Monday, 16th September 2024

ವರ್ಷದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಪೂರ್ಣ

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ಭಾರತಿ ವಿಷ್ಣುವರ್ಧನ್ ವಿಶ್ವಾಸ

ಬೆಂಗಳೂರು: ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ಸರಾಗವಾಗಿ ನಡೆಯುತ್ತಿದ್ದು, ಮುಂದಿನ ಒಂದು ವರ್ಷದ ಅವಧಿಯಲ್ಲಿ ಪೂರ್ಣವಾಗಲಿದೆ. ಇದು ಕೇವಲ
ಸ್ಮಾರಕವಾಗಿರದೆ ವಿವಿಧ ಕಲಾ ಪ್ರಕಾರಗಳ ತಾಣವಾಗಲಿದೆ ಎಂದು ನಟಿ ಭಾರತಿ ವಿಷ್ಣುವರ್ಧನ್ ತಿಳಿಸಿದರು.

ವಿಶ್ವವಾಣಿ ಕ್ಲಬ್‌ಹೌಸ್‌ನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರ ಸ್ಮಾರಕಕ್ಕೆ ಮೈಸೂರು ಬಳಿ ಜಾಗ ನೀಡಿದೆ. ಹೀಗಾಗಿ, ಸ್ಮಾರಕ ನಿರ್ಮಾಣ ಕಾರ್ಯ ಸರಾಗವಾಗಿ ನಡೆಯುತ್ತಿದೆ. ಅಲ್ಲಿ ಎಲ್ಲ ರೀತಿಯ ಕೆಲಸಗಳು ಅಂತಿಮ ಹಂತದಲ್ಲಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಇದು ಕೇವಲ ಸ್ಮಾರಕ ಮಾತ್ರವಾಗಿರದೆ ವಿಷ್ಣು ಅಭಿಮಾನಿಗಳ ಪಾಲಿಗೆ ಒಂದು ವಿಶಿಷ್ಟ ತಾಣವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿ ದರು.

ಸ್ಮಾರಕದ ಜತೆಗೆ ಸಭಾಭವನ, ಕಲಾಸೌಧ ಸೇರಿದಂತೆ ಇಲ್ಲಿ ವಿವಿಧ ಕಲೆಗಳಿಗೆ ಅವಕಾಶ ಒದಗಿಸುವ ಸೌಕರ್ಯ ಗಳನ್ನು ಒದಗಿಸಲಾಗುತ್ತಿದೆ. ನಿರ್ಮಾಣ ಪೂರ್ಣವಾದ ನಂತರವೇ ಇಲ್ಲಿನ ವೈಶಿಷ್ಟವೇನು ಎಂಬುದು ಜನರಿಗೆ ತಿಳಿಯಲಿದೆ. ಇಂತಹ ದ್ದೊಂದು ಪರಿಪೂರ್ಣ ಸ್ಥಳದ ನಿರ್ಮಾಣ ಬೇಕು ಎಂಬ ಕಾರಣಕ್ಕೆ ಅನಿರುದ್ಧ್ ಬಹಳ ಶ್ರಮ ವಹಿಸುತ್ತಿದ್ದಾರೆ. ಅಭಿಮಾನಿಗಳ ಮೂಲಕ ಅನಿರುದ್ಧ್‌ಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದರು.

ನನಗೆ ಹೆಚ್ಚು ಮಾತನಾಡುವುದರಲ್ಲಿ ಆಸಕ್ತಿಯಿಲ್ಲ. ನಾವು ಮಾಡುವ ಕೆಲಸಗಳು ಮಾತನಾಡಬೇಕು ಎಂಬುದು ನಾನು ಬೆಳೆಸಿಕೊಂಡು ಬಂದಿರುವ ರೂಢಿ. ನನಗೆ ನಾನು ಮಾಡಿದ ಸಿನಿಮಾಗಳ ಬಗ್ಗೆ ಏನೂ ಗೊತ್ತಿಲ್ಲ. ನಿರ್ದೇ ಶಕರು ಹೇಳಿಕೊಟ್ಟರು, ನಾನು ಅಭಿನಯ ಮಾಡುತ್ತಿದ್ದೆ. ನಾನು ಸಾಧಿಸಿದ್ದು ಏನೂ ಇಲ್ಲ. ಅದೆಲ್ಲವೂ ದೇವರ ಆಟವೆಂಬುದೇ ನನ್ನ ಭಾವನೆ. ನನ್ನದು ಏನೂ ಇಲ್ಲ, ದೇವರೇ ನನ್ನ ಕಡೆಯಿಂದ ಕೆಲವೊಂದು ಕೆಲಸ ಮಾಡಿಸಿದ್ದಾನೆ. ನಾನು ಅದರಂತೆ ನಡೆಯುತ್ತಿದ್ದೇನೆ ಅಷ್ಟೇ ಎಂದು ಭಾರತಿ ವಿನೀತರಾಗಿ ನುಡಿದರು.

