಂಗ್ ಡಿಸೈನವೇರ್‌ಗಳನ್ನು ಕೊಳ್ಳುವಾಗ ಹಾಗೂ ಡಿಸೈನ್ ಮಾಡಿಸುವಾಗ ಅವು ಟ್ರೆಂಡ್‌ಗೆ ಹೊಂದುತ್ತವೆಯೇ! ಆ ಬಣ್ಣಗಳು ಸೀಸನ್‌ಗೆ ಮ್ಯಾಚ್ ಆಗುವಂತಿವೆಯೇ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು ಎನ್ನುತ್ತಾರೆ.
ನ್ಯೂ ಇಯರ್‌ಗೆ ಆಕರ್ಷಕ ಶೇಡ್ಸ್ ಆಯ್ಕೆ
ಪಾರ್ಟಿ ಶೇಡ್‌ಗಳಾದ ಗೋಲ್ಡನ್, ಸಿಲ್ವರ್ ಹೀಗೆ ನಾನಾ ಬಗೆಯ ಟ್ವಿನ್ನಿಂಗ್ ಡಿಸೈನರ್‌ವೇರ್ಸ್‌ಗಳು ಹಾಗೂ ವೆಸ್ಟರ್ನ್‌ವೇರ್‌ಗಳು ಟ್ರೆಂಡ್‌ನಲ್ಲಿವೆ. ಇನ್ನು ಯಾವುದೇ ಜೋಡಿಯು ಧರಿಸುವಾಗ ಆ ಡಿಸೈನರ್‌ವೇರ್‌ಗಳ ಬಣ್ಣ ಹಾಗೂ ಶೇಡ್ಸ್ ಒಂದಕ್ಕೊಂದು ಮ್ಯಾಚ್ ಆಗುತ್ತವೆಯೇ ಎಂಬುದನ್ನು ಗಮನಿಸಬೇಕು. ನೋಡುಗರಿಗೆ ಪರ್ಫೆಕ್ಟ್ ಶೇಡ್ಸ್ ಎಂದನಿಸಬೇಕು ಎನ್ನುತ್ತಾರೆ ಫ್ಯಾಷನಿಸ್ಟಾ ಜಾನ್. ಸೂಕ್ತವಾದ ಔಟ್‌ಫಿಟ್‌ಗಳನ್ನು ಸೆಲೆಕ್ಟ್ ಮಾಡಿದಲ್ಲಿ, ಟ್ವಿನ್ನಿಂಗ್ ಔಟ್‌ಫಿಟ್ ಧರಿಸಿದವರು, ಒಟ್ಟೊಟ್ಟಿಗೆ ಓಡಾಡುವಾಗ ನೋಡಲು ಪ್ಲೆಸೆಂಟ್ ಲುಕ್ ನೀಡುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಸೆಲೆಬ್ರೆಟಿ ಲುಕ್ ನೀಡುವ ಟ್ವಿನ್ನಿಂಗ್ ಕಾನ್ಸೆಪ್ಟ್
ಹಾಲಿವುಡ್, ಬಾಲಿವುಡ್ ಸೆಲೆಬ್ರಿಟಿಗಳು ಧರಿಸುವ ಟ್ವಿನ್ನಿಂಗ್ ಔಟ್‌ಫಿಟ್‌ಗಳ ಶೈಲಿಯಲ್ಲೆ ಡಿಸೈನರ್‌ವೇರ್‌ಗಳನ್ನು ಆಯ್ಕೆ ಮಾಡಿಕೊಂಡಾಗ ನೀವು ಸೆಲೆಬ್ರೆಟಿ ಲುಕ್ ಪಡೆಯಬಹುದು ಎನ್ನುವ ಸ್ಟೈಲಿಸ್ಟ್ ಜಿಯಾ ಪ್ರಕಾರ, ಬಾಲಿವುಡ್‌ನಲ್ಲಿ ಪ್ರಿಯಾಂಕಾ-ನಿಕ್, ಸೈಫ್-ಕರೀನಾ, ಜೆನಿಲಿಯಾ-ರಿತೇಶ್ ದೇಶ್‌ಮುಖ್ ಆಗಾಗ್ಗೆ ಟ್ವಿನ್ನಿಂಗ್ ಕಾನ್ಸೆಪ್ಟ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದು ಇತರರಿಗೂ ಮಾದರಿಯಾಗುವಂತಿದೆ ಎನ್ನುತ್ತಾರೆ.
ಟ್ವಿನ್ನಿಂಗ್ ಮ್ಯಾಚಿಂಗ್ ಹೇಗೆ?
