Thursday, 12th December 2024

ಸಮುದಾಯಕ್ಕೆ ಸೌಕರ್ಯ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ: ವಕ್ಪ್ ಬೋರ್ಡ ಅಧ್ಯಕ್ಷ ಕೌಸರ್ ನಿಯಾಜ ಅತ್ತಾರ

ಕೊಲ್ಹಾರ: ಕಲ್ಪಿಸಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಸಮುದಾಯಕ್ಕೆ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದು ನೂತನ ವಕ್ಪ್ ಬೋರ್ಡ ಜಿಲ್ಲಾಧ್ಯಕ್ಷ ಡಾ.ಕೌಸರ್ ನಿಯಾಜ ಅತ್ತಾರ ಹೇಳಿದರು.

ಪಟ್ಟಣದಲ್ಲಿ ಕಾಖಂಡಕಿ ಪರಿವಾರದಿಂದ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು ಪಕ್ಷದ ವರಿಷ್ಠರ ವಿಶ್ವಾಸ, ಸಮುದಾಯ ಹಿರಿಯರ ಆಶೀರ್ವಾದಿಂದ ಜಿಲ್ಲಾ ವಕ್ಪ್ ಬೋರ್ಡ ಅಧ್ಯಕ್ಷ ಸ್ಥಾನದಂತಹ ಮಹತ್ವದ ಜವಾಬ್ದಾರಿ ದೊರಕಿದೆ, ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳನ್ನ ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೆನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹಾಜಿ ಹಸನಡೋಂಗ್ರಿ ಗಿರಗಾಂವಿ, ಉಸ್ಮಾನಪಟೇಲ್ ಖಾನ್, ಆರ್.ಬಿ ಪಕಾಲಿ, ಪಿ.ಕೆ ಗಿರಗಾಂವಿ, ಎಂ.ಎಲ್ ಹೊನ್ಯಾಳ, ಇಸ್ಮಾಯಿ ಲಸಾಬ ತಹಶಿಲ್ದಾರ, ದಸ್ತಗೀರ ಕಾಖಂಡಕಿ, ಸಲೀಂ ಅತ್ತಾರ, ನೂತನ ಜಿಲ್ಲಾ ವಕ್ಪ್ ಬೋರ್ಡ ಸದಸ್ಯ ಅಲ್ಲಾಭಕ್ಷ ಕಾಖಂಡಕಿ, ತೌಸಿಪ್ ಗಿರಗಾವಿ, ದಸ್ತಗೀರ ಕಲಾದಗಿ, ರಾಜು ಚೌಧರಿ, ಅಯ್ಯೂಬ ಪಠಾಣ, ಬಾಬು ಮುಲ್ಲಾ, ಮೊಹಸೀನ ಕಾಖಂಡಕಿ, ಮೈನು ಜಾಲಗಾರ, ಸಹಿತ ಅನೇಕರು ಉಪಸ್ಥಿತ ರಿದ್ದರು.