ಪ್ರಮುಖ ನಾಯಕರ ಜತೆ ನಟನೆ: ಕನ್ನಡದಲ್ಲಿ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ತಮಿಳಿನಲ್ಲಿ ಶಿವಾಜಿ ಗಣೇಶನ್, ಎಂಜಿಆರ್, ತೆಲುಗಿನಲ್ಲಿ ಎನ್‌ಟಿಆರ್,
ಕೃಷ್ಣ ಮೋಹನ್ ಸೇರಿದಂತೆ ಹಿಂದಿ ಸಿನಿಮಾದ ಪ್ರಮುಖ ನಟರ ಜತೆಗೆ ನಾನು ಅಭಿನಯಿಸಿದ್ದೇನೆ. ನನ್ನ ಜತೆಗೆ ನಟಿಸಿದ ನಟರೆಲ್ಲರೂ ನನ್ನ ಇಷ್ಟದ ನಟರೇ. ಅವರೊಂದಿಗೆ ನಟನೆ ಮಾಡುವ ಭಾಗ್ಯ ಸಿಕ್ಕಿದ್ದು, ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಿಸುತ್ತೇನೆ. ನಮ್ಮವರೊಂದಿಗೆ ಬಂಗಾರದ ಜಿಂಕೆ ಸಿನಿಮಾ
ದಲ್ಲಿ ನಟಿಸಿದ್ದೆ. ಅದು ನನಗೆ ಮರೆಯಲಾರದ ಅನುಭವ ಎಂದರು.

ವಿಷ್ಣು ಜತೆಗಿನ ಪ್ರೇಮ ವಿವಾಹ: ಸೊಸೆ ತಂದ ಸೌಭಾಗ್ಯ ಚಿತ್ರದಲ್ಲಿ ನಾವಿಬ್ಬರೂ ಜತೆಯಾಗಿ ಕೆಲಸ ಮಾಡಿದ್ದೆವು. ನಂತರ ಅವರು ನನ್ನನ್ನು ಮದುವೆಯಾಗುವು ದಾಗಿ ಕೇಳಿದರು. ನಾನು ನಮ್ಮ ಅಪ್ಪನನ್ನು ಕೇಳುವಂತೆ ಹೇಳಿದೆ. ಅವರು ಬಹಳ ಬುದ್ಧಿವಂತರು, ನಮ್ಮ ಅಪ್ಪ-ಅಮ್ಮನನ್ನು ಬಹಳ ಪ್ರೀತಿಯಿಂದ ಮಾತನಾಡಿಸಿ ಅವರ ಕಡೆಗೆ ಮಾಡಿಕೊಂಡಿದ್ದರು. ಅಪ್ಪ-ಅಮ್ಮ ಅವರ ಮನೆಗೆ ಹೋಗಿ ಮಾತುಕತೆ ನಡೆಸಿದರು. ಆಗ ಅವರ ತಂದೆಯವರನ್ನು ಅಣ್ಣ ಎಂದು ಕರೆಯುತ್ತಿದ್ದರು.

ಅವರು, ನನ್ನ ಮಗ ಇದೀಗ ತಾನೇ ಸಿನಿಮಾ ರಂಗಕ್ಕೆ ಬಂದಿದ್ದಾನೆ. ಅವನು ಇಲ್ಲಿ ಒಂದಷ್ಟು ಸಾಧನೆ ಮಾಡಲಿ, ಆನಂತರ ಮದುವೆ ಮಾಡೋಣ ಎಂದಿದ್ದರು. ನಂತರವೇ ಮದುವೆ ಮಾಡಿಕೊಂಡೆವು ಎಂದು ಭಾರತಿ ತಿಳಿಸಿದರು

ನನಗೆ ಹೆಚ್ಚು ಮಾತನಾಡುವುದರಲ್ಲಿ ಆಸಕ್ತಿಯಿಲ್ಲ. ನಾವು ಮಾಡುವ ಕೆಲಸಗಳು ಮಾತನಾಡಬೇಕು ಎಂಬುದು ನಾನು ಬೆಳೆಸಿಕೊಂಡು ಬಂದಿರುವ ರೂಢಿ.
ನನಗೆ ನಾನು ಮಾಡಿದ ಸಿನಿಮಾಗಳ ಬಗ್ಗೆ ಏನೂ ಗೊತ್ತಿಲ್ಲ. ನಿರ್ದೇಶಕರು ಹೇಳಿಕೊಟ್ಟರು, ನಾನು ಅಭಿನಯ ಮಾಡುತ್ತಿದ್ದೆ. ನಮ್ಮವರೊಂದಿಗೆ ಬಂಗಾರದ ಜಿಂಕೆ ಸಿನಿಮಾದಲ್ಲಿ ನಟಿಸಿದ್ದೆ. ಅದು ನನಗೆ ಮರೆಯಲಾರದ ಅನುಭವ.

Leave a Reply

Your email address will not be published. Required fields are marked *