ಕೋಹಿಮಾ: ನಲುವತ್ತೈದು ವರ್ಷದ ಬಳಿಕ ಮತ್ತೆ ಮಹಿಳಾ ಸದಸ್ಯೆ ಸಂಸತ್ತಿಗೆ ಚುನಾಯಿತರಾಗಲಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್.ಪಾಂಗ್ನಾನ್ ಕೊನ್ಯಾಕ್ (44) ಅವರು ರಾಜ್ಯದಿಂದ ರಾಜ್ಯಸಭೆ ಯ ಏಕೈಕ ಸ್ಥಾನಕ್ಕೆ ಈ ತಿಂಗಳ 31ರಂದು ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾಗಿರುತ್ತಾರೆ. 1977ರಲ್ಲಿ ರಾನೊ ಎಂ ಶಾಯಿಝಾ ನಾಗಾಲ್ಯಾಂಡ್ನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ನಾಲ್ಕು ದಶಕಗಳ ಬಳಿಕ ಕೊನ್ಯಾಕ್ ಅವರ ಹೆಸರು ನಾಲ್ಕು ರಾಜ್ಯ ಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿದೆ. ಬಿಜೆಪಿ ಆಡಳಿತಾರೂಢ ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರಸ್ಸಿವ್ ಪಾರ್ಟಿಯ ಹಿರಿಯ […]