ಮೊದಲು ವೆಸ್ಟರ್ನ್ ಅಥವಾ ಸೆಮಿ ಫಾರ್ಮಲ್ಸ್ ಇಲ್ಲವೇ ಎಥ್ನಿಕ್ವೇರ್ ಟ್ವಿನ್ನಿಂಗ್ ಮಾಡುತ್ತಿರುವಿರಾ ಎಂಬುದನ್ನು ಡಿಸೈಡ್ ಮಾಡಬೇಕು. ಉದಾಹರಣೆಗೆ., ಯುವಕರದ್ದು ತೀರಾ ಸಾದಾ ಹಾಗೂ ಡಾರ್ಕ್ ಕಲರ್‌ನ ಉಡುಪಾಗಿದ್ದಲ್ಲಿ, ಅದಕ್ಕೆ ಒಪ್ಪುವಂತಹ ಬ್ರೈಟ್ ಹಾಗೂ ಎಂಬ್ರಾಯ್ಡರಿ ಇಲ್ಲವೇ ಕಲಾಂಕಾರಿ ವಿನ್ಯಾಸದವು ಯುವತಿಯರದ್ದಾಗಿರಬೇಕು. ವಿನ್ಯಾಸ ಒಂದಕ್ಕೊಂದು ಮ್ಯಾಚ್ ಆಗುವಂತಿರಬೇಕು. ಕೆಲವೊಮ್ಮೆ ಒಂದೇ ಬಣ್ಣದ್ದಾಗಿರದಿದ್ದರೂ ಕೂಡ ಡಿಸೈನ್ ಒಂದೇಯಾಗಿರುವುದನ್ನು ಧರಿಸಬಹುದು. ಲುಕ್ ಕೂಡ ಒಂದೇ ಬಗೆಯದ್ದಾಗಿರಬೇಕು. ಆಗ ನೋಡಲು ಸಖತ್ತಾಗಿ ಕಾಣಿಸುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಯಾವುದು ನಾಟ್ ಓಕೆ!
ಒಬ್ಬರು ಫಾರ್ಮಲ್‌ನಲ್ಲಿದ್ದು, ಮತ್ತೊಬ್ಬರು ಕ್ಯಾಶುಯಲ್ ಲುಕ್‌ನಲ್ಲಿದ್ದರೆ ಖಂಡಿತಾ ಮ್ಯಾಚ್ ಆಗದು. ಒಬ್ಬರು ಫ್ಲೋರಲ್ ರೆಟ್ರೊ ಸ್ಟೈಲ್‌ನಲ್ಲಿದ್ದು , ಮತ್ತೊಬ್ಬರು ತೀರಾ ಫಾಸ್ಟ್ ಮೂವಿಂಗ್ ಫಂಕಿ ಸ್ಟೈಲ್‌ನಲ್ಲಿದ್ದರೇ ನೋಡುಗರಿಗೆ ಅಭಾಸವುಂಟಾಗುವುದು ಗ್ಯಾರಂಟಿ. ಇನ್ನು ಒಬ್ಬರ ಫ್ಯಾಬ್ರಿಕ್ ಡಲ್ ಮತ್ತೊಬ್ಬರದ್ದು, ಶೈನಿಂಗ್ ಇದ್ದರೂ ಸೂಟ್ ಆಗುವುದಿಲ್ಲ ಎಂಬುದು ನೆನಪಿರಲಿ ಎನ್ನುತ್ತಾರೆ ಡಿಸೈನರ್ ರಾಜಿ.
ಈ ಸುದ್ದಿಯನ್ನೂ ಓದಿ | New Year Mens Partywear 2024: ಪರ್ಫೆಕ್ಟ್ ಇಮೇಜ್ ನೀಡುವ ನ್ಯೂ ಇಯರ್ ಮೆನ್ಸ್ ಪಾರ್ಟಿವೇರ್
ಡ್ರೆಸ್‌ಗೂ ಪಾಟ್ನರ್‌ಶಿಪ್
- ನಿಮ್ಮ ಪಾಟ್ನರ್ ಅಭಿರುಚಿ ಬಗ್ಗೆ ಮೊದಲೇ ತಿಳಿದುಕೊಂಡು ಆಯ್ಕೆ ಮಾಡಿ.
- ಇಬ್ಬರು ಧರಿಸುವ ಆಕ್ಸೆಸರೀಸ್‌ಗಳು ಮ್ಯಾಚ್ ಆಗುವುದು ಅಗತ್ಯ.
- ಟ್ರೆಂಡಿ ವೇರ್‌ಗಳ ಆಯ್ಕೆ ಮೊದಲ ಪ್ರಿಫರೆನ್ಸ್ ಆಗಿರಬೇಕು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)