Wednesday, 27th November 2024

Vastu Tips: ಮನೆ, ಕಚೇರಿಯಲ್ಲಿ ಕಾಮಧೇನು ವಿಗ್ರಹ ಇಟ್ಟರೆ ಎಲ್ಲವೂ ಸುಗಮ!

Vastu Tips

ಪ್ರಾಣಿ, ಪಕ್ಷಿ, ದೇವರ ವಿಗ್ರಹಗಳು ಮನಸ್ಸಿಗೆ ನೆಮ್ಮದಿ ಕೊಡುತ್ತವೆ. ಅವುಗಳನ್ನು ನಾವು ನಮ್ಮ ಹತ್ತಿರವೇ ಇಟ್ಟುಕೊಳ್ಳಬೇಕು ಎಂದುಕೊಳ್ಳುತ್ತೇವೆ. ಆದರೆ ಇಂತಹ ವಿಗ್ರಹಗಳನ್ನು ಇಟ್ಟುಕೊಳ್ಳುವಾಗ ವಾಸ್ತು ನಿಯಮಗಳನ್ನು (Vastu Tips) ಪಾಲಿಸುವುದು ಬಹುಮುಖ್ಯ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.

ಕಾಮಧೇನುವಿನ ವಿಗ್ರಹ ಎಂಥವರನ್ನೂ ಮೋಡಿ ಮಾಡಬಲ್ಲದು. ಆದರೆ ಈ ವಿಗ್ರಹವನ್ನು ಮನೆ, ಕಚೇರಿಯಲ್ಲಿ ಇಡಲು ಕೆಲವೊಂದು ನಿಯಮಗಳಿವೆ. ಸರಿಯಾದ ದಿಕ್ಕಿನ ಜೊತೆಗೆ ಕೆಲವು ನಿರ್ದೇಶನಗಳನ್ನು ಪಾಲಿಸುವುದು ಕೂಡ ಮುಖ್ಯ. ಅವು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಕೆಲಸದ ಸ್ಥಳದಲ್ಲಿ ಪ್ರತಿಯೊಬ್ಬರೂ ಬಯಸುವುದು ಪ್ರಗತಿಯನ್ನು, ಇದಕ್ಕಾಗಿ ಸಾಕಷ್ಟು ಪ್ರಯತ್ನವನ್ನೂ ಮಾಡುತ್ತೇವೆ. ವಾಸ್ತು ಶಾಸ್ತ್ರದ ಕೆಲವು ಸಹಾಯವನ್ನೂ ಪಡೆದುಕೊಳ್ಳುತ್ತೇವೆ. ಕೆಲಸದಲ್ಲಿ ಸ್ಥಳದಲ್ಲಿ ಯಶಸ್ಸನ್ನು ಬಯಸುವವರು ಕಾಮಧೇನುವಿನ ವಿಗ್ರಹವನ್ನು ಇರಿಸಿಕೊಳ್ಳಬಹುದು. ಇದರಿಂದ ಸಾಕಷ್ಟು ಪ್ರಯೋಜನಗಳು ಇವೆ.

ಹಿಂದೂ ಪುರಾಣಗಳ ಪ್ರಕಾರ ಕಾಮಧೇನು ಹಸು ಆಸೆಗಳನ್ನು ಪೂರೈಸುವ ಹಸು ಎನ್ನುವ ನಂಬಿಕೆ ಇದೆ. ಇದು ಸಮೃದ್ಧಿ, ಸಂತೋಷ ಮತ್ತು ಯಶಸ್ಸಿನ ಸಂಕೇತವಾಗಿದೆ.

Vastu Tips

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕಾಮಧೇನು ಹಸುವಿನ ಪ್ರತಿಮೆಯನ್ನು ಇಟ್ಟುಕೊಂಡರೆ ಜೀವನದಲ್ಲಿ ಸಮೃದ್ಧಿ ಆಕರ್ಷಿಸುತ್ತದೆ. ಇದನ್ನು ಮನೆಯ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಇರಿಸಬೇಕು. ಅಷ್ಟೇ ಅಲ್ಲ ಈ ಗೋವಿನ ಪ್ರತಿಮೆಯನ್ನು ಕಚೇರಿಯಲ್ಲಿ ಇಟ್ಟರೆ ಅದರಿಂದ ಸಾಕಷ್ಟು ಲಾಭವಿದೆ.

