ಪ್ರಸ್ತುತ ರಂಗನಾಥ್ ಎನ್.ವಾಲ್ಮೀಕಿ ಸಾಧನೆ ಎಂಬುದು ಸಾಧಕನ ಸ್ವತ್ತು ವಿನಃ ಸೋಮಾರಿಯ ಸ್ವತ್ತಲ್ಲ ಎಂಬ ಮಾತು ಸದಾ ವಾಸ್ತವ ಹಾಗೂ ಸಾರ್ವಕಾಲಿಕ ಸತ್ಯವಾದ ಮಾತು. ಈ ಪ್ರಪಂಚದಲ್ಲಿ ಸಾಧಕನಿಗೆ ತುಂಬಾ ಗೌರವ ಹಾಗೂ ಬೆಲೆ. ಹೀಗಾಗಿ ನಾವು ಈ ಸ್ಪರ್ಧಾತ್ಮಕ ಯುಗದಲ್ಲಿ ಗೆಲ್ಲಬೇಕಾದರೆ ತುಂಬಾ ಶ್ರಮಿಸಬೇಕು. ನಮ್ಮ ಬದುಕಿನಲ್ಲಿ ನಿರ್ದಿಷ್ಟ ಗುರಿಯಿಟ್ಟುಕೊಂಡು ಆ ಗುರಿ ಸಾಧನೆಗೆ ಯೋಜನಾ ಬದ್ಧವಾಗಿ ನಿರಂತರವಾಗಿ ಪ್ರಯತ್ನ ಮಾಡಬೇಕು. ಯಾವುದೇ ಗೆಲುವು ಸುಲಭವಾಗಿ ಸಿಗದು. ಅಬ್ರಹಾಂ ಲಿಂಕನ್ ಅಮೇರಿಕಾದ ಅಧ್ಯಕ್ಷರಾಗುವ ಮುನ್ನ ಅದೆಷ್ಟು […]