Wednesday, 11th December 2024

ಚಲಿಸುತ್ತಿದ್ದ ಬಸ್ಸಿನಡಿ ಬಿದ್ದು ತಾಯಿ ಮಗು ಸಾವು

ಉಪ್ಪಿನಂಗಡಿ: ಉಪ್ಪಿನಂಗಡಿ ಬಸ್ ನಿಲ್ಧಾಣದಲ್ಲಿ ಮಂಗಳವಾರ ಚಲಿಸುತ್ತಿದ್ದ ಬಸ್ಸಿನಡಿ ಬಿದ್ದು ತಾಯಿ ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿ ಶಿರ್ಲಾಲು ನಿವಾಸಿ ಸಾಹಿದಾ (25) ಮತ್ತು ಅವರ ಪುತ್ರ ಅಂದಾಜು 1 ವರ್ಷದ ಮಗು ಸಾಹಿಲ್ ಮೃತ ದುರ್ಧೈವಿಗಳು ಎಂದು ತಿಳಿದು ಬಂದಿದೆ.  ಬಸ್ ನಿಲ್ದಾಣದಲ್ಲಿ ತಾಯಿ ಮಗು ರಸ್ತೆ ದಾಟುತ್ತಿದ್ದಾಗ ಢಿಡೀರನೇ ನುಗ್ಗಿದ್ದ ಕೆಎಸ್ ಆರ್ ಟಿಸಿ ಬಸ್ ಇಬ್ಬರ ಮೇಲೆ ರಭಸವಾಗಿ ಚಲಿಸಿದೆ. ಪರಿಣಾಮ ತಾಯಿ ಮಗ ಇಬ್ಬರು ಬಸ್ಸಿನಡಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದಾರೆ.

ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿ ಬಸ್ಸಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.