Sunday, 22nd December 2024

Vijayapura Accident: ಕಾರು-ಕಬ್ಬು ಕಟಾವು ಮಷಿನ್ ಡಿಕ್ಕಿಯಾಗಿ ಐವರ ದುರ್ಮರಣ; ಮದುವೆಗೆ ಹುಡುಗಿ ನೋಡಿ ಬರುವಾಗ ದುರಂತ

Vijayapura Accident

ವಿಜಯಪುರ: ಕಾರು ಮತ್ತು ಕಬ್ಬು ಕಟಾವು ಮಷಿನ್ ನಡುವೆ ಭೀಕರ ಅಪಘಾತ ಸಂಭವಿಸಿ, ಐವರು ಸ್ಥಳದಲ್ಲೇ ದುರ್ಮರಣ ಹೊಂದಿರುವುದು ವಿಜಯಪುರ (Vijayapura Accident) ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಿಳೇಭಾವಿ ಕ್ರಾಸ್ ಬಳಿ ನಡೆದಿದೆ. ಮೃತರನ್ನು ವಿಜಯಪುರ ತಾಲೂಕಿನ ಅಲಿಯಾಬಾದ್ ನಿವಾಸಿಗಳೆಂದು ಗುರುತಿಸಲಾಗಿದ್ದು, ಇಬ್ಬರು ಮಹಿಳೆಯರು ಸೇರಿ ಐವರು ಮೃತಪಟ್ಟಿದ್ದಾರೆ.

ಹುಣಸಗಿಯಿಂದ ತಾಳಿಕೋಟೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮೃತರನ್ನು ನಿಂಗಪ್ಪ ಪಾಟೀಲ್ (55) ಶಾಂತಪ್ಪ ಪಾಟೀಲ್(45), ಭೀಮಶಿ ಸಂಕನಾಳ(65) ಶಶಿಕಲಾ(50) ದಿಲೀಪ್ ಪಾಟೀಲ್ (45) ಎಂದು ಗುರುತಿಸಲಾಗಿದೆ. ಕಾರು ಮತ್ತು ಕಬ್ಬು ಕಟಾವು ಮಷಿನ್ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮದುವೆಗೆ ಹುಡುಗಿ ನೋಡಲು ಹೋಗಿ ವಾಪಸ್‌ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ತಾಳಿಕೋಟೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Actor Darshan : ಚಾಲೆಂಜಿಗ್‌ ಸ್ಟಾರ್‌ ದರ್ಶನ್‌ಗೆ ಇಂದು ಕೂಡ ಹತಾಶೆ; ಜಾಮೀನು ಅರ್ಜಿ ವಿಚಾರಣೆ ಡಿ.9ಕ್ಕೆ ಮುಂದೂಡಿಕೆ

ಆಸ್ಪತ್ರೆಯಲ್ಲಿ ಲಿಫ್ಟ್‌ ಕುಸಿದು ಬಾಣಂತಿ ಸಾವು; 1 ದಿನದ ಹಸಿಗೂಸು ಈಗ ತಾಯಿಯಿಲ್ಲದ ತಬ್ಬಲಿ!

ಲಖನೌ: ಆಸ್ಪತ್ರೆಯೊಂದರಲ್ಲಿ ಲಿಫ್ಟ್ (Lift) ಕುಸಿದು ಬಿದ್ದ ಪರಿಣಾಮ ಆಗಷ್ಟೇ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದ ಹಸಿ ಬಾಣಂತಿಯೊಬ್ಬರು ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಉತ್ತರ ಪ್ರದೇಶದ (Uttar Pradesh) ಮೀರತ್(Meerut)ಜಿಲ್ಲೆಯ ಶಾಸ್ತ್ರಿನಗರದಲ್ಲಿ ಈ ಘಟನೆ ಸಂಭವಿಸಿದೆ (Lift Crashes).