ಕೆಲಸದ ಸ್ಥಳದಲ್ಲಿ ಕಾಮಧೇನು ಹಸುವಿನ ವಿಗ್ರಹವನ್ನು ಇಟ್ಟುಕೊಳ್ಳುವುದು ವೃತ್ತಿಜೀವನದ ಬೆಳವಣಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಜೀವನದಲ್ಲಿ ಅಡೆತಡೆಗಳನ್ನು ನಿವಾರಿಸಲು ಮತ್ತು ಅದೃಷ್ಟವನ್ನು ತರಲು ಸಹಾಯ ಮಾಡುತ್ತದೆ.

ಕಾಮಧೇನು ಹಸುವಿನ ವಿಗ್ರಹವನ್ನು ಕಚೇರಿಯಲ್ಲಿ ಇಡಲು ವಾಸ್ತು ತಜ್ಞ ಡಾ. ಮಧು ಕೋಟಿಯಾ ಅವರು ನೀಡಿರುವ ಮಾಹಿತಿ ಇಲ್ಲಿದೆ.

ವಾಸ್ತು ಶಾಸ್ತ್ರದ ಪ್ರಕಾರ ಕಾಮಧೇನು ಹಸು ಸಮೃದ್ಧಿ, ಫಲವತ್ತತೆ, ಸಂಪತ್ತು ಮತ್ತು ಪೋಷಣೆಯ ಸಂಕೇತ. ಇದರ ವಿಗ್ರಹವನ್ನು ಮನೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಇರಿಸಿದಾಗ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಬಹುದು.

ಮನೆಯಲ್ಲಿ ಇಡುವುದರಿಂದ ಏನು ಪ್ರಯೋಜನ?

ಇದನ್ನು ಮನೆಯಲ್ಲಿ ಇಡುವುದರಿಂದ ಕುಟುಂಬದಲ್ಲಿ ಹಣದ ಹರಿವು ನಿರಂತರವಾಗಿರುತ್ತದೆ. ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. ಅದನ್ನು ಕೆಲಸದ ಸ್ಥಳದಲ್ಲಿ ಇರಿಸುವುದು ಹಣಕಾಸಿನ ಲಾಭದ ಮೂಲಗಳನ್ನು ತೆರೆಯಲು ಸಹಾಯ ಮಾಡುತ್ತದೆ.

ಕೆಲಸದ ಸ್ಥಳದಲ್ಲಿ ಇಡುವುದು ಏನು ಪ್ರಯೋಜನ?

ಕಾಮಧೇನುವಿನ ವಿಗ್ರಹವನ್ನು ಕೆಲಸದ ಸ್ಥಳದಲ್ಲಿ ಇಡುವುದು ವ್ಯಾಪಾರ ಮತ್ತು ವೃತ್ತಿಯಲ್ಲಿ ಪ್ರಗತಿ ಉಂಟಾಗುತ್ತದೆ. ಈ ವಿಗ್ರಹವು ಕೆಲಸದ ಸ್ಥಳದಲ್ಲಿ ಧನಾತ್ಮಕ ಶಕ್ತಿಯನ್ನು ಹರಡುವುದಲ್ಲದೆ ವ್ಯಾಪಾರದ ಅಡೆತಡೆಗಳನ್ನು ದೂರ ಮಾಡುತ್ತದೆ. ಹೊಸ ಅವಕಾಶಗಳಿಗೆ ದಾರಿ ಮಾಡಿಕೊಡುತ್ತದೆ.

Vastu Tips

ಎಲ್ಲಿ ಇಟ್ಟರೆ ಏನು ಲಾಭ ?

ಕಚೇರಿ ಅಥವಾ ಅಂಗಡಿಯಲ್ಲಿ ಕ್ಯಾಶ್ ಕೌಂಟರ್ ಅಥವಾ ಲಾಕರ್ ಬಳಿ ಕಾಮಧೇನುವಿನ ವಿಗ್ರಹವನ್ನು ಇಡುವುದು ಅತ್ಯಂತ ಮಂಗಳಕರ. ಇದು ಹಣದ ಹರಿವನ್ನು ಉಳಿಸಿಕೊಳ್ಳುತ್ತದೆ ಮತ್ತು ವ್ಯಾಪಾರವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಉದ್ಯೋಗದಲ್ಲಿ ಧನಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಶೀಘ್ರದಲ್ಲೇ ಪ್ರಗತಿಯನ್ನು ತರುತ್ತದೆ.

