Wednesday, 30th October 2024

ಒಂಟಿ ಮಹಿಳೆಯ ಬರ್ಬರ ಹತ್ಯೆ

ಆನೇಕಲ್: ಸಿಂಗೇನ ಅಗ್ರಹಾರದಲ್ಲಿ ಒಂಟಿ ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮೃತ ಮಹಿಳೆಯನ್ನು ಶ್ವೇತಾ ಎಂದು ಗುರುತಿಸಲಾಗಿದೆ. ಬೆಂಗಳೂರು ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರದಲ್ಲಿ ಘಟನೆ ನಡೆದಿದೆ. ದುಸ್ಕರ್ಮಿಗಳು ಚಾಕುವಿನಿಂದ ಎದೆಗೆ ಚುಚ್ಚಿ ಮಹಿಳೆ ಹತ್ಯೆ ಮಾಡಿದ್ದಾರೆ. ಬಳಿಕ, ಮಹಿಳೆಯ ಕತ್ತಲ್ಲಿದ್ದ ಮಾಂಗಲ್ಯ ಸರ, ಮನೆಯ ಕೆಲ ವಸ್ತುಗಳು ಕದ್ದು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಎಸ್‌ಪಿ ರವಿ ಡಿ.ಚನ್ನಣ್ಣನವರ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.