ಆಗ್ನೇಯ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಚಿದಾನಂದಗೌಡ ಮುನ್ನಡೆ ಸಾಧಿಸಿ ದ್ದಾರೆ.
ಚಿದಾನಂದಗೌಡ 24 ಸಾವಿರ ಮತಗಳಿಂದ ಮುಂದಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ಡಿಟಿ ಶ್ರೀನಿವಾಸ್ ಎರಡನೇ ಸ್ಥಾನದಲ್ಲಿ ದ್ದಾರೆ, ಜೆಡಿಎಸ್ ನ ಚೌಡರೆಡ್ಡಿ 16 ಸಾವಿರ ಮತ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು 8 ಸಾವಿರ ಮತಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಮತ ಎಣಿಕೆ ರಾತ್ರಿಯಿಡೀ ನಡೆದ ನಂತರ, ಆರಂಭದಲ್ಲಿ ಎರಡನೇ ಸುತ್ತಿನಲ್ಲಿ ಸುಮಾರು 600 ಮತಗಳಿಂದ ಶ್ರೀನಿವಾಸ್ ಮುನ್ನಡೆ ಸಾಧಿಸಿದ್ದರು. ಚಿದಾನಂದಗೌಡ ಎರಡನೇ ಸ್ಥಾನದಲ್ಲಿದ್ದರು.
ಮೊದಲ ಪ್ರಾಶಸ್ತ್ಯದ ಮತದಾನ ಮುಗಿದಿದ್ದು, ಸದ್ಯ ಎರಡನೇ ಪ್ರಾಶಸ್ತ್ಯದ ಮತಗಳ ಎಣಿಕೆ ನಡೆಯುತ್ತಿದೆ. 81 ಸಾವಿರ ಮತಗಳಲ್ಲಿ 7 ಸಾವಿರಕ್ಕಿಂತಲೂ ಅಧಿಕ ಮತಗಳು ಇಂಕ್ ನ ಕಾರಣದಿಂದ ಅಪಮೌಲ್ಯಗೊಂಡಿವೆ, ಅಭ್ಯರ್ಥಿಯ ಹೆಸರಿನ ಪಕ್ಕದಲ್ಲಿ ಟಿಕ್ ಗುರುತು ಹಾಕಲು ಇದನ್ನು ಬಳಸಲಾಗುತ್ತದೆ, ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಮೇಲೆ ಇಂಕ್ ಬಿದ್ದಿದೆ.