Sunday, 29th December 2024

Vaginal Reconstruction Surgery: 23 ವರ್ಷದ ಯುವತಿಗೆ ʼಯೋನಿ ಪುನರ್ ರಚನೆ’ ಆಪರೇಷನ್ ಸಕ್ಸೆಸ್!

Vaginal Reconstruction Surgery

ಬೆಂಗಳೂರು: ಸಾಮಾನ್ಯವಾಗಿ ಬಹುತೇಕ ಮಹಿಳೆಯರಿಗೆ ಗರ್ಭಕೋಶ ಮತ್ತು ಯೋನಿ (Vaginal Reconstruction Surgery) ಮಾರ್ಗದಲ್ಲಿ ಸಮಸ್ಯೆ ಇರುವುದು ಗೊತ್ತೇ ಇರುವುದಿಲ್ಲ. ಈ ಸಮಸ್ಯೆಯು ಆಕೆಯ ಲೈಂಗಿಕ ಮತ್ತು ಕೌಟುಂಬಿಕ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಪ್ರಕರಣವೊಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ವರದಿಯಾಗಿದೆ.

28 ವರ್ಷದ ಯುವತಿ ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ಅತಿಯಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ವೈದ್ಯರನ್ನು ಸಂಪರ್ಕಿಸಿದಳು. ಬಳಿಕ ಆಕೆಯನ್ನು ಪರೀಕ್ಷಿಸಿದ ವೈದ್ಯರು ಯುವತಿಯಲ್ಲಿ ಅಂಡಾಶಯವಿದ್ದು, ಯೋನಿ ಮಾರ್ಗದಲ್ಲಿ ಸಮಸ್ಯೆ ಮತ್ತು ಗರ್ಭಕೋಶವಿಲ್ಲದಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಮಾಹಿತಿ ನೀಡಿದ ಬೆಂಗಳೂರಿನ ವಾಸವಿ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾ.ನಿಶಾ ಬುಚಾಡೆ, ಹೀಗೆ ಗರ್ಭಕೋಶವೇ ಬೆಳೆಯದಿರುವುದಕ್ಕೆ ಮುಲೇರಿಯನ್ ಏಜೆನಿಸಿಸ್ ಎನ್ನಲಾಗುತ್ತದೆ. ಇದೊಂದು ಅತೀ ವಿರಳವಾದ ಪ್ರಕರಣ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಈ ಸುದ್ದಿಯನ್ನೂ ಓದಿ | Heavy Snowfall: ಭಾರೀ ಹಿಮಪಾತ; 5,000 ಪ್ರವಾಸಿಗರ ರಕ್ಷಣೆ

ಯುವತಿಯ ಸಮಸ್ಯೆ ಆಲಿಸಿದ ವೈದ್ಯರು ಎಂಆರ್‌ಐ ಪರೀಕ್ಷೆ ನಡೆಸಿದರು. ತದನಂತರ ಕೂಲಂಕುಶವಾಗಿ ವರದಿಯನ್ನು ಪರೀಕ್ಷಿಸಿದಾಗ, ಯೋನಿಯಿರಬೇಕಾದ ಜಾಗದಲ್ಲಿ ದೊಡ್ಡದಾದ ಗಡ್ಡೆಯಿತ್ತು ಇದರಿಂದಾಗಿ ಯುವತಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಆದರೆ ಯುವತಿಯಲ್ಲಿ ಗರ್ಭಾಶಯ ಮತ್ತು ಯೋನಿ ಇಲ್ಲದಿರುವುದು ಎಂಆರ್‌ಐನಲ್ಲಿ ಖಚಿತವಾಯಿತು. ತದನಂತರ ಯುವತಿಯ ಹೊಟ್ಟೆ ನೋವಿಗೆ ಕಾರಣವಾದ ದೊಡ್ಡದಾದ ಗಡ್ಡೆಯನ್ನು ಲ್ಯಾಪ್ರೋಸ್ಕೊಪಿಕ್ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಯಿತು. ತದನಂತರ ಆ ಜಾಗದಲ್ಲಿ ಯೋನಿ ಪುನರ್ ರಚನೆ ಮಾಡಲಾಯಿತು ಎಂದು ಡಾ. ನಿಶಾ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Namma Metro: ಹೊಸ ವರ್ಷದ ಸಂಭ್ರಮಕ್ಕೆ ನಮ್ಮ ಮೆಟ್ರೋ ಸಾಥ್;‌ ಡಿ.31ರಂದು ರಾತ್ರಿ 2.40ರವರೆಗೂ ರೈಲು

ಇದೊಂದು ವಿರಳ ಪ್ರಕರಣ ಎಂದು ಗುರುತಿಸಲಾಗಿದ್ದು, ವೈದ್ಯಕೀಯ ಭಾಷೆಯಲ್ಲಿ ಈ ಸಮಸ್ಯೆಗೆ. ಶಸ್ತ್ರಚಿಕಿತ್ಸೆಯ ನಂತರ ಯುವತಿಯು ಎಲ್ಲ ಮಹಿಳೆಯರಂತೆ ಯೋನಿಯನ್ನು ಹೊಂದಿದ್ದು, ಸಾಮಾನ್ಯ ಸಂವೇದನೆಯೊಂದಿಗೆ ಚೇತರಿಕೆ ಕಾಣುತ್ತಿದ್ದಾಳೆ. ಅಲ್ಲದೆ ಯುವತಿಯು ಅಂಡಾಶಯ ಹೊಂದಿರುವುದರಿಂದ, ತನ್ನದೇ ಮಗುವನ್ನ ಪಡೆಯಲು ಸಶಕ್ತಳಾಗಿದ್ದಾಳೆ. ಆದರೆ ಗರ್ಭಕೋಶವಿಲ್ಲದಿರುವ ಕಾರಣ ಬಾಡಿಗೆ ತಾಯ್ತನದ ಮೂಲಕ ಆಕೆ ಮಗುವನ್ನು ಹೊಂದಬಹುದು ಎಂದು ಚಿಕಿತ್ಸೆ ನೀಡಿದ ಸ್ತ್ರೀರೋಗ ತಜ್ಞರಾದ ಡಾ.ನಿಶಾ ಬುಚಾಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.