-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದಲ್ಲಿ ನಿಮ್ಮ ಮೇಕಪ್ ಕಿಟ್‌ನಲ್ಲಿ (Winter Makeup Kit) ಒಂದಿಷ್ಟು ಮಸ್ಟ್ ಸೌಂದರ್ಯವರ್ಧಕಗಳಿರಬೇಕು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್. ಹಾಗಾದಲ್ಲಿ ಈ ಮೇಕಪ್ ಕಿಟ್‌ನಲ್ಲಿ, ಏನೇನಿರಬೇಕು? ಯಾವುದೆಲ್ಲಾ ಸ್ಕಿನ್ ಫ್ರೆಂಡ್ಲಿ? ಇವುಗಳಿಂದ ಪ್ರಯೋಜನವೇನು? ಪಾತ್ರವೇನು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
ಚಳಿಗಾಲದಲ್ಲಿ ಇತರೆ ಸೀಸನ್‌ನಂತೆ ಎಲ್ಲಾ ಬಗೆಯ ಕಾಸ್ಮೆಟಿಕ್ಸ್ ಬಳಸಲು ಸಾಧ್ಯವಿಲ್ಲ! ಹೌದು. ತ್ವಚೆ ಒಣಗಿದಂತಾಗಬಹುದು. ಇಲ್ಲವೇ, ಬಿರುಕು ಮೂಡಬಹುದು. ಹಾಗಾಗಿ ಪ್ರತಿ ಹುಡುಗಿಯು ಕೆಲವು ಸೌಂದರ್ಯವರ್ಧಕಗಳನ್ನು ತಮ್ಮ ಮೇಕಪ್ ಕಿಟ್‌ನಲ್ಲಿರಿಸಿಕೊಳ್ಳುವುದು ಅಗತ್ಯ ಎನ್ನುತ್ತಾರೆ ಸೌಂದರ್ಯ ತಜ್ಞೆ ರಾಗಾ.
ಫ್ರೆಶ್ ಲುಕ್‌ಗಾಗಿ ಟಿಂಟ್ ಮಾಯಿಶ್ಚರೈಸರ್ ಇರಲಿ
ಈ ಸೀಸನ್‌ನಲ್ಲಿ ತ್ವಚೆಯು ಒಣಗಿದಂತಾಗಿರುತ್ತದೆ. ಮೇಕಪ್ ನಂತರ ಇನ್ನೂ ಡ್ರೈ ಆಗುತ್ತದೆ. ಹಾಗಾಗಿ ಮೇಕಪ್ ಆರಂಭದಲ್ಲಿ ಉತ್ತಮ ಗುಣಮಟ್ಟದ ಮಾಯಿಶ್ಚರೈಸರ್ ಬಳಸಬೇಕು. ಅದರಲ್ಲೂ ಟಿಂಟ್ ಮಾಯಿಶ್ಚರೈಸರ್ ಮುಖವನ್ನು ಫ್ರೆಶ್ ಆಗಿ ಕಾಣುವಂತೆ ಬಿಂಬಿಸುತ್ತದೆ. ಇದು ಮುಖ ಜಿಡ್ಡಾಗಿರುವಂತೆ ಬಿಂಬಿಸದು.
ಲಿಕ್ವಿಡ್ ಕ್ರೀಮ್ ಫೌಂಡೇಷನ್ ಪ್ರಾಮುಖ್ಯತೆ
ಯಾವುದೇ ಬ್ರಾಂಡ್‌ನ ಲಿಕ್ವಿಡ್ ಕ್ರೀಮ್ ಫೌಂಡೇಶನ್ ತ್ವಚೆಯನ್ನು ಫ್ರೆಶ್ಆಗಿ ಕಾಣುವಂತೆ ಮಾಡುತ್ತದೆ. ಡ್ರೈ ಆಗಿರುವ ಫೌಂಡೇಶನ್‌ಗಳು ಈ ಸೀಸನ್‌ಗೆ ಸೂಕ್ತವಲ್ಲ. ಲಿಕ್ವಿಡ್ ಕ್ರೀಮ್ ಬೇಸ್ಡ್ ಹಾಗೂ ಆಯಿಲ್ಬೇಸ್ಡ್ ಫೌಂಡೇಷನ್‌ಗಳು ಮಾಯಿಶ್ಚರೈಸರ್ ಅಂಶದಿಂದ ಕೂಡಿರುತ್ತವೆ. ಹಚ್ಚಿದಾಗ ಒಣಗಿದಂತೆ ಕಾಣಿಸುವುದಿಲ್ಲ.
