Saturday, 28th December 2024

Unlock Raghava Movie: ಮಿಲಿಂದ್-ರೆಚೆಲ್ ಡೇವಿಡ್ ಅಭಿನಯದ ʼಅನ್‌ಲಾಕ್ ರಾಘವʼ ಚಿತ್ರ ಫೆಬ್ರವರಿ 7ಕ್ಕೆ ಬಿಡುಗಡೆ

Unlock Raghava Movie

ಬೆಂಗಳೂರು: ಆರಂಭದಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ʼಅನ್‌ಲಾಕ್ ರಾಘವʼ ಚಿತ್ರ (Unlock Raghava Movie) ಫೆಬ್ರವರಿ 7ರಂದು ಬಿಡುಗಡೆಯಾಗಲಿದೆ. ಯುವ ಪ್ರತಿಭೆಗಳಾದ ಮಿಲಿಂದ್ ಹಾಗೂ ರೆಚೆಲ್ ಡೇವಿಡ್ (ಲವ್ ಮಾಕ್ಟೇಲ್) ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Flare Dress Fashion: ಎವರ್ ಗ್ರೀನ್ ವಿನ್ಯಾಸದ ಫ್ಯಾಷನ್ ಲಿಸ್ಟ್‌ನಲ್ಲಿ ಫ್ಲೇರ್ ಡ್ರೆಸ್‌ಗಳು

ಸಿನಿಮಾದ ಬಿಡುಗಡೆಗೂ ಪೂರ್ವದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ನಾಯಕ ಮಿಲಿಂದ್, ನಿರ್ಮಾಪಕ ಮಂಜುನಾಥ್ ದಾಸೇಗೌಡ ಹಾಗೂ ಚಿತ್ರತಂಡದ ಸದಸ್ಯರು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.