ನವದೆಹಲಿ: ಕಳೆದ ಅಕ್ಟೋಬರ್ ನಲ್ಲಿ ಪತಿಯನ್ನು ಕಳೆದುಕೊಂಡ ಮಹಿಳೆಗೆ ಗರ್ಭಪಾತ ಮಾಡಲು ಅನುಮತಿ ನೀಡಿದ ಹಿಂದಿನ ಆದೇಶವನ್ನು ದೆಹಲಿ ಹೈಕೋರ್ಟ್ ಮಂಗಳವಾರ ಹಿಂತೆಗೆದುಕೊಂಡಿದೆ. ಆದೇಶ ಹಿಂತೆಗೆದುಕೊಳ್ಳಲಾಗಿದೆ’ ಎಂದು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಹೇಳಿದರು. ಮಗು ಬದುಕುಳಿಯುವ ಅವಕಾಶವಿದೆ ಮತ್ತು ಹುಟ್ಟಲಿರುವ ಮಗುವಿನ ಜೀವಿಸುವ ಹಕ್ಕನ್ನು ರಕ್ಷಿಸಲು ನ್ಯಾಯಾಲಯವು ಪರಿಗಣಿಸಬೇಕು ಎಂಬ ಆಧಾರದ ಮೇಲೆ ಗರ್ಭಪಾತಕ್ಕೆ ಅನುಮತಿ ನೀಡಿದ ಜನವರಿ 4 ರ ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಕೇಂದ್ರವು ಅರ್ಜಿ ಸಲ್ಲಿಸಿದ ನಂತರ ನ್ಯಾಯಮೂರ್ತಿ ಪ್ರಸಾದ್ ಅವರ ತೀರ್ಪು ಬಂದಿದೆ. […]