Thursday, 12th December 2024

ಡಿ.5 ರಂದು ಅಖಂಡ ಕರ್ನಾಟಕ ಬಂದ್: ವಾಟಾಳ್

ಬೆಂಗಳೂರು: ಬಂದ್ ವಿಫಲಗೊಳಿಸಲು ಸರ್ಕಾರ ಹರಸಾಹಸ ಮಾಡುತ್ತಿದೆ. ಆದರೆ, ಡಿಸೆಂಬರ್‌ 5 ರಂದು ಕರ್ನಾಟಕ ಬಂದ್ ಖಚಿತವೆಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಬುಧವಾರ ಹೇಳಿದ್ದಾರೆ.

ಡಿ.5 ರ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್ ನಡೆಸಲಾಗುವುದು. ಜನರು ಅಪಪ್ರಚಾರಕ್ಕೆ ಕಿವಿಗೊಡಬಾರದು. ಅನೇಕ ಸಂಘಟನೆಗಳಿಂದ ಬಂದ್ಗೆ ಬೆಂಬಲ ಘೋಷಿಸಿವೆ ಎಂದು ತಿಳಿಸಿದರು. ಇದೇ ವೇಳೆ, ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದ ವಾಟಾಳ್ ನಾಗರಾಜ್, ಸಿಎಂ ಯಡಿಯೂರಪ್ಪ ಯಾರನ್ನು ಕೇಳಿ ಈ ನಿಗಮ ಮಾಡಿದ್ದಾರೆ ? ಚುನಾವಣೆಗಾಗಿ ಮರಾಠಿ ಅಭಿವೃದ್ದಿ ನಿಗಮ ಮಾಡಿದ್ದಾರೆ ಎಂದು ಟೀಕಿಸಿದರು.