ಗ್ಲಾಸಿ ಲಿಪ್ಸ್ಟಿಕ್/ಲಿಪ್‌ಬಾಮ್
ಈ ಸೀಸನ್‌ನಲ್ಲಿ ಆದಷ್ಟೂ ಗ್ಲಾಸಿ ಲಿಪ್ಸ್ಟಿಕ್‌ಗಳನ್ನು ಲೇಪಿಸಿ. ಇವು ಮಾಯಿಶ್ಚರೈಸರ್ ಅಂಶ ಹೊಂದಿರುತ್ತವೆ. ತುಟಿಯ ಚರ್ಮ ಬಿರುಕಾಗದಂತೆ ತಡೆಯುತ್ತವೆ. ಲಿಪ್ಸ್ಟಿಕ್ ಹಚ್ಚಬೇಕಾದಲ್ಲಿ, ಮೊದಲು ಲಿಪ್ ಬಾಮ್ ಹಚ್ಚಿ, ಕೆಲ ನಿಮಿಷದ ನಂತರ ಹಚ್ಚಿ.
ಸನ್‌ಸ್ಕ್ರೀನ್ ಲೋಷನ್
ಈ ಸೀಸನ್‌ನಲ್ಲಿ ಹೊರಗಡೆ ಹೋಗುವಾಗ ಮರೆಯದೇ ಸನ್‌ಸ್ಕ್ರೀನ್ ಲೇಪಿಸಿ. ಇದೀಗ ವ್ಯಾನಿಟಿಯಲ್ಲೂ ಕ್ಯಾರಿ ಮಾಡಬಹುದಾದ ಕಾಂಪಾಕ್ಟ್ ಸನ್‌ಸ್ಕ್ರೀನ್‌ಗಳು ದೊರೆಯುತ್ತವೆ.
ಈ ಸುದ್ದಿಯನ್ನೂ ಓದಿ | Balenciaga Bubble Outfit Fashion: ವೈರಲ್ ಆಯ್ತು ಪ್ಯಾಕಿಂಗ್‌ಗೆ ಬಳಸುವ ಬಬಲ್ ವ್ರಾಪ್ ಔಟ್‌ಫಿಟ್!
ತ್ವಚೆಯನ್ನು ಸ್ವಚ್ಛವಾಗಿರಿಸಲು ಕ್ಲೆನ್ಸರ್
ಚಳಿಗೆ ಮುಖ ವಾಷ್ ಮಾಡಲು ಬೇಸರವಾದಲ್ಲಿ, ಕ್ಲೆನ್ಸರ್ ಬಳಸಿ. ಧೂಳು, ಬಿಸಿಲಿನಲ್ಲಿ ಓಡಾಡಿದ ನಂತರ, ಹತ್ತಿಯನ್ನು ಕ್ಲೆನ್ಸರ್‌ನಲ್ಲಿ ಅದ್ದಿ, ಮುಖವನ್ನು ಕ್ಲೆನ್ಸ್ ಮಾಡಿಕೊಳ್ಳಬಹುದು. ಇದನ್ನು ಮರೆಯದೇ ನಿಮ್ಮ ಮೇಕಪ್ ಕಿಟ್‌ನಲ್ಲಿರಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)