ಮೀರತ್‌ನ ಶಾಸ್ತ್ರಿ ನಗರದಲ್ಲಿರುವ ಕ್ಯಾಪಿಟಲ್(Capital) ಆಸ್ಪತ್ರೆಯಲ್ಲಿ ಈ ದುರಂತ ನಡೆದಿದೆ. 30 ವರ್ಷದ ಕರೀಷ್ಮಾ ಎಂಬ ಮಹಿಳೆ ಆಸ್ಪತ್ರೆಯ ಜನರಲ್ ವಾರ್ಡಿನಲ್ಲಿ ಆಗಷ್ಟೇ ಮಗುವಿಗೆ ಜನ್ಮ ನೀಡಿದ್ದರು. ನಂತರ ಅವರನ್ನು ಸ್ಟ್ರೇಚರ್‌ನಲ್ಲಿ ಮಲಗಿಸಿ ಲಿಫ್ಟ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಲಿಫ್ಟ್‌ನ ಬೆಲ್ಟ್ ಕಟ್ಟಾಗಿ ಲಿಫ್ಟ್ ಕುಸಿದಿದ್ದು, ಕರೀಷ್ಮಾ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರಿಗೆ ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೊದಲಿಗೆ ಲಿಫ್ಟ್‌ ಸ್ಟಕ್ ಆಗಿದ್ದು ಲಿಫ್ಟ್ ಒಳಗಿದ್ದವರು ಜೋರಾಗಿ ಕೂಗಿಕೊಂಡಿದ್ದಾರೆ. ಕೆಲವರು ಲಿಫ್ಟ್‌ನ ಬಾಗಿಲನ್ನು ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಟೆಕ್ನಿಷಿಯನ್ ತಂಡ ಅವರನ್ನು ತಲುಪುವ ಮೊದಲೇ ಲಿಫ್ಟ್ ಕುಸಿದು ಬಿದ್ದು ಭಾರೀ ದುರಂತ ಸಂಭವಿಸಿದೆ. ಕೂಡಲೇ ಬಾಣಂತಿ ಮಹಿಳೆಯನ್ನು ಬೇರೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆದರೆ ಗಂಭೀರ ಗಾಯಗಳಿಂದ ಘಾಸಿಗೊಂಡಿದ್ದ ಮಹಿಳೆ ಬದುಕುಳಿಯಲಿಲ್ಲ. ಘಟನೆಯಿಂದ ಸಿಟ್ಟಿಗೆದ್ದ ಮಹಿಳೆಯ ಕುಟುಂಬದವರು ಮತ್ತು ಸಂಬಂಧಿಕರು ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದಾರೆ. ಇದರಿಂದ ಹೆದರಿದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ಆಸ್ಪತ್ರೆಯ ಎದುರಿಗೇ ಪೊಲೀಸ್ ಪೋಸ್ಟ್‌ ಇದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಕರೀಷ್ಮಾ ಅವರು ಮುಂಜಾನೆಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ದು, ಸಿಜರಿಯನ್‌ ಡೆಲಿವರಿ ಮೂಲಕ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗುವನ್ನು ಬೇರೆ ಆಸ್ಪತ್ರೆಯ ನರ್ಸರಿಯಲ್ಲಿ ಆರೈಕೆಗೆ ಇರಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಲೋಹಿಯಾ ನಗರ ಪೊಲೀಸ್ ಠಾಣೆಯಲ್ಲಿ ಕ್ಯಾಪಿಟಲ್ ಆಸ್ಪತ್ರೆಯ ವೈದ್ಯರು, ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆಯ ನಂತರ ಮೀರತ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಅಲ್ಲಿದ್ದ ಇತರ 15 ರೋಗಿಗಳನ್ನು ಸಮೀಪದ ಮತ್ತೊಂದು ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ. ಸದ್ಯ ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ. ಅಲ್ಲದೇ ಘಟನೆಯ ಬಗ್ಗೆ ತನಿಖೆ ಮಾಡಲು ಸಿಎಂಒ ತಂಡ ರಚನೆಯಾಗಿದ್ದು ತನಿಖೆ ನಡೆಯುತ್ತಿದೆ.

ಲಿಫ್ಟ್‌ ಕುಸಿದು ಪೇಂಟರ್‌ ಸಾವು

ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಬಳ್ಳಾರಿ ನಗರದ ಚಂದ್ರ ಕಾಲೋನಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅಳವಡಿಸಲಾಗಿದ್ದ ತಾತ್ಕಾಲಿಕ ಲಿಫ್ಟ್‌ ಕುಸಿದು ಪೇಂಟಿಂಗ್‌ ಕೆಲಸಗಾರ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಗೋನಾಳು ರಸ್ತೆಯ ಆಶ್ರೇಯ ಕಾಲೋನಿಯ ಜಿ. ವೀರಾಂಜಿನೇಯಲು (46) ಮೃತ ವ್ಯಕ್ತಿ. ಈ ಕುರಿತು ವೀರಾಂಜಿನೇಯಲು ಅವರ ಪತ್ನಿ ಲಕ್ಷ್ಮೀ ಎಂಬುವವರು ಕೌಲ್‌ ಬಜಾರ್‌ ಠಾಣೆಗೆ ದೂರು ನೀಡಿದ್ದರು. ಕಟ್ಟಡ ಮಾಲೀಕನ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದರು. ಈ ಆಧಾರದ ಮೇಲೆ ಪೊಲೀಸರು ಕಟ್ಟಡ ಮಾಲೀಕ ಬೀಮಪ್ಪ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಕಟ್ಟಡ ಮಾಲೀಕ ಭೀಮಪ್ಪ ಚಂದ್ರ ಕಾಲೋನಿಯ 1ನೇ ಕ್ರಾಸ್‌ನಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದರು. ಇದರ ಪೇಂಟಿಂಗ್‌ ಗುತ್ತಿಗೆಯನ್ನು ವೀರಾಂಜಿನೇಯಲು ಅವರಿಗೆ ವಹಿಸಿದ್ದರು. 5 ತಿಂಗಳು ಕೆಲಸ ನಡೆದಿತ್ತು. ನಿರ್ಮಾಣ ಉದ್ದೇಶಕ್ಕಾಗಿ ತಾತ್ಕಾಲಿಕ ಲಿಫ್ಟ್‌ ಅಳವಡಿಸಲಾಗಿತ್ತು. ಇದರಲ್ಲಿ ಮೇಲಿನ ಮಹಡಿಗೆ ಹೋಗುವ ವೇಳೆ ವೀರಾಂಜಿನೇಯಲು ಅವರು ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು ಎನ್ನಲಾಗಿತ್ತು. ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್‌ನ ಟ್ರಾಮಾ ಕೇರ್‌ ಸೆಂಟರ್‌ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.

ಈ ಸುದ್ದಿಯನ್ನೂ ಓದಿ: Gujarat: ಸೂರತ್‌ನಲ್ಲಿ ವಿಷಾನಿಲ ಸೇವಿಸಿ ಮೂವರು ಬಾಲಕಿಯರ ಸಾವು!