Thursday, 12th December 2024

ವಿಜ್ಞಾನ ಜೀವನದ ಅವಿಭಾಜ್ಯ ಅಂಗ: ಲಕ್ಷ್ಮೀ ಶಂಕರ ವನೇಶಿ

ಕೊಲ್ಹಾರ: ವಿಜ್ಞಾನ ವಿಷಯವು ಅತ್ಯಂತ ತಾರ್ತಿಕ ಹಾಗೂ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ ವಿಜ್ಞಾನ ವಿಷಯ ಶಿಕ್ಷಕಿಯ ಲಕ್ಷ್ಮೀ ಶಂಕರ ವನೇಶಿ ಹೇಳಿದರು.

ತಾಲೂಕಿನ ಕುಪಕಡ್ಡಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ ಹಮ್ಮಿಕೊಂಡು ಮಾತನಾಡಿದ ಅವರು ಮಕ್ಕಳು ವಿಜ್ಞಾನ ವಿಷಯವನ್ನು ಆಸಕ್ತಿಯಿಂದ ಅಭ್ಯಸಿಸುವ ಮೂಲಕ ಉನ್ನತ ಮಟ್ಟದಲ್ಲಿ ಸಾಧನೆ ಮಾಡಬೇಕು. ನಮ್ಮ ದೇಶದ ವಿಜ್ಞಾನಿ ಗಳು ವಿಶ್ವಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಅವರು ಎಂದರು.

ಈ ಸಂದರ್ಭದಲ್ಲಿ ಮಕ್ಕಳಿಗೆ ವಿಜ್ಞಾನ ವಿಷಯದಲ್ಲಿ ಬರುವ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಪದಕಗಳನ್ನು ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಮುರುಗೇಶ ಹಳ್ಳಿ, ಶಿಕ್ಷಕರಾದ ಹಣಮಂತ ಬಿರಾದಾರ, ಹೇಮಾವತಿ, ಸಿದ್ದು ಕೋಟ್ಯಾಳ,ಬಾಬು ಪವಾರ, ಕವಿತಾ ಹಿರೇಮಠ, ಶಾಂತಪ್ಪ ನಾಗರಳ್ಳಿ, ಆನಂದ ಹೊಲ್ದೂರ ಹಾಗೂ ಇತರರು ಹಾಜರಿದ್ದರು.