ಚೆನ್ನೈ: ಇತ್ತೀಚೆಗೆ ಬಿಡುಗಡೆಯಾದ ತಮಿಳು ಸಿನಿಮಾ ಒಂದರಲ್ಲಿ ನಟಿಸಿದ್ದ ಕನ್ನಡದ ಹಿರಿಯ ಕಿರುತೆರೆ ನಟರೊಬ್ಬರಿಗೆ (Kannada Actor) ತಮಿಳುನಾಡಿನ ಮಾಲ್‌ನಲ್ಲಿ ಕಪಾಳಮೋಕ್ಷ (Assault) ಮಾಡಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ (Viral video) ಆಗಿದೆ. ಇದರ ಕಾರಣ ತಿಳಿದರೆ ನಿಮಗೆ ಸೋಜಿಗ ಆಗದೇ ಇರದು.
ಇತ್ತೀಚೆಗೆ ಬಿಡುಗಡೆಯಾಗಿರುವ ಲವ್ ರೆಡ್ಡಿ (Love Reddy) ಸಿನಿಮಾದಲ್ಲಿ ಕನ್ನಡ ಖ್ಯಾತ ಕಿರುತೆರೆ ನಟ ಎನ್.ಟಿ.ರಾಮಸ್ವಾಮಿ ಕೂಡ ನಟಿಸಿದ್ದರು. ಇವರು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಹಲವು ಮಾಲ್ ಹಾಗೂ ಥಿಯೇಟರ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಚಿತ್ರತಂಡದವರು ಸಿನಿಮಾದ ಬಗ್ಗೆ ಪ್ರೇಕ್ಷಕರ ಅಭಿಪ್ರಾಯ ತಿಳಿಯಲು ಮಾಲ್‌ಗೆ ತೆರಳಿದ್ದರು. ಈ ವೇಳೆ ವೇದಿಕೆ ಮೇಲೆ ಹತ್ತಿ ಬಂದ ಮಹಿಳೆ ಕನ್ನಡದ ನಟನ ಮೇಲೆ ಹಲ್ಲೆ ಮಾಡಿದ್ದಾರೆ.
ಅದಕ್ಕೆ ಕಾರಣ ಇಷ್ಟೆ: ಕನ್ನಡದ ಕಿರುತೆರೆಯಲ್ಲಿ ಮಿಂಚಿರುವ ನಟ ಎನ್.ಟಿ.ರಾಮಸ್ವಾಮಿ ಅವರು ಈ ಸಿನಿಮಾದಲ್ಲಿ ಹೀರೋಯಿನ್ ತಂದೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ಎನ್.ಟಿ.ರಾಮಸ್ವಾಮಿ ಅವರು ಮಗಳ ಮೇಲೆ ಹಲ್ಲೆ ನಡೆಸಿ ಯುವ ಪ್ರಣಯಿಗಳನ್ನು ದೂರ ಮಾಡುವ ದೃಶ್ಯವಿದೆ. ಈ ದೃಶ್ಯ ಮಹಿಳೆಯ ಕೋಪಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಶೋ ಮುಗಿದ ನಂತರ ಇಡೀ ಚಿತ್ರತಂಡ ಪರದೆಯ ಮುಂಭಾಗಕ್ಕೆ ಬಂದು ಈ ಸಿನಿಮಾ ಹೇಗಿದೆ ಎಂದು ಪ್ರೇಕ್ಷಕರನ್ನು ಕೇಳುತ್ತಿದ್ದರು. ಎನ್.ಟಿ.ರಾಮಸ್ವಾಮಿ ಕೂಡ ವೇದಿಕೆಯಲ್ಲೇ ಇದ್ದರು. ಈ ವೇಳೆ ಏಕಾಏಕಿ ಓಡಿ ಬಂದ ಮಹಿಳೆ ರಾಮಸ್ವಾಮಿ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆಯಿಂದ ಅಲ್ಲಿದ್ದವರೆಲ್ಲ ಒಂದು ಕ್ಷಣ ಶಾಕ್ ಆಗಿದ್ದಾರೆ. ಆ ಅಭಿಮಾನಿಯನ್ನು ಬಳಿಕ ಅಲ್ಲಿದ್ದವರು ತಡೆದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
#LoveReddy చిత్ర నటుడిపై ప్రేక్షకురాలి దాడి..
— Ramesh Pammy (@rameshpammy) October 24, 2024
హైదరాబాద్ నిజాంపేట జీపీఆర్ మాల్ లో ఘటన
సినిమా క్లైమాక్స్ చూసి ఎమోషనల్ అయిన ఒక ప్రేక్షకురాలు థియేటర్స్ విజిట్ కు వెళ్లిన చిత్రబృందంలోని తండ్రి పాత్రను పోషించిన ఎన్ టీ రామస్వామి అనే నటుడు నిజంగానే ఆ ప్రేమజంటను విడిదీశాడని కోపంతో తిడుతూ… pic.twitter.com/FY9uuXTUlC
ಸ್ಮರಣ್ ರೆಡ್ಡಿ ಎಂಬುವವರ ನಿರ್ದೇಶಿಸಿದ ‘ಲವ್ ರೆಡ್ಡಿ’ ಸಿನಿಮಾದಲ್ಲಿ ಅಂಜನ್ ರಾಮಚಂದ್ರ ಹಾಗೂ ಶ್ರಾವಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನೈಜ ಘಟನೆಯನ್ನು ಆಧರಿಸಿದ ಈ ಸಿನಿಮಾ ಟೈಟಲ್‌ನಿಂದಲೇ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಕನ್ನಡದ ನಟ ಎನ್.ಟಿ ರಾಮಸ್ವಾಮಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಘಟನೆ ಅಸಲಿಯೇ ಆಗಿದ್ದರೆ, ನಿಜಕ್ಕೂ ಇದು ರಾಮಸ್ವಾಮಿ ಅವರ ನಟನೆಗೆ ಸಿಕ್ಕ ನಿಜವಾದ ಪ್ರಶಸ್ತಿ ಎಂದೇ ವ್ಯಾಖ್ಯಾನಿಸಬಹುದು. ಆದರೆ, ಇದು ಫಿಲಂ ಪ್ರಚಾರಕ್ಕಾಗಿ ಮಾಡಿದ ಗಿಮಿಕ್ಕೇ ಆಗಿದ್ದರೆ, ಇದಕ್ಕಾಗಿ ಕನ್ನಡದ ನಟನನ್ನೇ ಬಳಸಿಕೊಳ್ಳಬೇಕಿತ್ತಾ ಎಂಬ ಪ್ರಶ್ನೆ ಎದ್ದೇಳುತ್ತದೆ.
ಇದನ್ನೂ ಓದಿ: Abhishek-Aishwarya: ಐಶ್ವರ್ಯ ಜತೆ ಡಿವೋರ್ಸ್ ವದಂತಿ ಬೆನ್ನಲ್ಲೇ ಮೌನ ಮುರಿದ ಅಭಿಷೇಕ್ ಬಚ್ಚನ್; ವಿಡಿಯೋ ಫುಲ್ ವೈರಲ್