ಕಾಮಧೇನುವಿನ ವಿಗ್ರಹವನ್ನು ಕಚೇರಿಯ ಕಾರ್ಯಸ್ಥಳದಲ್ಲಿ ಅಥವಾ ಸಭೆಯ ಕೊಠಡಿಯಲ್ಲಿ ಇಡುವುದರಿಂದ ಅಲ್ಲಿನ ಪರಿಸರವು ಧನಾತ್ಮಕವಾಗಿರುತ್ತದೆ. ಇದ ಸಿಬ್ಬಂದಿ ನಡುವೆ ಸಾಮರಸ್ಯವನ್ನು ಕಾಪಾಡುತ್ತದೆ.

ಕಚೇರಿ ಅಥವಾ ಅಂಗಡಿಯಲ್ಲಿ ಕಾಮಧೇನುವಿನ ವಿಗ್ರಹವನ್ನು ಅಂಗಡಿಯ ಮುಖ್ಯ ದ್ವಾರದಲ್ಲಿ ಇರಿಸುವುದರಿಂದ ಕೆಲಸದಲ್ಲಿ ಯಶಸ್ಸು, ವ್ಯಾಪಾರದಲ್ಲಿ ಲಾಭವನ್ನು ಪಡೆಯಬಹುದು.

ಕಚೇರಿಯ ಮೇಜಿನ ಮೇಲೆ ಇರಿಸಿದರೆ ಅದು ಏಕಾಗ್ರತೆ ಮತ್ತು ಕೆಲಸದ ಕಡೆಗೆ ಸಮರ್ಪಣೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಸಂಪತ್ತನ್ನು ಆಕರ್ಷಿಸುತ್ತದೆ. ಆರ್ಥಿಕ ಸ್ಥಿರತೆಯನ್ನು ತರಲು ಸಹಾಯ ಮಾಡುತ್ತದೆ. ಹೊಸ ವ್ಯಾಪಾರ ಅವಕಾಶಗಳನ್ನು ತೆರೆಯುತ್ತದೆ. ತಂಡದ ನಡುವೆ ಸಮನ್ವಯವನ್ನು ಸುಧಾರಿಸುತ್ತದೆ.

Vastu Tips

ಯಾವ ದಿಕ್ಕು ಸೂಕ್ತ ?

ವಾಸ್ತು ಶಾಸ್ತ್ರದ ಪ್ರಕಾರ ಕಾಮಧೇನು ವಿಗ್ರಹವನ್ನು ಇಡಲು ಈಶಾನ್ಯ ದಿಕ್ಕು ಉತ್ತಮವಾಗಿದೆ. ಈ ದಿಕ್ಕು ಸಂಪತ್ತು ಮತ್ತು ಸಮೃದ್ಧಿಯ ದೇವರು ಕುಬೇರ ಮತ್ತು ಜ್ಞಾನದ ದೇವರು ಗುರುವಿಗೆ ಸಂಬಂಧಿಸಿದೆ.

ಉತ್ತರ ದಿಕ್ಕಿನಲ್ಲಿ ಕಾಮಧೇನು ವಿಗ್ರಹವನ್ನು ಕೂಡ ಇಡಬಹುದು. ಇದು ವ್ಯವಹಾರದಲ್ಲಿ ಪ್ರಗತಿಗೆ ಕಾರಣವಾಗುತ್ತದೆ. ಆರ್ಥಿಕ ಪ್ರಗತಿ ಮತ್ತು ವೃತ್ತಿ ಬೆಳವಣಿಗೆಗೆ ಈ ದಿಕ್ಕು ಅತ್ಯಂತ ಪ್ರಮುಖವಾಗಿದೆ.

Vastu Tips: ಸ್ಮರಣ ಶಕ್ತಿ, ಏಕಾಗ್ರತೆ ಹೆಚ್ಚಿಸಲು ಮಕ್ಕಳ ಅಧ್ಯಯನ ಕೊಠಡಿ ಹೇಗಿರಬೇಕು?

ಎಲ್ಲಿ ಇಡಬಾರದು?

ಕಾಮಧೇನು ವಿಗ್ರಹವನ್ನು ಕಚೇರಿಯ ವಾಶ್ ರೂಮ್ ಅಥವಾ ಕೊಳಕು ಸ್ಥಳಗಳ ಬಳಿ ಎಂದಿಗೂ ಇಡಬಾರದು. ಇದು ವಿಗ್ರಹದ ಪರಿಣಾಮವನ್ನು ದುರ್ಬಲಗೊಳಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.