Friday, 20th September 2024

ಶಾಸಕ ಯಶವಂತರಾಯಗೌಡ ಪಾಟೀಲ ಮತಯಾಚನೆ

ಇಂಡಿ: ಮೇ ೧೦ ರಂದು ನಡೆಯಲ್ಲಿರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಇಂಡಿ ವಿಧಾನ ಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೇಗಿನಾಳ ಗ್ರಾಮದಲ್ಲಿ ಮನೆ ಮನೆ ತೆರಳಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತಯಾಚನೆ ಮಾಡಿದರು.

ಈ ಸಂಧರ್ಬದಲ್ಲಿ ಮಾತನಾಡಿದ ಅವರು ನನ್ನ ರಾಜಕೀಯ ಪ್ರವೇಶ ಗ್ರಾಮೀಣ ಭಾಗದಿಂದಲೆ ಹೃದಯವಂತರ ಕೃಪಾರ್ಶೀವಾದಿಂದ ಮೇಲ್ಮಟ್ಟಕ್ಕೆ ಬಂದಿರುವೆ. ೨೦೨೩ರ ವಿಧಾನಸಭೆ ಚುನಾವಣೆ ಅತ್ಯೆಂತ ಮಹತ್ವದಾಗಿದ್ದು ಈ ಹಿಂದೆ ನನ್ನ ಕುಟುಂಬಕ್ಕೆ ೩೫ರಿಂದ ೪೦ ವರ್ಷಗಳ ಸುಧೀರ್ಘವಾಗಿ ರಾಜಕೀಯವಾಗಿ ಬೆಳೆಸಿದ್ದೀರಿ ನಿಮ್ಮ ಖುಣ ಜೀವನದ ಕೊನೆಯ ಉಸಿರುವ ಇರುವವರೆಗೂ ಮರೆಯುವುದಿಲ್ಲ. ನಾನು ನಿಮ್ಮ ಆರ್ಶೀವಾದಿಂದ ಈ ಭಾಗದ ಸರ್ವಾಂಗೀಣ ಅಭಿವೃದ್ದಿಗೆ ಬದ್ದತೆಯಿಂದ ಕೆಲಸ ಮಾಡಿರುವೆ.

ವಿಧಾನಸಭೆ ಅಧಿವೇಶನದಲ್ಲಿ ಈ ಭಾಗದ ಜ್ವಲಂತ ಸಮಸ್ಯಗಳ ಬಗ್ಗೆ ಪ್ರಶ್ನಿಸಿ ಸಾಗರೋಪಾದಿಯಲ್ಲಿ ಅನುಧಾನ ತಂದಿರುವೆ. ನಾನು ದುಡಿದಿರುವೆ ದುಡಿದವರಿಗೆ ಕೂಲಿ ಕೊಡಿ ಎಂದು ಕೈಮುಗಿದು ಕೇಳುವ ನೈತಿಕತೆ ನನಗಿದೆ. ರಾಜಕೀಯ ಶಾಶ್ವತ ಅಲ್ಲ ಇರುವ ದಿನಗಳಲ್ಲಿ ನಾವು ಮಾಡಿರುವ ಕೆಲಸಗಳು ಜೀವಂತ ಇರುತ್ತವೆ. ನನ್ನ ಅವಧಿ ಯಲ್ಲಿ ಎಲ್ಲ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಿರುವ ಸಮಾಧಾನ ನನಗಿದೆ. ಇಲ್ಲಿಯವರೆಗೆ ಅಭಿವೃದ್ದಿ ಕನಸು ಇತ್ತು ಈಗ ಜಿಲ್ಲೆಯಾಗಿಸುವ ಕನಸು ಹೊತ್ತುಕೊಂಡಿರುವೆ ಮುಂಬರುವ ದಿನಗಳಲ್ಲಿ ದುಡಿಯುವ ಯುವಕರಿಗೆ ಉದ್ಯೋಗ ಹಾಗೂ ಸಮಗ್ರ ನೀರಾವರಿ ಮಾಡುವ ಸಂಕಲ್ಪ ಇರುವದರಿಂದ ನನಗೆ ಇನ್ನೋಮ್ಮೆ ಆರ್ಶೀವಾದ ಮಾಡಬೇಕೆಂದು ಮನವಿ ಮಾಡಿದರು.

ಜಿ.ಪಂ ಮಾಜಿ ಸದಸ್ಯರಾದ ಮಹಾದೇವಪ್ಪ ಗಡ್ಡದ, ಮಾಜಿ ತಾ.ಪಂ ಅಧ್ಯಕ್ಷ ಶೇಖರ ನಾಯಕ, ಕಾಂಗ್ರೆಸ್ ಹಿರಿಯ ಧುರೀಣ ಎಂ.ಆರ್ ಪಾಟೀಲ, ಗ್ರಾಮ ಪಂಚಾಯತ ಅಧ್ಯಕ್ಷ ಸಂಜೀವಗೌಡ ಪಾಟೀಲ, ಗುರುಣಗೌಡ ಪಾಟೀಲ, ಸುರೇಶ ಹರಿಜನ, ಗುರುಬಾಳ ನಿಲಂಗೆ, ನೀಲಕಂಠ ರೂಗಿ, ನಬೀಲಾಲ್ ಮುಲ್ಲಾ ಸೇರಿದಂತೆ ಅನೇಕ ಮುಖಂಡರು ಇದ್ದರು.