-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇಯರ್ ಎಂಡ್ ಸೇಲ್ ಶಾಪಿಂಗ್ (Year End Sale 2024) ಬಹುತೇಕ ಮಾಲ್ಗಳಲ್ಲಿ ಶುರುವಾಗಿದೆ. ಹೌದು, ಈ ಸೇಲ್ನಲ್ಲಿ ವಿಶೇಷವಾಗಿ ಫ್ಯಾಷನ್ವೇರ್ಸ್ ಹಾಗೂ ಆಕ್ಸೆಸರೀಸ್ಗಳ ಮೇಲೆ ಶೇಕಡಾ 50, 65, 70 ರಷ್ಟು ಕಡಿತ ಹಾಗೂ ಆಫರ್ಗಳನ್ನು ನೀಡಲಾಗುತ್ತಿದ್ದು, ಒಂದಿಷ್ಟು ಜಾಣತನ ತೋರಿದಲ್ಲಿ, ಒಳ್ಳೆಯ ಶಾಪಿಂಗ್ ಮಾಡಬಹುದು ಎನ್ನುತ್ತಾರೆ.
ಗ್ರಾಹಕರನ್ನು ಸೆಳೆಯುತ್ತಿರುವ ಇಯರ್ ಎಂಡ್ ಸೇಲ್
ಇನ್ನು, ಸ್ಟೈಲಿಸ್ಟ್ ರಿಯಾಜ್ ಪ್ರಕಾರ, ಇದು ಗ್ರಾಹಕರನ್ನು ಆಕರ್ಷಿಸುವ ಟ್ರಿಕ್ಸ್. ಇದರೊಂದಿಗೆ ರೆಗ್ಯುಲರ್ ಗ್ರಾಹಕರಿಗೆ ಡಿಸ್ಕೌಂಟ್ಸ್ ಕೂಡ ಘೋಷಿಸಲಾಗುತ್ತಿದೆ. ಇವೆಲ್ಲಾ ಇಯರ್ ಎಂಡ್ ಸೇಲ್ ಸೀಸನ್ ಸೇಲ್ ತಂತ್ರ ಎನ್ನುತ್ತಾರೆ.
ಈ ಶಾಪಿಂಗ್ನ ಸದುಪಯೋಗಪಡಿಸಿಕೊಳ್ಳಬೇಕೆನ್ನುವವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಶಾಪಿಂಗ್ ಎಕ್ಸ್ಪರ್ಟ್.
ಮೊದಲು ವಿಂಡೋ ಶಾಪಿಂಗ್ ಪ್ಲಾನ್ ಮಾಡಿ
ಇಯರ್ ಎಂಡ್ ಸೇಲ್ನಲ್ಲಿ ಯಾವುದೇ ಫ್ಯಾಷನ್ವೇರ್ಸ್ ಖರೀದಿಸ ಬೇಕಿದ್ದಲ್ಲಿ ಮೊದಲು ಏನೂ ಕೊಳ್ಳದೇ, ಗಮನಿಸುವ ವಿಂಡೋ ಶಾಪಿಂಗ್ ಮಾಡಿ. ನಂತರ, ಅಗತ್ಯವಿರುವುದನ್ನು ಖರೀದಿಸಿ.
ಚೆಕ್ ಮಾಡಿ ಖರೀದಿಸಿ
ಈ ಇಯರ್ ಎಂಡ್ ಸೇಲ್ನಲ್ಲಿ ಆದಷ್ಟೂ ಕಳೆದ ಸೀಸನ್ನ ಖರೀದಿಗೊಳ್ಳದ ಅಳಿದುಳಿದ ಫ್ಯಾಷನ್ವೇರ್ಗಳ ಸಂಗಮವೇ ಇರುತ್ತದೆ. ಹಾಗಾಗಿ ಚೆಕ್ ಮಾಡಿ, ನೋಡಿ ಖರೀದಿಸಿ.
ಡಿಸ್ಕೌಂಟ್ಸ್ -ಗಿಫ್ಟ್ ವೋಚರ್ ಅಮಿಷಕ್ಕೆ ಬಲಿಯಾಗಬೇಡಿ
ಒಂದು ಕೊಂಡರೇ 50 ಪರ್ಸೆಂಟ್, ಎರಡು ಕೊಂಡರೇ ಒಂದು ಫ್ರೀ ಎಂಬೆಲ್ಲಾ ಆಫರ್ಸ್ ಹಾಗೂ ಇಂತಿಷ್ಟು ಹೆಚ್ಚು ಖರೀದಿಸಿದಲ್ಲಿ ಗಿಫ್ಟ್ ವೋಚರ್ ದೊರೆಯುತ್ತದೆ ಎಂಬ ಅಮಿಷಕ್ಕೆ ಬಲಿಯಾಗಬೇಡಿ. ಇದು ಸುಮ್ಮನೆ ದುಂದು ವೆಚ್ಚಕ್ಕೆ ಕಾರಣವಾಗುತ್ತದೆ.
ತೀರಾ ಕಡಿಮೆ ಬೆಲೆಗೆ ಸಿಕ್ಕಿತೆಂದು ಖರೀದಿಸಬೇಡಿ
ಕಳೆದ ಸೀಸನ್ನ ಉಡುಪುಗಳು ತೀರಾ ಕಡಿಮೆ ಬೆಲೆಗೆ ದೊರೆಯುತ್ತಿದೆ ಎಂದು ಖರೀದಿಸಬೇಡಿ. ಅವನ್ನು ಮುಂದಿನ ವರ್ಷದವರೆಗೂ ಧರಿಸಲಾಗುವುದಿಲ್ಲ! ಅಲ್ಲದೇ ನಿಮ್ಮ ತೂಕದಲ್ಲೂ ಏರಿಳಿತವಿದ್ದಲ್ಲಿ ಸುಮ್ಮನೆ ವಾರ್ಡ್ರೋಬ್ನಲ್ಲಿ ಶೋ ಇಡಬೇಕಾದೀತು!
ಈ ಸುದ್ದಿಯನ್ನೂ ಓದಿ | Celebrities Christmas Fashion 2024: ಹೀಗಿತ್ತು ಸೆಲೆಬ್ರೆಟಿಗಳ ಕ್ರಿಸ್ಮಸ್ ಫ್ಯಾಷನ್ ವೇರ್ಸ್
ಲೇಯರ್ ಲುಕ್ ಫ್ಯಾಷನ್ವೇರ್ಸ್ ಆಯ್ಕೆ
ಲೇಯರ್ ಲುಕ್ಗೆ ಸಾಥ್ ನೀಡುವ ಫ್ಯಾಷನ್ವೇರ್ಸ್ ಆಯ್ಕೆ ಮಾಡಿ. ಇದು ಸೀಸನ್ಗೆ ಮ್ಯಾಚ್ ಆಗುವುದಲ್ಲದೇ, ಯಾವಾಗ ಬೇಕಾದರೂ ಇತರೇ ಉಡುಪುಗಳೊಂದಿಗೆ ಮಿಕ್ಸ್ ಮ್ಯಾಚ್ ಮಾಡಿ ಧರಿಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)